​ಇಂಜಿನಿಯರ ದಿನ

ಎಲ್ಲಿ​​ರಿಗೂ ಗೊತ್ತಿರುವಂತೆ ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯನವರ ಜನ್ಮದಿನ, ಸೆಪ್ಟೆಂಬರ್ 15 ನ್ನು​ ​ಇಂಜಿನೀರ್ಸ್ ದಿನ ಎಂದು ಆಚರಿಸಲಾಗುತ್ತಿದೆ. ಅದು ಎಂಜಿನೀರ್ ವೃತ್ತಿಗೆ ಅವರು ಗೌರವ ತಂದುಕೊಟ್ಟದ್ದನ್ನು  ನೆನಪಿಸಿ ಕೊಳ್ಳುವ ಒಂದು ಪ್ರಯತ್ನ.​ 
ವಿಶ್ವೇಶ್ವರಯ್ಯ ಸಾಮಾನ್ಯ ವ್ಯಕ್ತಿಯಲ್ಲ. ಒಂದು ಮಹಾನ್ ಚೇತನ.​ ​ಸಿವಿಲ್ ಎಂಜಿನೀರ್ ಗಳಿಗಂತೂ ಸದಾ ಸ್ಫೂರ್ತಿಯ ಸೆಲೆ.
ಅವರು ಕಟ್ಟಿದ ಕೆ. ಆರ್. ಸ್. ಅಣೆಕಟ್ಟು ಆಗ ಏಶ್ಯ ಖಂಡದಲ್ಲೇ ಅತೀ ದೊಡ್ಡ ದಾಗಿತ್ತು.​ ​ಮೈಸೂರು ರಾಜ್ಯದ ದಿವಾನರಾಗಿ ಮೈಸೂರು ಬ್ಯಾಂಕ್, ಮೈಸೂರು ವಿಶ್ವವಿದ್ಯಾಲಯ ಸ್ಥಾಪಿಸಿದರು. ಒಬ್ಬ ಎಂಜಿನೀರ್ ಉತ್ತಮ ಆಡಳಿತಗಾರ ನಾಗಬಲ್ಲನೆಂದು ತೋರಿಸಿದರು.

ಈಗ ಕೂಡ ನಮ್ಮ ಐ.ಎ.ಸ್ ನಲ್ಲಿ ಪ್ರತಿಶತ 50 ಕ್ಕಿಂತ​ ​ಹೆಚ್ಚು​ ಇಂಜಿನೀರ್ಸ್ ಆಯ್ಕೆಯಾಗುತ್ತಿದ್ದಾರೆ. ಹೆಮ್ಮೆ ಪಡೋಣ.​ ಇಂದು ನಾವು ವಿಶ್ವೇಶ್ವರಯ್ಯ ನವರ ದಿನಾಚರಣೆ ಆಚರಿಸುವ ಸಮಯದಲ್ಲಿ ಅವರ ನಡೆನುಡಿಗಳ ಆಚರಣೆ​,​ ಸಾಧ್ಯ ವಾದಷ್ಟು​ ​ನಮ್ಮ ವ್ಯವಹಾರದಲ್ಲಿ​ ಅಳವಡಿಸಿಕೊಳ್ಳುವ ಪ್ರಯತ್ನ ಮಾಡೋಣ. ಆ ಮಹಾನ್ ಚೇತನದ ನೆನಪಿಗೆ ನನ್ನ ಗೌರವಪೂರ್ವಕ ನುಡಿ ನಮನ.

ಬೆನಗಲ್ ನಾರಾಯಣ ಮೂರ್ತಿ.

ನಿವೃತ್ತ ಅಧೀಕ್ಷಕ ಅಭಿಯಂತರು, ಕೆ.ಪಿ.ಸಿ​


 
 
 
 
 
 
 
 
 

Leave a Reply