ಸಾಲುಮರದ ತಿಮ್ಮಕ್ಕ 22ರಂದು ಉಡುಪಿಗೆ

ವೃಕ್ಷಮಾತೆ ನಾಡೋಜ ಸಾಲುಮರದ ತಿಮ್ಮಕ್ಕನವರು ನಾಳೆ ಮಧ್ಯಾಹ್ನ ಉಡುಪಿಗೆ.( ಶನಿವಾರ 22 – 07-2023)

ಉಡುಪಿಗೂ ಸಾಲುಮರದ ತಿಮ್ಮಕ್ಕನವರಿಗೂ ಅವಿನಾಭಾವ ಸಂಬಂಧ.

# ಹಿಂದೆ ತಿಮ್ಮಕ್ಕ ಅಜ್ಜಿಯು ತಾನು ಆರ್ಥಿಕವಾಗಿ ಸಂಕಷ್ಟದಲ್ಲಿರುವುದನ್ನು ಯಾರೊಡನೆಯೂ ಹೇಳಿಕೊಳ್ಳದಿದ್ದರೂ ಅರ್ಥ ಮಾಡಿಕೊಂಡ ಉಡುಪಿಯ ಅವಿನಾಶ್ ಕಾಮತ್ ನೇತೃತ್ವದ ತಂಡವು ನೆರಳು ನೆರವು ಯೋಜನೆಯ ಮೂಲಕ ಧನಸಂಗ್ರಹಿಸಿ ನೀಡಿ – ಆ ಮೂಲಕ ಕನ್ನಡ ಭೂಮಿಗೆ ಈ ವನದೇವತೆಯು ನೀಡಿರುವ ಅಗಾಧ ಕೊಡುಗೆಯ ಋಣವನ್ನು ಗೌರವದಿಂದ ನೆನಪಿಸಿ ಕೊಂಡರು.

# ಇನ್ನು ಉಡುಪಿಯಲ್ಲಿ ನಿರಂತರವಾಗಿ ಸಾಂಸ್ಕೃತಿಕ ಸಾಹಿತ್ಯಕ ಕಾರ್ಯಕ್ರಮಗಳನ್ನು ನೀಡುತ್ತಿರುವ ಸಂಸ್ಕೃತಿ ವಿಶ್ವ ಪ್ರತಿಷ್ಠಾನವನ್ನು ತಿಮ್ಮಕ್ಕ ಅಜ್ಜಿ ಉದ್ಘಾಟಿಸಿರುವುದು ದಾಖಲಾತಿ.

# ಸಾಲುಮರದ ತಿಮ್ಮಕ್ಕ ಅವರ ಕುರಿತು ಡಾ.ಕಾತ್ಯಾಯಿನಿ ಕುಂಜಿಬೆಟ್ಟು ರಚಿಸಿದ ಗೀತೆಯು ಗಿರೀಶ್ ಉಡುಪಿ ರಾಗಸಂಯೋಜನೆಯಲ್ಲಿ ಸಂಗೀತ ಬಾಲಚಂದ್ರ ಉಡುಪಿ ಅವರ ಕಂಠದಲ್ಲಿ ಧ್ವನಿಮುದ್ರಣಗೊಂಡು ಜನಪ್ರಿಯಗೊಂಡಿತು. *

ಸಾಲುಮರದ ತಿಮ್ಮಕ್ಕ ಅವರ ಕುರಿತು 24 ನಿಮಿಷದ ಸಾಕ್ಷ್ಯಚಿತ್ರ  ರವಿರಾಜ್ ಎಚ್.ಪಿ  ಪರಿಕಲ್ಪನೆಯಲ್ಲಿ, ಅವಿನಾಶ್ ಕಾಮತ್ ಧ್ವನಿಯಲ್ಲಿ, ಹರೀಶ್ ತುಂಗ ಅವರ ಸಂಕಲನದಲ್ಲಿ ರಚನೆಯಾಗಿ ಅಜ್ಜಿಯ ಜೀವನ ಚರಿತ್ರೆ ಜಗತ್ತಿಗೆ ಪ್ರಸಾರಗೊಂಡದ್ದು ಉಡುಪಿ ಯಿಂದಲೇ . ಇವೆಲ್ಲದರ ಹಿಂದಿರುವುದು ಅಜ್ಜಿಯ ಪ್ರೀತಿಯ ಮಗ ಉಮೇಶ್ ವನಸಿರಿಯವರ ಪ್ರೋತ್ಸಾಹ .

ನಾಳೆ – ಶನಿವಾರ ಜುಲೈ 22, 2023 . ಅಜ್ಜಿ ಮಧ್ಯಾಹ್ನ 2.45ಕ್ಕೆ ಉಡುಪಿಯ ಎಂ.ಜಿ.ಎಂ ಕಾಲೇಜಿನ ಮುಂಭಾಗದಲ್ಲಿರುವ ಬುಡ್ನಾರಿನ ನಮ್ಮ ಮನೆಗೆ ಬಂದು ಮನೆಯ ಮುಂಭಾಗದ ದೈವಸ್ಥಾನದ ಖಾಲಿ ಆವರಣದಲ್ಲಿ ‘ನಮ್ಮ ಮನೆ ನಮ್ಮ ಮರ’ ತಂಡದ ಆಶ್ರಯದಲ್ಲಿ ತಮ್ಮ ಅಮೃತ ಹಸ್ತದಲ್ಲಿ ಗಿಡಗಳನ್ನು ನೆಡಲಿದ್ದಾರೆ.  ಸಾಧ್ಯವಾದಲ್ಲಿ ನೀವೂ ಬನ್ನಿ…

ಹಾಡು ಮತ್ತು ಸಾಕ್ಷ್ಯಚಿತ್ರ ಇದರ ಲಿಂಕ್ ಇಲ್ಲಿದೆ ನೋಡಿ

 
 
 
 
 
 
 
 
 
 
 

Leave a Reply