ಹೆಸರಿಗೊಂದು ಅಜೆಕಾರು~ ಹೋಗಿ ಬನ್ನಿ ಶೇಖರಣ್ಣ: ~ರಾಂ ಅಜೆಕಾರು….

ಆಗಷ್ಟೇ ಡಿಗ್ರಿ ಕಲಿಯುತಿದ್ದಾಗ ಶೇಖರ ಅಜೆಕಾರು  ಹೆಸರಿನೊಡನೆ ಊರಿನ ಹೆಸರಿಡಬೇಕು ಎಂದು ಹೇಳುತಿದ್ದರು. ಆಗಲೇ ಹೆಸರಿಗೊಂದು ರಾಂ ಅಜೆಕಾರು ಎಂದು ಪತ್ರಿಕೆಗಳಲ್ಲಿ ಬರೆಯ ತೊಡಗಿದೆ. ಪ್ರತಿ ಬಾರಿ ಅಜೆಕಾರು ಕೇಳುವಾಗ ಶೇಖರ ಅಜೆಕಾರು ವ್ಯಕ್ತಿ ಎಲ್ಲರ ಮನದಲ್ಲಿ ಬಾಯಲ್ಲಿ ಚಿರಪರಿಚಿತ.

ಶೇಖರ ಅಜೆಕಾರು ಪತ್ರಕರ್ತರಾಗಿದ್ದರು ನೇರವಾಗಿ ಮಾತನಾಡುವ ವ್ಯಕ್ತಿತ್ವ. ಯಾರನ್ನು ಕೂಡ  ದ್ವೇಷಿಸಿದವರಲ್ಲ. ಆದರೆ ಸಾಹಿತ್ಯ ಕ್ಕಾಗಿಬದುಕನ್ನೆ ಮುಡುಪಾಗಿಟ್ಟವರು.  ಮೊದಲ ಬೆಳದಿಂಗಳ ಸಮ್ಮೇಳನದಲ್ಲಿ  ಕವಿ ದುಂಡಿರಾಜರ ಜೊತೆ ವೇದಿಕೆ ಹಂಚಿಕೊಂಡ ಖುಷಿ ನನಗಿತ್ತು. ನನ್ನ ಬದುಕಿಗೆ ಮೊದಲ ವೇದಿಕೆಯನ್ನು ಕಲ್ಪಿಸಿಕೊಟ್ಟ ವ್ಯಕ್ತಿ ಅವರಾಗಿದ್ದರು.

ಅಜೆಕಾರಿನಿಂದ ಸುಮಾರು ನಾಲ್ಕು ಕಿ.ಮೀ ದೂರದ  ಕುರ್ಪಾಡಿ ತುಂಬಾ ತೀರಾ ಹಳ್ಳಿ . ಚಿಕ್ಕ ಹಂಚಿನ ಹಳೆಯ ಮನೆ. ಅಲ್ಲಿ ತಂದೆ ತಾಯಿ, ಅವರ ಶ್ರೀಮತಿ ಇಬ್ಬರು ಮಕ್ಕಳಿದ್ದಾರೆ. ಸಾಹಿತ್ಯದ ಬದುಕೇ ಅವರ ಬದುಕು. ಜೀವನದಲ್ಲಿ ಹಣ ಗಳಿಸಿದವರಲ್ಲ .ಆದರೆ ಏಕಾಂಗಿಯಾಗಿ ಸಾಹಿತ್ಯ ಸಮ್ಮೇಳನ ಸಂಘಟಿಸಿ ರಾಜ್ಯದಾದ್ಯಂತ ಮನೆಮಾತಾಗಿದ್ದವರು.

ಸ್ಕೂಟಿಗೊಂದು ಕನ್ನಡದ ಶಾಲು : ಅವರ ಬಳಸುತಿದ್ದ ಸ್ಕೂಟಿ, ಅದಕ್ಕೊಂದು ಕನ್ನಡದ ಬಾವುಟ ಕಟ್ಟಿ ಮಂಗಳೂರು ಕಾರ್ಕಳ ಮೂಡುಬಿದಿರೆ ಸೇರಿದಂತೆ ಉಡುಪಿ ಜಿಲ್ಲೆಯಾದ್ಯಂತ ಸಂಚರಿಸುತಿದ್ದರು. ಸ್ಕೂಟಿ ನಿಲ್ಲಿಸಿದರ ಕನ್ನಡದ ಶಾಲು ಇರುವ ಅವರ ಸ್ಕೂಟಿ ಉಭಯ ಜಿಲ್ಲೆಗಳಲ್ಲಿ ಚಿರಪರಿಚಿತವಾಗಿತ್ತು.

ಕೆಲವೊಮ್ಮೆ ಎದುರು ಸಿಕ್ಕಾಗ ಎರಡು ಪುಸ್ತಕ ಓದಲು ಕೊಡುತಿದ್ದರು. ರಾಜ್ಯದ ಮೂಲೆ ಮೂಲೆಗಳಲ್ಲಿ ಸಾಹಿತ್ಯ, ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಅವರಲ್ಲಿತ್ತು…

ಯಕ್ಷಗಾನವಿರಲಿ ರಾಜ್ಯದಲ್ಲಿ ಸಾಹಿತ್ಯ ಸಮ್ಮೇಳನವಿರಲಿ ಎದುರಿನ ಸೀಟ್ ನಲ್ಲಿ ತನ್ನ ಮಕ್ಕಳೋಂದಿಗೆ ಯಕ್ಷಗಾನ ನೋಡಿ ಖುಷಿ ಪಡುತಿದ್ದವರು. ಸಾಹಿತ್ಯ ಸಮ್ಮೇಳನ ವಿದ್ದರೆ ಗೋಷ್ಠಿಗಳನ್ನು ಕೂತು ಕೇಳುತಿದ್ದರು. ಕೆಲವು ಬಾರಿ ನನ್ನಲ್ಲಿ ಮುನಿಸಿಕೊಂಡದ್ದು ಇದೆ.

ಸಾಹಿತ್ಯ ಸೇವೆಯಲ್ಲಿ ಎಲ್ಲರ ಜೊತೆ ತೊಡಗಿಸಿಕೊಳ್ಳಲು  ಹೇಳುತಿದ್ದಾಗ ಶೇಖರಣ್ಣ ಒಪ್ಪುತ್ತಿರಲಿಲ್ಲ. ಏಕೆಂದರೆ ಅವರ ಸಂಘಟಕರಾಗಿ ಎಲ್ಲಾ ಕಡೆಗಳಲ್ಲೂ ಏಕಾಂಗಿಯಾಗಿ  ಹಗಲಿರುಳು ಓಡಾಟ ನಡೆಸುವ ವ್ಯಕ್ತಿ. ಆದರೂ ಕೆಲಸವನ್ನು ಹಂಚಿಕೊಳ್ಳೊಣವೆಂದರೆ ನಾನೆ ಮಾಡಿದರೆ ಮಾತ್ರ ಸಂತೃಪ್ತಿ ಎಂದು ಜಾರಿ ಹೋಗುತಿದ್ದರು.

ನನ್ನ ಕೊನೆಯ ಕಾರ್ಯಕ್ರಮ. ಪ್ರತಿ ಬಾರಿ ಸಾಹಿತ್ಯ ಸಮ್ಮೇಳನ,ಕವಿಗೋಷ್ಠಿಗಳಿಗೆ ನನಗೆ ಪ್ರೀತಿಯಿಂದ ಕರೆಯುತ್ತಿದ್ದರು. ಅನೇಕ ಬಾರಿ ಪಾಲ್ಗೊಂಡಿದ್ದು, ಪತ್ರಕರ್ತನಾಗಿದ್ದ ಕಾರಣ ಬೇರೆ ಕಾರ್ಯಕ್ರಮಗಳ ಒತ್ತಡವಿದ್ದ ಕಾರಣ ಭಾಗವಹಿಸಲು ಕಷ್ಟವಾಗುತ್ತಿತ್ತು. ಪುನರೂರಿನಲ್ಲಿ ನಡೆದ ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಛಾಯಾಚಿತ್ರಗಳನ್ನು ತೆಗೆದಿದ್ದೆ. ತುಂಬಾ ಖುಷಿ ಪಟ್ಟಿದ್ದರು.

ಕೆಲವೊಮ್ಮೆ ಅವರ ಸಾಹಿತ್ಯ ಪುಸ್ತಕಗಳಿಗೆ ನನ್ನ ತುಳುನಾಡಿಗೆ ಸಂಬಂಧಿತ ಚಿತ್ರಗಳನ್ನು ಇತ್ತೀಚೆಗೆ ಕೇಳಿದ್ದರು. ಎರಡು ದಿನಗಳ ಹಿಂದೆಯಷ್ಟೆ ಕರೆಮಾಡಿ ನವೆಂಬರ್‌ನಲ್ಲಿ ಕವಿಗೋಷ್ಠಿ ಮಾಡೋಣ. ನಿಮ್ಮ ಹೆಸರು ಪ್ರಿಂಟ್ ಮಾಡ್ತೇನೆ ಎಂದು ಹೇಳಿದ್ದರು.

ಮೊನ್ನೆಯಷ್ಟೆ ಉಡುಪಿಯಲ್ಲಿ ನಡೆಯುತಿದ್ದ ವಿಶ್ವ ಬಂಟರ ಸಮ್ಮೇಳನದBಮೆರವಣಿಗೆಯಲ್ಲಿ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದೆ ಅವರ ಕೊನೆ ಕಾರ್ಯಕ್ರಮವಾಗಿತ್ತು. ಆದರೆ ಹೇಳದೆ ನಡೆದು ಹೋದರು .. ಕಣ್ಣಿನ ರೆಪ್ಪೆಗಳು ತೊಯ್ದು ಹೋಗಿವೆ.

ಶೇಖರಣ್ಣನ ನಂತೆ …
ಹೆಸರಿನೊಂದಿಗೆ ಊರಿನ ಹೆಸರಿರಲಿ …
ಹೋಗಿ ಬನ್ನಿ ಶೇಖರಣ್ಣ ………..

~ ರಾಂ ಅಜೆಕಾರು….

 
 
 
 
 
 
 
 
 
 
 

Leave a Reply