ಧನಾತ್ಮಕ ಚಿಂತನೆ ಬೆಳೆಸಿ ಜೀವನದೆತ್ತರಕ್ಕೇರಿ ~ರಾಘವೇಂದ್ರ ಪ್ರಭು,ಕವಾ೯ಲು

ಪಾಸಿಟಿವ್ ( ಧನಾತ್ಮಕ , ಸಕಾರಾತ್ಮಕ ಮನೋಭಾವ – ಭಾವನೆ ). ಪಾಸಿಟಿವ್ ನೆಸ್… ಧನಾತ್ಮಕ ಚಿಂತನೆ. ಬಿ ಪಾಸಿಟಿವ್. ಯಾವಾಗಲೂ ಪಾಸಿಟಿವ್ ಆಗಿ ಇರಿ. ಪಾಸಿಟಿವ್ ಮನಸ್ಥಿತಿಯಿಂದ ಇದ್ದರೆ ಎಲ್ಲವೂ ಸರಿ ಯಾಗಿ ನಡೆಯುತ್ತೆ ಹೀಗೆ ಸಾಮಾನ್ಯವಾಗಿ ಹೇಳೋದನ್ನ ನಾವು ಕೇಳಿರುತ್ತೇವೆ. ಆದ್ರೆ ಎಷ್ಟೇ ಪ್ರಯತ್ನ ಪಟ್ರೂ ಕೆಲವೊಮ್ಮೆ ನಕಾರಾತ್ಮಕ ಚಿಂತನೆ ಮನಸ್ಸಿಗೆ ಬಂದೇ ಬಿಡುತ್ತದೆ ಜೀವನದಲ್ಲಿ ಜಿಗುಪ್ಸೆ ಹುಟ್ಟುತ್ತೆ. ಯಾವುದೋ ಒಂದು ಕಾರಣಕ್ಕೆ ನಾವು ನೆಗೆಟಿವ್ ಆಗಿ ಆಲೋಚಿಸೋದಕ್ಕೆ ಶುರು ಮಾಡ್ತೇವೆ. ನಂತರ ಇದು ಜೀವನ ಅವಿಭಾಜ್ಯ ಅಂಗವಾಗುತ್ತದೆ ….! ಆದ್ರೆ ಅಂತಹ ಸಂದರ್ಭದಲ್ಲೂ ಸಹ ಮನಸನ್ನ ಹೇಗೆ ಧನಾತ್ಮಕ ಚಿಂತನೆಯಿಂದ ಇಟ್ಟಿರಬೇಕು. ಇದರಿಂದ ನಮಗೆ ಎಷ್ಟೇ ನೆಗೆಟಿವ್ ಆಲೋಚನೆ ಇದ್ರು ಹೋಗಿ ನೆಮ್ಮದಿ ಸಿಗುತ್ತೆ. ಒಳ್ಳೊಳ್ಳೆ ಆಲೋಚನೆಗಳು ಬರುತ್ತವೆ. ಜೊತೆಗೆ ಸಮಸ್ಯೆಗಳಿಗೆ ಪರಿಹಾರದ ದಾರಿ ಹುಡುಕಿಕೊಳ್ಳುವ ಜೊತೆಗೆ ಪಾಸಿಟಿವ್ ವೈಬ್ಸ್ ಕ್ರಿಯೇಟ್ ಆಗಿ ನಮ್ಮ ಮನಸ್ಸು ಸದಾ ಒಳ್ಳೆಯ ವಿಚಾರಗಳನ್ನೆ ಯೋಚಿಸುತ್ತೆ. ಅಲ್ಲದೇ ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಬೆಳೆಯುತ್ತೆ.
ಆದರೆ ನಾವು ಯಾವ ರೀತಿ ಪಾಸಿಟಿವ್ ಆಗಿರಬಹುದು. ಅದಕ್ಕೆ ಕೆಲ ಸಣ್ಣ ಟಿಪ್ಸ್ ಗಳನ್ನ ನಾವು ಇಲ್ಲಿ ತಿಳಿಯೋಣವೇ ?

1. ಸದಾ ಕೃತಜ್ಞತಾ ಮನೋಭಾವ ಬೆಳೆಸಿಕೊಳ್ಳಬೇಕು
.. ಹೀಗೆ ಆದಲ್ಲಿ ಎಲ್ಲಾ ವಸ್ತುಗಳಿಂದ ಹಿಡಿದು ಪ್ರತಿ ವಿಚಾರದ ಮೇಲೂ ತಮ್ಮ ಜೀವನದಲ್ಲಿ ನಾವು ಅದಕ್ಕೆ ಕೃತಜ್ಞರಾಗಿದ್ದಾಗ ನಮ್ಮ ಮನಸ್ಸಿಗೆ ತೃಪ್ತಿಯ ಬಾವನೆ ಬರುತ್ತದೆ. ಇದು ಅತೃಪ್ತೆಯನ್ನೂ ಹೋಗಲಾಡಿಸಲು ಸಹಾಯ ಮಾಡುವ ಜೊತೆಗೆ ಮನಸನ್ನ ಸದಾ ಧನಾತ್ಮಕವಾಗಿರಲು ತುಂಬಾ ಸಹಾಯ ಮಾಡುತ್ತದೆ.

2. ನೀವು ಒಂದು ಜರ್ನಲ್ ಅಥವ ಡೈರಿಯನ್ನ ಬರೆಯಲು ಪ್ರಾರಂಭಿಸಿ :

ನಿಮ್ಮ ಜೀವನದಲ್ಲಿ ಪ್ರತಿನಿತ್ಯ ನಡೆಯುವ ಕೇವಲ ಒಳಿತನ್ನೇ ಆ ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ನಿಮ್ಮೆ ದೈನಂದಿನ ಜೀವನದಲ್ಲಿ
ಪ್ರತಿ ಹ್ಯಾಪಿ ಮೂಮೆಂಟ್ಸ್ ಸಂತೋಷದ ಅನುಭವಗಳನ್ನ ನೆನಯುತ್ತಾ ಡೈರಿಯಲ್ಲಿ ಬರೆದಿಟ್ಟು ನೋಡಿ ನಿಮ್ಮ ಸುತ್ತಲೂ ಪಾಸಿಟಿವ್ ವೈಬ್ಸ್ ನಿಮಗೆ ಅನುಭವ ಆಗುತ್ತದೆ.

3. ಹಾಸ್ಯಪ್ರಜ್ಞತೆ ಇರಲಿ :
ನೀವು ನಿಮ್ಮನ್ನ ಮನೋರಂಜಿಸಿಕೊಳ್ಳುವ ಜೊತೆಗೆ ನಿಮ್ಮ ಸುತ್ತಲೂ ಇರುವವರನ್ನ ನಗಿಸು ಪ್ರಯತ್ನ ಮಾಡಿ. ಅದರಿಂದ ನೀವಷ್ಟೇ ಅಲ್ಲದೆ ನಿಮ್ಮ ಸುತ್ತಲೂ ಪಾಸಿಟಿವ್ ವೈಬ್ಸ್ ಸೃಷ್ಟಿಯಾಗತ್ತದೆ.

4. ಯಾವಾಗಲೂ ಒಳ್ಳೆಯ ವಿಚಾರಗಳ ಬಗ್ಗೆಯೇ ಗಮನಹರಿಸಿ.

ಕಷ್ಟ ಬಂದಾಗ ಅದನ್ನು ಎದುರಿಸಿ. ಅದನ್ನ ಬಿಟ್ಟು ಇದು ಆಗಲ್ಲ. ಇದೇ ಜೀವನ ಅಂದ್ಕೊಏನೂ ಸಾಧನೆ ಮಾಡೋದಕ್ಕೆ ಆಗಲ್ಲ. ಹಾಗೆ ಅನ್ನಿಸಿದಾಗ ನೀವು ಒಂದು ಅಂಶವನ್ನ ಸದಾ ನೆನಪಿಟ್ಟುಕೊಳ್ಳಿ. ಸವಾಲುಗಳು ಜೀವನದ ಒಂದು ಭಾಗವೇ ಹೊರತು ಅದೇ ಜೀವನವಲ್ಲ. ಹೀಗಾಗಿ ಆದಷ್ಟು ಸದ್ವಿಚಾರಗಳ ಬಗ್ಗೆ ತಿಳಿಯಿರಿ.

5. ನೀವು ಸದಾ ಪಾಸಿಟಿವ್ ಯೋಚನೆ ಮಾಡುವವರೊಂದಿಗೆ ಹೆಚ್ಚು ಸಮಯ ಕಳೆಯಿರಿ.

ಇದರಿಂದ ನಿಮ್ಮ ಯೋಚನೆಯೂ, ನಿಮ್ಮ ನಡೆ ನುಡಿಯು ಅವರಂತೆಯೇ ಬದಲಾಗುತ್ತೆ. ಜೊತೆಗೆ ನೀವು ಪಾಸಿಟಿವ್ ಆಗಿಯೇ ಇರಲು ಶುರು ಮಾಡ್ತೀರಿ.
ನಿಮ್ಮ ಜೊತೆಯಾಗಿರುವವರಾದರೂ ನಿಮ್ಮನ್ನ ಧನಾತ್ಮಕ ಭಾಗಕ್ಕೆ ಕರೆದೊಯ್ಯುವ ಪ್ರಯತ್ನ ಮಾಡ್ತಾರೆ.ಹೀಗಾಗಿ ಧನಾತ್ಮಕ ವ್ಯಕ್ತಿಗಳು ನಮ್ಮ ನಿಜವಾದ ಮಾಗ೯ದಶ೯ಕರು

6. ನಿಮಗೆ ನೀವೇ ಸಕಾರಾತ್ಮಕವಾಗಿ ಮಾತನಾಡುವುದನ್ನ ರೂಢಿಸಿಕೊಳ್ಳಿ, ಬೆಳೆಸಿಕೊಳ್ಳಿ .

ಇದು ನನ್ನ ಕೈಯಲ್ಲಿ ಆಗಲ್ಲ ಅಂದ್ಕೋಬೇಡಿ. ನಾನು ಇದನ್ನ ಮಾಡಬಹುದು. ನನ್ನಿಂದ ಇದು ಸಾಧ್ಯವಾಗದೇ ಇದ್ರು ಮುಂದೆ ಹೇಗೆ ನಾನು ಇದನ್ನ ಸಾಧಿಸಬಹುದು ಈ ರೀತಿ ಆಲೋಚನೆ ನಿಮ್ಮನ್ನ ಪಾಸಿಟಿವ್ ಆಗಿ ಇರಿಸಿ ನಿಮ್ಮ ಸಾಧನೆಯ ದಾರಿಗೆ ಹೂದಾರಿಯಾಗುತ್ತದೆ ನನ್ನಿಂದ ಸಾಧ್ಯ ಎಂಬ ಭಾವ ಸದಾ ಇರಲಿ.

7.. ನೀವು ಪಾಸಿಟಿವ್ ಆಗಿರಲು ಬಯಸಿದಾಗ ಮೊದಲು ನೀವು ನಿಮ್ಮ ನೆಗೆಟಿವಿಟಿ ನಿಮ್ಮ ವೀಕ್ ನೆಸ್ … ಬಿಡಿ

ನೀವು ಯಾವ ಕ್ಷೇತ್ರದಲ್ಲಿ ಯಾವ ಜಾಗದಲ್ಲಿ ಯಾವ ವಿಚಾರದಲ್ಲಿ ನೆಗೆಟಿವ್ ಆಗಿ ಆಲೋಚನೆ ಮಾಡ್ತೀರಾ ಅನ್ನೋದನ್ನ ಮೊದಲು ಗುರುತಿಸಿ ಆನಂತರ. ಅದನ್ನ ಸರಿ ಪಡಿಸಿಕೊಳ್ಳೋ ದಾರಿ ಹುಡುಕಿ.

8. ಪ್ರತಿನಿತ್ಯ ಆರಂಭಿಸುವ ಮುನ್ನ ಒಂದು ಪಾಸಿಟಿವ್ ನೋಟ್ ಬರೆಯುವ ಅಭ್ಯಾಸ, ಅಥವ, ಓದುವ ಅಭ್ಯಾಸ ಮಾಡಿಕೊಳ್ಳಿ.

ಫ್ರೆಶ್ ಆಗಿ ಆರಂಭಿಸಿ. ನಿಮ್ಮ ಜೀವನಕ್ಕೆ ಬೇಕಾದ ಉತ್ತಮ ಪುಸ್ತಕ ಓದಿ ಅದರಲ್ಲಿನ ಉತ್ತಮ ಅಂಶಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಿ’
ಬನ್ನಿ ಬದಲಾಗೋಣ ನಮ್ಮ ಜೀವನ ಇತರರಿಗೆ ಮಾದರಿಯಾಗಲಿ’

 ✍🏻ರಾಘವೇಂದ್ರ ಪ್ರಭು,ಕವಾ೯ಲು

ವ್ಯಕ್ತಿತ್ವ ವಿಕಸನ ತರಬೇತುದಾರ

 
 
 
 
 
 
 
 
 
 
 

Leave a Reply