ಪವರ್ ಆಶ್ರಯದಲ್ಲಿ ‘ಚಾರ್ಟರ್ ಡೇ’ ಹಾಗೂ ‘ಮಹಿಳಾ ದಿನಾಚರಣೆ’

​​
ಉಡುಪಿ: ಪವರ್ ಫ್ಲಾಟ್‌ ಫಾರಂ ಆಫ್ ವುಮೆನ್ ಎಂಟರ್‌ಫ್ರಿನಿಯರ್ಸ್(ರಿ) ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಚಾರ್ಟರ್‌ ಡೇ ಯು ಮಣಿಪಾಲದ ಕಂಟ್ರಿ ಇನ್ ಸಭಾಂಗಣದಲ್ಲಿ ಬುಧವಾರ ನಡೆಯಿತು.​ ಕಾರ್ಯಕ್ರಮದ ಉದ್ಘಾಟನೆಯನ್ನು ಬಹುಭಾಷಾ ನಟಿ ವಿನಯ ಪ್ರಸಾದ್ ಅವರು ನೆರವೇರಿಸಿದರು.

ಪವರ್ ಸಂಸ್ಥೆಯ 2022-23ನೇ ಸಾಲಿನ ಅಧ್ಯಕ್ಷರಾಗಿ ಪೂನಂ ಶೆಟ್ಟಿ, ಕಾರ್ಯದರ್ಶಿಯಾಗಿ ಅರ್ಚನಾ ರಾವ್, ಕೋಶಾಧಿಕಾರಿಯಾಗಿ ಪ್ರತಿಭಾ ಆರ್.ವಿ., ಜೊತೆ ಕಾರ್ಯದರ್ಶಿಯಾಗಿ ತೃಪ್ತಿ ನಾಯಕ್, ಉಪಾಧ್ಯಕ್ಷರಾಗಿ ಸುವರ್ಶಾ ಮಿನ್ಜ್ ಹಾಗೂ ಶಾಲಿನಿ ಬಂಗೇರ ಪದಗ್ರಹಣ ಸ್ವೀಕರಿಸಿದರು.

ಈ ಸಂದರ್ಭ ಸಮಾಜ ಕಾರ್ಯಕರ್ತೆ ರಾಧಾ ​​ದಾಸ್ ಹಾಗೂ ನಟಿ ವಿನಯ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.​ ಕಾರ್ಯಕ್ರಮದಲ್ಲಿ ಪವರ್ ಸಂಸ್ಥೆಯ ಮಾಜಿ ಅಧ್ಯಕ್ಷೆ ತಾರಾ ತಿಮ್ಮಯ್ಯ, ಸುಗುಣಾ ಶಂಕರ್, ಪ್ರಿಯಾ ಕಾಮತ್‌ ಮತ್ತಿತರು ಉಪಸ್ಥಿತರಿದ್ದರು.​ ಪವರ್ ಸಂಸ್ಥೆಯ ಮಾಜಿ ಅಧ್ಯಕ್ಷೆ ತಾರಾ ತಿಮ್ಮಯ್ಯ ಸ್ವಾಗತಿಸಿ, ಉಪಾಧ್ಯಕ್ಷೆ ಸುವರ್ಶ ಮಿನ್ಜ್ ವಂದಿಸಿದರು.

 
 
 
 
 
 
 
 
 
 
 

Leave a Reply