ಪತ್ರಿಕಾ ದಿನಾಚರಣೆ: ಪೂರ್ಣಿಮಾ ಜನಾರ್ದನ್

ಜುಲೈ ಒಂದನೇ ತಾರೀಕಿನ‌ ಈ ದಿನ…
ಕರ್ನಾಟಕ ರಾಜ್ಯದೆಲ್ಲೆಡೆ ಪತ್ರಿಕಾ ದಿನಾಚರಣೆಯ ಸುದಿನ..

ಜನಮನದ ಧ್ವನಿಯಾಗಿ ಮೂಡಿತೊಂದು ಸಂಚಿಕೆ…
ಅದುವೇ ಕನ್ನಡದ ಮೊತ್ತ ಮೊದಲ ಮಂಗಳೂರು ಸಮಾಚಾರ ಪತ್ರಿಕೆ..

ಇದರಿಂದಾಗಿ ದೇಶ ವಿದೇಶಗಳಲ್ಲಿ ಆಗುವ ವಿದ್ಯಮಾನಗಳು ಜಗಜ್ಜಾಹೀರು….
ಅಲ್ಲದೇ ತಿಳಿಯುತ್ತದೆ ರಾಜ್ಯ, ಜಿಲ್ಲೆ ಅಲ್ಲದೇ ನಮ್ಮ ಸುತ್ತ ಮುತ್ತಲಿನಲ್ಲಿ ಆಗುತ್ತಿರುವ ಕಾರುಬಾರು.

ರಾಜಕೀಯ, ಕ್ರೀಡೆ, ಆರ್ಥಿಕ ಔದ್ಯೋಗಿಕ ಯಾವುದೇ ಕ್ಷೇತ್ರವನ್ನು ಇದು ಬಿಟ್ಟಿಲ್ಲ…
ಆಬಾಲವೃದ್ಧರಾದಿಯಾಗಿ ಇದು ಎಲ್ಲರ ಬದುಕಿನ ಒಂದು ಭಾಗವಾಗಿಯೇ ಬಿಟ್ಟಿದೆಯಲ್ಲ…

ನಿಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕೆ, ಜಾಹೀರಾತು ನೋಡಬೇಕೇ…
ಸುದ್ಧಿಗಳತ್ತ ಕಣ್ಣು ಹಾಯಿಸಬೇಕೇ, ಸುಮ್ಮ‌ಸುಮ್ಮನೆ ಸಮಯ ವ್ಯಯಿಸಬೇಕೇ..

ಮನೆಮದ್ದು ಅಂಕಣ, ಸಣ್ಣ ಕಥೆ, ಲಘುಬರಹ, ಲಲಿತ ಕಲೆಯೊಂದಿಗೆ ವಿಹಾರ ನಿಮಗಿಷ್ಟವೇ…
ವಿದ್ಯಾರ್ಥಿ ಮಿತ್ರ, ಅಡುಗೆ ಸಂಪುಟ, ಪದಬಂಧ, ಸಿನೆಮಾ ಯಕ್ಷಗಾನ ಹವ್ಯಾಸ ನಿಮಗಿದೆಯೇ…

ನಿತ್ಯೋಪಯೋಗಿ ವಸ್ತುಗಳ , ಹಿರಣ್ಯದ ದರ ಗೊತ್ತಾಗಬೇಕೇ…
ಸಾಮಾಜಿಕ,ಸಾಂಸ್ಕೃತಿಕ, ಆಧ್ಯಾತ್ಮ ವಿಷಯಗಳತ್ತ ನೋಟ ಹರಿಸಬೇಕೇ…

ಇದು ರಾಜಕೀಯ, ಆರ್ಥಿಕ, ಔದ್ಯೋಗಿಕ ಹೀಗೆ ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ..
ಹಾಗೆಂದೇ ಜನಸಾಮಾನ್ಯರಿಗೆ ನಿತ್ಯ ದಿನಪತ್ರಿಕೆಯ ಮೇಲೆ ಕಣ್ಣಾಡಿಸದೆ ಇರಲು ಆಗಲ್ಲ..

ಪತ್ರಿಕಾ ದಿನಾಚರಣೆಯ ಶುಭಾಶಯಗಳು..

 

 
 
 
 
 
 
 
 
 
 
 

Leave a Reply