ನಾಟಿ ವೈದ್ಯೆ ಕೆ.ವಸಂತಿ ತಂತ್ರಿಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಕಾಪು ತಾಲೂಕು ಉಳಿಯಾರಗೋಳಿಗ್ರಾಮ, ಕಲ್ಯಾ ನಿವಾಸಿಯಾಗಿರುವ ಶ್ರೀಮತಿ. ಕೆ.ವಸಂತಿ ತಂತ್ರಿಯವರು ಕಳೆದ 60 ವರ್ಷಗಳಿಂದ ನಾಟಿ ವೈದ್ಯರಾಗಿ ಪರಿಸರದ ಜನರಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ.ಉಚಿತವಾಗಿ ನಾಟಿ ಔಷಧಿಯನ್ನು ವಿಶೇಷವಾಗಿ ಅರಶಿನ ಕಾಮಾಲೆ(ಜಾಂಡಿಸ್), ಸರ್ಪ ಸುತ್ತು (ಹರ್ಪಿಸ್), ಬಂಜೆತನ ನಿವಾರಣೆ ಮುಂತಾದ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿ ನೀಡುತ್ತಿದ್ದು ನಮ್ಮೆಲ್ಲರ ಪ್ರಶಂಸೆಗೆ ಪಾತ್ರರಾಗಿರುತ್ತಾರೆ. ಇವರಿಂದ ಸಾವಿರಾರು ಮಂದಿ ಉಪಕೃತರಾಗಿರುತ್ತಾರೆ.

   ಎಲೆ ಮರೆಯ ಕಾಯಿಯಂತೆ ತಮ್ಮ ಹಿರಿಯರಿಂದ ಕಲಿತ ನಾಟಿ ಔಷಧಿಗಳನ್ನು ಜನರಿಗೆ ನೀಡುತ್ತಾ ಅತ್ಯುತ್ತಮ ಸೇವೆ ನೀಡುತ್ತಿರುವ ಇವರನ್ನು ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಗಲಿ ದ್ದಾರೆ. ಇವರು ನಮ್ಮ ಮಾಳ ವಿಕ ಕನ್ ಸ್ಟ್ರಕ್ಷನ್ ಲಕ್ಷ್ಮೀ ಶ ತಂತ್ರಿ ಅವರ ತಾಯಿ..

 
 
 
 
 
 
 
 
 
 
 

Leave a Reply