Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ಸಾಲಿಗ್ರಾಮಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ರಾಜ್ಯಾಧ್ಯಕ್ಷರ ಭೇಟಿ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಇದರ ರಾಜ್ಯಾಧ್ಯಕ್ಷ ಶ್ರೀ ಅಶೋಕ್ ಹಾರನಹಳ್ಳಿ ಇವರು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರನ್ನು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಬ್ರಾಹ್ಮಣ ಮಹಾ ಸಭಾ ಸಾಲಿಗ್ರಾಮ ವಲಯದ ಪದಾಧಿಕಾರಿಗಳಾದ ಶ್ರೀ ಯಂ ಶಿವರಾಮ ಉಡುಪ, ಪಟ್ಟಾಭಿರಾಮ ಸೋಮಯಾಜಿ, ಸುಬ್ರಾಯ ಉರಾಳ, ಕೆ. ರಾಜಾರಾಮ ಐತಾಳ, ಸತೀಶ ಉಡುಪ ,ರಾಜ್ಯ ಕಾಯ೯ಕಾರಿ ಸಮಿತಿ ಸದಸ್ಯರಾದ ಶ್ರೀ ತಾರಾನಾಥ ಹೊಳ್ಳ ಮತ್ತಿತರರು ಸ್ವಾಗತಿಸಿದರು.

ಶ್ರೀ ದೇವಳದ ಸಂಪ್ರದಾಯದಂತೆ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ .ಎಸ್. ಕಾರಂತರು ಗೌರವಿಸಿದರು. ರಾಜ್ಯ ಸಂಘದ ಪದಾಧಿಕಾರಿಗಳಾದ ಶ್ರೀ ರಾಘವೇಂದ್ರ ಭಟ್, ಜಯಸಿಂಹ, ಪೊಳಲಿ ತಂತ್ರಿಗಳನ್ನು ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಕೂಟ ಮಹಾ ಜಗತ್ತು ರಿ ಸಾಲಿಗ್ರಾಮ ಇದರ ಅಧ್ಯಕ್ಷ ಶ್ರೀ ಸತೀಶ ಹಂದೆ, ದೇವಳದ ಕಾಯ೯ದಶಿ೯ ಲಕ್ಷ್ಮೀನಾರಾಯಣ ತುಂಗ, ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆಯ ಕಾಯ೯ದಶಿ೯ ಮಹಾಬಲ ಹೇಳೆ೯, ಹಾಗೂ ಪದಾಧಿಕಾರಿಗಳು, ಉಡುಪಿ ಕೂ. ಮ. ಜ. ದ ಅಧ್ಯಕ್ಷ ಶ್ರೀ ಗಣೇಶ್, ಕುಂದಾಪುರ ತಾಲೂಕು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಶ್ರೀ ಕೃಷ್ಣಾನಂದ ಛಾತ್ರ ಹಾಗೂ ಅಪಾರ ಸಂಖ್ಯೆಯ ಸಮಾಜ ಬಂಧುಗಳು ಉಪಸ್ಥಿತರಿದ್ದರು.

 ಬ್ರಾಹ್ಮಣ ಸಂಘಟನೆಯನ್ನು ಬಲ ಪಡಿಸಬೇಕಾದ ಅನಿವಾರ್ಯತೆ ಹಾಗೂ ಕರ್ತವ್ಯ ಬಹಳ ಮುಖ್ಯ. ಸಂಘಟನೆಯ ಬಲವರ್ಧನೆಗೆ ನಾವು ಬದ್ದರಾಗಬೇಕು ಎಂದು ಅಧ್ಯಕ್ಷ ಶ್ರೀ ಅಶೋಕ ಹಾರನಹಳ್ಳಿ ಹೇಳಿದರು.

ಶ್ರೀ ದೇವಳದ ಸಿಬ್ಬಂದಿ ವರ್ಗದವರು ಹಾಗೂ ಅಚ೯ಕ ವೃಂದದವರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!