ಕಾಲೇಜು ವಾರ್ಷಿಕಾಂಕ ಸ್ಪರ್ಧೆ~ ಯು.ಪಿ.ಎಂ.ಸಿಯ ಸುಪ್ರಭಾಕ್ಕೆ ದ್ವಿತೀಯ ಸ್ಥಾನ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಾರ್ಷಿಕಾಂಕ ‘ಸುಪ್ರಭಾ’ 2019-20 ರ ಸಂಚಿಕೆಗೆ ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಕಾಲೇಜು ವಾರ್ಷಿಕಾಂಕ ಸ್ಪರ್ಧೆಯ ‘ಬಿ’ ವಿಭಾಗದಲ್ಲಿ ದ್ವಿತೀಯ ಸ್ಥಾನ ಲಭಿಸಿದೆ. 

ಸತತ 12 ವರ್ಷಗಳಿಂದ ಈ ಸಂಚಿಕೆಯು ಬಹುಮಾನವನ್ನು ಗಳಿಸುತ್ತಾ ಬಂದಿದ್ದು ಕಾಲೇಜು ಉಪನ್ಯಾಸಕರ, ವಿದ್ಯಾರ್ಥಿಗಳ ಕಲಾ ಕೌಶಲಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಕಾಲೇಜು ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

 
 
 
 
 
 
 
 
 
 
 

Leave a Reply