ಫಲಿಸಿತು ಪೂಜಾ ಫಲ..~ ಪೂರ್ಣಿಮಾ ಜನಾರ್ದನ್ ಕೊಡವೂರು

ರಾಮಾ…ಶ್ರೀರಾಮಾ..
ರಾಮಾ..ಜಯರಾಮಾ ಜಯ ಜಯಾ ರಾಮ‌‌‌..

ನಮಗೆ ನಿನ್ನ‌ ನಾಮದ ಬಲ..
ಫಲಿಸಿತು ಶತಕಗಳ ಪೂಜಾ ಫಲ…

ರಾಮನವತರಿಸಿದ ಅಯೋಧ್ಯೆಯಲಿ ಶ್ರೀ ರಾಮ ಮಂದಿರ..
ಕೋಟಿ ಕೋಟಿ ಹೃದಯದಲಿ ವಾಸ ನೀ ಪ್ರಭು
ಶ್ರೀರಾಮಚಂದಿರ

ಶ್ರಾವಣಮಾಸದ ಬಹುಳ ಬಿದಿಗೆ‌‌….
ಅಂದು ರಾಮ‌ಮಂದಿರಕೆ
ಶಿಲಾನ್ಯಾಸದ ಘಳಿಗೆ..

ಪೌಷ ಶುಕ್ಲ ದ್ವಾದಶಿಯ ಶುಭ ದಿನ…
ಇಂದು ರಾಮಲಲ್ಲಾ ಪ್ರಾಣ ಪ್ರತಿಷ್ಟಾ ವಿಧಿವಿಧಾನ..

ಭಕ್ತರಾಧೀನ ಶ್ರೀರಾಮ ಭಕುತರ ಅಚಲ ಭಕ್ತಿಗೆ ಒಲಿದು..
ತನ್ನ ನಂಬಿದ ಕರಸೇವಕರ ಸ್ವಾಮಿ ನಿಷ್ಠೆಗೆ ನಲಿದು..

ತನ್ನ ಆರಾಧಿಪ ಸಾಧು ಸಂತರ ಕರುಣಿಸಲೆಂದು..
ನೀನೇ ಗತಿಯೆಂದು ನಂಬಿದವರಿಗೆ ಅಭಯವ ನೀಡಲೆಂದು‌‌.

ಕೌಸಲ್ಯಾ ನಂದನ ನೆಲೆಸಿರುವನಿಲ್ಲಿ ನಸು ನಗುತ …
ದಶರಥ ಪುತ್ರ ಪಾಲಿಸು ನಮ್ಮ ಅನವರತ..

ಸೀತಾರಾಮ ನಿನ್ನ ಚರಣಕೆ ಎರಗುವೆ ನಾ ನಿತ್ಯ….
ಕರುಣಿಸೆಮಗೆ ನಿನ್ನ ದಾಸ ಹನುಮನ ಸಖ್ಯ…

ಇದೀಗ ಭವ್ಯ ಭಾರತದಲಿ ನಿನ್ನಯ ಅದ್ಭುತ ಮಂದಿರ..
ಸಂತಸ ಸಡಗರದಿ ನಲಿಯುತಲಿದೆ ನಮ್ಮಯ ಮನೋಮಂದಿರ..

ರಾಮಾ…ಶ್ರೀ ರಾಮಾ..
ರಾಮಾ.ಜಯರಾಮಾ.ಜಯ ಜಯಾ ರಾಮ….

ನಮಗೆ ನಿನ್ನ ನಾಮದ ಬಲ…
ಫಲಿಸಿತು ಶತಕಗಳ‌ ಪೂಜಾ ಫಲ..
ರಾಮನವತರಿಸಿದ ಅಯೋಧ್ಯೆಯಲಿ ಶ್ರೀರಾಮ ಮಂದಿರ…
ಕೋಟಿ ಕೋಟಿ ಹೃದಯದಲಿ ವಾಸ ನೀ ಪ್ರಭು
ಶ್ರೀರಾಮಚಂದಿರ

~ಪೂರ್ಣಿಮಾ ಜನಾರ್ದನ್ ಕೊಡವೂರು.
94812 14104

 
 
 
 
 
 
 
 
 
 
 

Leave a Reply