​​ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ.

ಪ್ರತಿಸಲದಂತೆ ನವಂಬರ್ ಒಂದರಂದು ರಾಜ್ಯದಲ್ಲಿ ರಾಜ್ಯೋತ್ಸವದ ನಿಮಿತ್ತ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ. ಈ ವರ್ಷ ಕರೋನ ನಿಮಿತ್ತ ಸಣ್ಣ ಪ್ರಮಾಣದಲ್ಲಿ ಆಚರಣೆ ಮಾಡುವುದು ನಿಗದಿ ಯಾಗಿದೆ. ಕೆಲವರಿಗೆ ಇದು ವರ್ಷದ ಏಕೈಕ ಆರ್ಥಿಕ ಸಂಪನ್ಮೂಲ ಒಟ್ಟು ಮಾಡುವ ಕಾರ್ಯಕ್ರಮ.

ಅಂಥವರಿಗೆ ಈ ವರ್ಷ ತುಂಬಾ ನಿರಾಸೆಯಾಗಿದೆ. ಅದು ಬಿಡಿ. ಈ ಕಾರ್ಯಕ್ರಮಗಳ ನಂತರ ಕನ್ನಡದ ಬಳಸುವಿಕೆಯ ಬಗ್ಗೆ ಯಾರೂ ಚಿಂತಿಸುವುದಿಲ್ಲ. ತಮಾಷೆಯಂದ್ರೆ ನಮ್ಮ  ಸಿನೆಮಾಗಳಲ್ಲಿ ಕನ್ನಡ ಅಭಿಮಾನದ ಹಾಡುಗಳು ಸಂಭಾಷಣೆಗಳು ತುಂಬಾ. ಈ ಮಾತು ದಿವಂಗತ ಬಾಲ ಸುಬ್ರಹ್ಮಣ್ಯ ಅವರು ಒಂದು ತೆಲುಗು ಪತ್ರಿಕೆಗೆ ಕೊಟ್ಟ ಸಂದರ್ಶನ ದಲ್ಲಿ ಹೇಳಿದ್ದು. ಅಷ್ಟರ ಮಟ್ಟಿಗೆ ಅದು ಸತ್ಯ.

ಅದೇ ಸಿನೆಮಾಗಳಲ್ಲಿ ಪರ ಭಾಷಾ ನಟಿಯರೇ ತುಂಬಿರ್ತಾರೆ. ನಾವು ಹೇಗಿದ್ದೇವೆ? ಇತ್ತೀಚೆಗೆ ಒಂದು ಬ್ಯಾಂಕಿನ ಎ. ಟಿ. ಎಂ. ಗೆ ಹೋಗಿದ್ದೆ. ನನ್ನ ಸಹಾಯಕ್ಕೆ ಒಬ್ಬರು ಸಿಬ್ಬಂದಿ ಬಂದಿದ್ದರು.  ಅವರು ತಮಿಳ್ ಭಾಷೆಯನ್ನು ಉಪಯೋಗಿಸಿದರು. ಅವರು ಕನ್ನಡದಲ್ಲಿ ಮಾತಾಡಿದರು. ಆದರೆ ಭಾಷೆಯ ಉಪಯೋಗ ಬಂದಾಗ ತಮ್ಮ ಮಾತೃಭಾಷೆಯ ಉಪಯೋಗ ಮಾಡಿದರು. ಅದೇ ಜಾಗದಲ್ಲಿ ನಮ್ಮ ಕನ್ನಡದ ಜನ ಇಂಗ್ಲಿಷ್ ಬಳಕೆ ಮಾಡುತ್ತಿದ್ದರು. ಇದು ಒಂದು ಉದಾಹರಣೆ ಅಷ್ಟೇ .ನಿಮಗೆ ಗೊತ್ತಿದ್ದದ್ದೇ. 

ಹಾಗಾದರೆ ನಾವು ಏನು ಮಾಡಬಹುದು​:ಸಾಧ್ಯವಾದಷ್ಟು ಮನೆಯಲ್ಲಿ ಮಾತೃಭಾಷೆಯಲ್ಲಿ ಮಾತಾಡುವುದು.​ ವಿಳಾಸ ಬರೆಯು ವಾಗ (ಕರ್ನಾಟಕದ ಒಳಗೆ) ಕನ್ನಡವನ್ನು ಬಳಸುವುದು.​ *ಬ್ಯಾಂಕ್/ಪೋಸ್ಟ್ ಆಫೀಸ್ ಇತ್ಯಾದಿ ಸ್ಥಳಗಳಲ್ಲಿ ನಮೂನೆ (forms) ಭರ್ತಿ ಮಾಡುವಾಗ ಕನ್ನಡಕ್ಕೆ ಅವಕಾಶವಿದ್ದಲ್ಲಿ, ಕನ್ನಡವನ್ನೇ ಬಳಸುವುದು. *ಇಂಗ್ಲಿಷ್ ಮಾಧ್ಯಮದ ಮಕ್ಕಳಿಗೆ(ಈಗ ಅವರೇ ಇರುವುದು) ಕನ್ನಡ ಭಾಷೆ ಕಲಿಸುವ ಪ್ರಯತ್ನ ಮಾಡುವುದು. ಇದನ್ನು ಒಂದು ಆಂದೋಲನ ದ ರೀತಿಯಲ್ಲಿ ವಿವಿಧ ಜನ ಪ್ರದೇಶ ದಲ್ಲಿ ಕೈಗೊಳ್ಳಬಹುದು. *ಇತರೆ ಭಾಷೆಯ ಜನರೊಡನೆ ವ್ಯವಹರಿಸುವಾಗ ಕಡ್ಡಾಯವಾಗಿ ಕನ್ನಡ ಬಳಕೆ ಮಾಡುವುದು.(ತುಂಬಾ ಹಿಂದಿ ಭಾಷಿಕರು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿದ್ದಾರೆ.)

ಮೇಲಿನ ಯಾವುದೇ ಕ್ರಮಗಳು ಆಸಾಧ್ಯವಲ್ಲ. ನಾವು ಮನಸ್ಸು ಮಾಡಬೇಕು ಅಷ್ಟೇ. ಸರ್ಕಾರದ ಕಾನೂನುಗಳು ಸಹಾಯ ಮಾಡಬಹುದು. ನಾವೇ ತಯಾರಾಗಬೇಕು. ಸಿರಿಗನ್ನಡಮ್ ಗೆಲ್ಗೆ.

~ಬೆನಗಲ್ ನಾರಾಯಣ ಮೂರ್ತಿ.​
 

 
 
 
 
 
 
 
 
 
 
 

Leave a Reply