ಕರೋನಾ ವಿರುದ್ದಸಮರ ಸಾರಿರುವ ವೈದ್ಯರೆಂಬ ಆಧುನಿಕ ದೇವರಿಗೆ ವೈದ್ಯ ದಿನದ ಶುಭಾಶಯಗಳು – ರಾಘವೇಂದ್ರ ಪ್ರಭು,ಕರ್ವಾಲು

ವೈದ್ಯೋ ನಾರಾಯಣ ಹರಿ ಎಂಬ ಮಾತಿನಂತೆ ವೈದ್ಯರನ್ನು ನಾವು ದೇವರ ಸ್ಥಾನದಲ್ಲಿ ನೋಡುತೇವೆ.ತಮ್ಮ ಅಮೂಲ್ಯವಾದ ಜ್ಞಾನ ಸಂಪತ್ತಿನಿಂದ ರೋಗಿಗಳನ್ನು ಸಾವಿನ ಬಾಯಿ ನಿಂದ ತಪ್ಪಿಸಿಕೊಂಡು ತರುವಲ್ಲಿ ಶ್ರಮವಹಿಸುತ್ತಾರೆ. ಅವರೊಂದಿಗೆ ದಾದಿಯರು ಮತ್ತು ಆಸ್ಪತ್ರೆಯ ಸಿಬ್ಬoದಿಗಳ ಸೇವೆ ಬೆಲೆ ಕಟ್ಟಲಾಗದು.

ಈ ಕರೋನಾದ ಸಮಯದಲ್ಲಿ ಅವರ ಸೇವೆ ನಿಜಕ್ಕೂ ಮೆಚ್ಚುವಂತದ್ದು, ಟೀಕಿಸುವ ನೆಪದಲ್ಲಿ ಅವರ ಸೇವೆಯನ್ನು ಮರೆಯದಿರಿ ಇತ್ತಿಚೆಗೆ ಈ ಕರೋನಾದ ಎರಡನೇ ಅಲೆಯ ಪ್ರಭಾವದಿಂದ ಜನರು ಬಹಳಷ್ಟು ತೊoದರೆಗೆ ಒಳಗಾಗಿದ್ದಾರೆ. ಎಲ್ಲೆಡೆ ಬೆಡ್ ಇಲ್ಲ, ಐಸಿಯು ಇಲ್ಲ, ವೆಂಟಿಲೆಟರ್ ಆಮ್ಲಜನಕ ಇಲ್ಲ ಎಂಬ ಕೂಗು ಈ ಮಧ್ಯೆ ಜನರು ಆಸ್ಪತ್ರೆ, ವೈದ್ಯರ ವಿರುದ್ಧ ಟೀಕೆ ಮಾಡುತ್ತಿರುದನ್ನು ನಾವು ನೋಡುತ್ತಿದ್ದೇವೆ. ಅವರನ್ನು ಟೀಕೆ ಮಾಡುವ ಭರದಲ್ಲಿ ಅವರ ಸೇವೆಗೆ ಮೌಲ್ಯವೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ .

ಒಂದೇ ಬಾರಿ ರೋಗಿಗಳ ಸೇಪ೯ಡೆ ಹೆಚ್ಚಳವಾದಾಗ ಇರುವ ಬೆಡ್ ಮತ್ತು ವ್ಯವಸ್ಥೆಯನ್ನು ಹೊಂದಿಕೊಳ್ಳುವುದು ಸುಲಭವಲ್ಲ. ಅದೆಷ್ಟೋ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು 24×7 ಎಂಬಂತೆ ಸೇವೆ ನೀಡುತ್ತಿದ್ದಾರೆ.

ತಮ್ಮ ಕುಟುಂಬವನ್ನು ಮರೆತು ಕೆಲಸ ಮಾಡುವ ಸಂದಭ೯ ರೋಗಿಗಳ ಕಡೆಯಿಂದ ಕೇಳಿ ಬರುವ ಚುಚ್ಚು ಮಾತುಗಳು ಮನಸ್ಸಿಗೆ ಬಹಳಷ್ಟು ಬೇಸರ ತರುದಲ್ಲಿ ಅನುಮಾನವಿಲ್ಲ. ಅಂದ ಮಾತ್ರಕ್ಕೆ ವೈದ್ಯರು ತಪ್ಪು ಮಾಡು ದಿಲ್ಲ ಎಂದು ಹೇಳಲು ಆಗದು ಅವರಿಂದಲೂ ಕೂಡ ಒತ್ತಡದ ಮಧ್ಯೆ ತಪ್ಪುಗಳು ಆಗುತ್ತವೆ ಆದರೆ ತಪ್ಪುಗಳನ್ನೇ ಬೊಟ್ಟು ಮಾಡಿ ಅವರ ಸೇವಾ ಮನೋಭಾವವನ್ನು ಕುಗ್ಗಿಸುವುದು ಸರಿಯೇ …? ಖಂಡಿತಾ ಸರಿಯಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ವೈದ್ಯಕೀಯ ವೃತ್ತಿಯವರ ಸ್ಥಿತಿಗತಿ

ಕೊರೋನಾದಿಂದಾಗಿ ಶಿಫ್ಟ್‌ಗಳ ಅರ್ಥವನ್ನೇ ತಿಳಿಯದವರಂತೆ ಹಗಲು ರಾತ್ರಿ ದುಡಿಯುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಮಕ್ಕಳಿದ್ದಾರೆ, ಕುಟುಂಬವೂ ಇರುತ್ತೆ. ಆದರೆ ಕೊರೋನಾ ಬಂದ ಮೇಲೆ ಇವೆಲ್ಲವೂ ಅವರ ಎರಡನೇ ಆದ್ಯತೆ ಆಗಿಬಿಟ್ಟಿದೆ. ಅನಿವಾರ್ಯತೆಯ ಜೊತೆಯಲ್ಲಿ ವೃತ್ತಿ ಧರ್ಮ ಅವರನ್ನು ಮನೆಯಲ್ಲಿರಲು ಬಿಡುತ್ತಿಲ್ಲ. ತಮ್ಮ ಕೆಲಸ ಕೊರೋನಾ ಕಾಲದಲ್ಲಿ ಎಷ್ಟು ಅಪಾಯಕಾರಿ ಎಂದು ತಿಳಿದರೂ ಕೆಲಸಕ್ಕೆ ರಜೆ ಹಾಕಿ ಮನೆಯಲ್ಲಿರದೆ ಸೇವೆಗೆ ಹಿಂಜರಿಯದೆ ಕೆಲಸ ಮಾಡುತ್ತಿದ್ದಾರೆ.

ಇಂದು ಕೊರೋನಾ ಕಾಣಿಸಿಕೊಂಡ ನಂತರ ಕನಿಷ್ಠ 3000 ದಾದಿಯರು ಮತ್ತು 100ಕ್ಕೂ ಅಧಿಕ ವೈದ್ಯರು ಸಾವನ್ನಪ್ಪಿದ್ದಾರೆ. ಜಾಗತಿಕವಾಗಿ ಒಟ್ಟು ಪ್ರಕರಣಗಳಲ್ಲಿ 10%ಗಿಂತ ಹೆಚ್ಚಿನವರು ಆರೋಗ್ಯ ಕಾರ್ಯಕರ್ತರಾಗಿದ್ದಾರೆ ಎಂದು ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ನರ್ಸಸ್ (ಐಸಿಎನ್) ವರದಿಯಲ್ಲಿ ಹೇಳಿತ್ತು. ಕಳೆದ ವರ್ಷ ಮಾರ್ಚ್‌ನಿಂದ ವಿಶ್ವಾದ್ಯಾಂತ 60 ರಾಷ್ಟ್ರಗಳಲ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಡಿ ಮಡಿದ ದಾದಿಯರ ಸಂಖ್ಯೆ 3 ಸಾವಿರ.

ಕೊರೋನಾ ಎರಡನೇ ಅಲೆಯಲ್ಲಿ ಸೋಂಕಿನಿಂದಾಗಿ ಏಪ್ರಿಲ್‌ನಲ್ಲಿ ಇದುವರೆಗೆ ಕನಿಷ್ಠ 40ವೈದ್ಯರು ಅಸುನೀಗಿದ್ದಾರೆ, ಎಂದು ಭಾರತೀಯ ವೈದ್ಯಕೀಯ ಸಂಘ ಹೇಳಿದೆ. ಕಳೆದ ವರ್ಷ ದೇಶಾದ್ಯಂತ 730 ವೈದ್ಯರು ಮೃತಟ್ಟಿದ್ದರು.

ಹಗಲು, ರಾತ್ರಿ ಎಂಬ ಪರಿವೆಯಿಲ್ಲದೆ, ಪಿಪಿಇ ಕಿಟ್, ಮಾಸ್ಕ್ ಧರಿಸಿ ನಾಲ್ಕು ಗೋಡೆಯ ಮಧ್ಯೆ ಕೊರೋನಾ ರೋಗಿಗಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿರುವ ದಾದಿಯರು, ವೈದ್ಯರು ತಮ್ಮ ಮನೆಗೆ ಹೋಗದೇ ಅದೆಷ್ಟು ಸಮಯವಾಯ್ತೋ,, ಗೊತ್ತಿಲ್ಲ 

ಹೋದರೂ ತಮ್ಮ ಮನೆಯವರ ಜೊತೆ ಕುಳಿತು ನೆಮ್ಮದಿಯಾಗಿ ಒಂದು ತುತ್ತು ಉಣ್ಣುವುದಕ್ಕಾದರೂ ಅವರಿಗೆ ಸಾಧ್ಯವೇ? ಪುಟ್ಟ ಮಕ್ಕಳನ್ನು ಎತ್ತಿ ಮುದ್ದಿಸಲು ಸಾಧ್ಯವೇ? ಖಂಡಿತಾ ಇಲ್ಲ. ಕೊರೋನಾ ಕುರಿತ ಹೆಚ್ಚಿನ ಜಾಗೃತಿ ಇರುವ ಇವರು ಸೋಂಕು ಹರಡುವ ಯಾವ ರಿಸ್ಕ್ ಕೂಡಾ ತೆಗೆದುಕೊಳ್ಳಲಾರರು.

 ಆರೋಗ್ಯ ಕಾಯ೯ಕತ೯ರನ್ನು ರಕ್ಷಿಸುವ ದೊಡ್ಡ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ.ಅವರ ಕಷ್ಟಗಳ ಶೇ.1ರಷ್ಟು ಕಷ್ಟವೂ ನಮಗಿಲ್ಲ. ಮನೆಯೊಳಗಿದ್ದು, ಸೋಂಕಿತರಾಗದೆ, ಸುರಕ್ಷಿತರಾಗಿದ್ದು ಅವರ ಹೊರೆ ಕಡಿಮೆ ಮಾಡುವುದೇ ಈ ಕೊರೋನಾ ಕಾಲದಲ್ಲಿ ನಾವು ಅವರಿಗೆ ನೀಡಬಹುದಾದ ಬಹುದೊಡ್ಡ ಕೊಡುಗೆ.

ಈ ಕರೋನಾದ 2ನೇ ಅಲೆಯ ಅವಧಿ ಅತ್ಯಂತ ಕ್ಲಿಷ್ಟ ಮತ್ತು ಜವಾಬ್ದಾರಿಯಾದದ್ದು ಜನಪ್ರತಿನಿಧಿಗಳು ಸೇರಿದಂತೆ ಎಲ್ಲರ ದೃಷ್ಠಿ ಇದೀಗ ಕರೋನಾ ವಾರಿಯಸ್೯ ಮೇಲಿದೆ.ಸದ್ಯದ ಮಟ್ಟಿಗೆ ತಮ್ಮ ಬದುಕನ್ನು ಪಣಕಿಟ್ಟು ದುಡಿಯುವ ಸೈನಿಕರಂತೆ ಈ ಕರೋನಾ ಯುದ್ಧದಲ್ಲಿ ವೈದ್ಯಕೀಯ ರಂಗದವರು ದುಡಿಯುತ್ತಿದ್ದಾರೆ. ನಾವೆಲ್ಲರೂ ಸ್ಪಲ್ಪ ಸಹನೆಯಿಂದ ಅವರಿಗೆ ಸಹಕಾರ ನೀಡಬೇಕಾಗಿದೆ.ಒಂದು ವೇಳೆ ಅವರು ನಮಗೆ ಈ ಕೆಲಸ ಬೇಡ ಎಂದು ಕೈಚೆಲ್ಲಿ ಕುಳಿತರೆ ಸಮಾಜದ ಸ್ಥಿತಿಗತಿ ಏನಾಗಬಹುದು . ಹೀಗಾಗಿ ಈ ಕರೋನಾ ಯುದ್ದದಲ್ಲಿ ನಾವು ಕೂಡ ಕೈ ಜೋಡಿಸಬೇಕಾಗಿದೆ.

ಸಕಾ೯ರ ಕೂಡ ಬೇಕಾದ ಎಲ್ಲಾ ರೀತಿಯ ಮೂಲಭೂತ ವೈದ್ಯಕೀಯ ವ್ಯವಸ್ಥೆಯನ್ನು ಒದಗಿಸಬೇಕು ಆದೇಶಗಳು ಕೇವಲ ಸಭೆಗೆ ಮೀಸಲಾಗದೆ ಜಾರಿರೂಪಕ್ಕೆ ಬರಬೇಕು.

ಲಾಕ್ ಡೌನ್ ಸಮಯದಲ್ಲಿ ಎಲ್ಲಾ ಇಲಾಖೆಗಳ ಸಿಬ್ಬoದಿಗಳನ್ನು ಬಳಸಿ ಆರೋಗ್ಯ ಸೇವೆಗಳ ಬಲವಧ೯ನೆಗೆ ಇಚ್ಚಾಶಕ್ತಿ ಪ್ರದಶಿ೯ಸಬೇಕಾಗಿದೆ. ಈ ಪರೀಕ್ಷೆಯ ಕಾಲದಲ್ಲಿ ಎಲ್ಲಾ ರಾಜಕೀಯ ಪಕ್ಷದವರು ಸಕಾ೯ರಕ್ಕೆ ಸಲಹೆ ನೀಡಬೇಕು.

ಒಟ್ಟಾಗಿ ವೈದ್ಯಕೀಯ ರಂಗದವರ ಸೇವೆ ಶಬ್ದಗಳಲ್ಲಿ ವಿವರಿಸಲಾಗದು ಅವರಿಗೆ ಪ್ರಶಂಸೆ ನೀಡದಿದ್ದರೂ ಪರವಾಗಿಲ್ಲ ಆದರೆ ಟೀಕೆ ಮಾಡುದನ್ನು ನಿಲ್ಲಿಸಿ .ಅವರೆಲ್ಲರ ಸೇವೆಗೆ ಬಲುದೊಡ್ಡ ಸಲಾಂ ಅವರೆಲ್ಲರೂ ಆರೋಗ್ಯವಾಗಿರಲಿ. ಎಂಬ ಶುಭ ಹಾರೈಕೆ ನಮ್ಮದು.ವೈದ್ಯ ದಿನಾಚರಣೆ ಅವರಿಗೆ ಶುಭ ತರಲಿ.

 

 

 
 
 
 
 
 
 
 
 
 
 

Leave a Reply