ನಿಮ್ಮ ಫೋನ್ ಕಳೆದು/ ಕದ್ದು ಹೋದಲ್ಲಿ, ಗೂಗಲ್ ನ ಈ ಸೇವೆ ಸಹಾಯಕ~ ಕಿರಣ್ ಪೈ. 

ಗೂಗಲ್ ಸರ್ಚ್, ಇಮೇಲ್, ಮ್ಯಾಪ್, ನ್ಯೂಸ್, ಅರ್ಥ, ಚಾಟ್,ಕ್ಯಾಲೆಂಡರ್, ಟ್ರಾನ್ಸಲೇಟರ್, ಮೀಟ್, ಹ್ಯಾಂಗ ಔಟ್, ಯೂ ಟ್ಯೂಬ್, ಶಾಪಿಂಗ್ ಈಗ ಗೂಗಲ್ ಪೇ….ಹತ್ತು ಹಲವು ಸೇವೆಗಳು….
ಗೂಗಲ್ ನ ಒಂದೊಂದು ಸೇವೆ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಇತ್ತೀಚೆಗೆ ಯು.ಪಿ.ಐ ಸಂಖ್ಯೆ ಬಳಸಿ ಗೂಗಲ್ ಪೇ, ಭಾರತದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ಪೇಯ್ಮೇಂಟ್ ಅಪ್ಲಿಕೇಶನ್.ತಮ್ಮ ತಮ್ಮ ವಿಚಾರ, ಶೋಧ, ಅವಶ್ಯಕತೆಯ ಪರಿಧಿಯಲ್ಲಿ, ಸಾಮಾಜಿಕ ಅಪ್ಲಿಕೇಷನ್, ಇಂಟರ್ನೆಟ್ ನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿದರೆ, ಸಕಾರಾತ್ಮಕ ವಿಷಯಗಳೇ ಸಿಗುತ್ತದೆ.
 ಸರ್ವೇ ಪ್ರಕಾರ ಸ್ಮಾರ್ಟ್ ಫೋನ್, ಕಂಪ್ಯೂಟರ್ ಬಳಸುವ ವ್ಯಕ್ತಿ ದಿನಕ್ಕೆ ಬೇರೆ ಬೇರೆ ಕಾರಣಗಳಿಗೆ, ಕನಿಷ್ಟ 30ರಿಂದ 60 ನಿಮಿಷ ಗೂಗಲ್ ಹಾಗೂ ಅದರ ಇತರ ಸೇವೆಯನ್ನು ಬಳಸುತ್ತಾನೆ.
ಫೈಂಡ್ ಮೈ ಡಿವೈಸ್ ಹೆಸರಿನ ಗೂಗಲ್ ಸೇವೆ ಇದೆ: ಯಸ್….ಸ್ಮಾರ್ಟ್ ಬೆಲೆಬಾಳುವ ಮೊಬೈಲ್ ಕಳೆದು/ ಕದ್ದು ಹೋಯಿತು ಏನು ಮಾಡಲಿ? ಅದೆಷ್ಟು ಡಾಟಾ, ಗೌಪ್ಯ, ವಿಷಯ, ಮೇಸೆಜ್, ಫ್ಯಾಮಿಲಿ ಚಿತ್ರ, ವಿಡಿಯೋ ಇತ್ಯಾದಿ ಇತ್ತು.. ಎಂದು ಕಳೆದುಕೊಂಡ ವ್ಯಕ್ತಿ ಟೆನ್ಷನ್ ಮಾಡುವುದು ಸಹಜ. 
ಪೋಲೀಸ್ ಕಂಪ್ಲೇಂಟ್ ಕೂಡ ಕೊಡದೆ ಡಿಪ್ರೇಷನ್ ಗೆ ಹೋದದ್ದು ಇದೆ. ಒಂದು ವೇಳೆ ಕದ್ದು ಹೋಯಿತು, ಎಲ್ಲಿ ಬಿತ್ತೋ ಗೊತ್ತಿಲ್ಲ,. ಗಾಬರಿ ಬೇಡ.!! ದೀರ್ಘ ಉಸಿರಾಟ ತೆಗೆದುಕೊಂಡು ಮೊದಲು ಯೋಚಿಸಿ.. ಕೊನೆಗೆ ಹೋದದ್ದು ಎಲ್ಲಿ,? ಯಾರನ್ನು ಬೇಟಿಯಾದದ್ದು? ಟ್ರಾವೆಲ್ ಹಿಸ್ಟರಿ .ಇಲ್ಲ ಏನು ತಿಳಿತಾ ಇಲ್ಲ….!!ಸರಿ, ಟೆನ್ಷನ್ ಬೇಡ…
ಒಂದೆರಡು ಸಲ ನಿಮ್ಮ ನಂಬರ್ ಗೆ ಬೇರೆ ಮೊಬೈಲ್ ನಿಂದ ಕರೆ ಮಾಡಿ ರಿಂಗ್ ಆಗಿ ಯಾರಾದರೂ ರಿಸೀವ್ ಮಾಡಿದಲ್ಲಿ ರಿಕ್ವೆಸ್ಟ್ ಮಾಡಿ. ಸ್ವೀಚ್ ಆಫ್ ಬಂದಲ್ಲಿ ಗಡಿಬಿಡಿ ಬೇಡ.. ಡೈರೆಕ್ಟ್ ಸಿಮ್ ಬ್ಲಾಕ್ ಮಾಡಿ. (ಆನ್ಲೈನ್, ಕಸ್ಟಮರ್ ಕೇರ್, ಅಥವಾ ಹತ್ತಿರದ ನಿಮ್ಮ ಸಿಮ್ ಕಂಪೆನಿಯ ಕಛೇರಿಗೆ ಹೋಗಿ ಮಾಡಬಹುದು) ಆಮೇಲೆ ಹತ್ತಿರದ ಪೋಲಿಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟು ಎಫ್.ಐ.ಆರ್ ಕಾಪಿ ಪಡೆದುಕೊಳ್ಳಿ ಇದು ಬಹಳ ಮುಖ್ಯ…!
ಬ್ಲಾಕ್, ಕಂಪ್ಲೇಂಟ್ ಕೊಟ್ಟ ನಂತರ, ನಿಮಗೆ ಗೂಗಲ್ ನ ಅನೇಕರಿಗೆ ತಿಳಿಯದ ಸಹಾಯಕಾರಿ ಫೀಚರ್ ಬಗ್ಗೆ ಹೇಳಿ ಕೊಡುತ್ತೇನೆ. ” ಫೈಂಡ್ ಮೈ ಡಿವೈಸ್” – FIND MY DEVICE (ನನ್ನ ಉಪಕರಣ ಶೋಧಿಸು ). ಒಂದು ರೀತಿಯ ಕಮಾಂಡ್ ನೀವು ಗೂಗಲ್ ಗೆ ಕೊಟ್ಟಂಗೆ. ಇದರಲ್ಲಿ ಯಾವುದೇ ರಾಕೆಟ್ ವಿಜ್ಞಾನ ಇಲ್ಲ. 
ನೀವು ಆಂಡ್ರಾಯ್ಡ್ ಫೋನ್ ಬಳಕೆದಾರರಾಗಿದ್ದಲ್ಲಿ ನಿಮ್ಮ ಫೋನ್ ನಲ್ಲಿ ಈ  ಸೆಟ್ಟಿಂಗ್ ಮಾಡ್ಕೊಳ್ಳಿ, Settings>Google/ Services>Find My Device>On. ಒಂದು ವೇಳೆ ಮೊಬೈಲ್ ಕಳೆದು ಹೋದಲ್ಲಿ ಈ ಸೆಟ್ಟಿಂಗ್  ಹೇಗೆ ಕೆಲಸ ಮಾಡುತ್ತದೆ ಬನ್ನಿ ನೋಡುವ. 
ಕಂಪ್ಯೂಟರ್ ಮೂಲಕ ಗೂಗಲ್ ನಲ್ಲಿ ಫೈಂಡ್ ಮೈ ಡಿವೈಸ್ ಸರ್ಚ್ ಮಾಡಿ, ಪೇಜ್ ಓಪನ್ ಆದ ತಕ್ಷಣ ಗೂಗಲ್ ಇಮೇಲ್ ಮೂಲಕ ಲಾಗ್ ಇನ್ ಮಾಡಿಕೊಳ್ಳಿ. ಮೇಲಿನ ಸೆಟ್ಟಿಂಗ್ ನಿಮ್ಮ ಕಳೆದು ಹೋದ ಮೊಬೈಲ್ ನಲ್ಲಿ ಇರುವುದರಿಂದ ಮೊಬೈಲ್ ಮಾಡೆಲ್ ಪೇಜ್ ಮೇಲೆ ಕಾಣುತ್ತದೆ, ಅದನ್ನು ಕ್ಲಿಕ್ ಮಾಡಿದಂತೆ, 3 ಆಪ್ಶನ್ ಕಾಣುತ್ತೀರಿ.
ಪ್ಲೇ ಸೌಂಡ್: ಕಳೆದುಕೊಂಡ ಮೊಬೈಲ್ ಯಾರಾದರೂ ಸೈಲೆಂಟ್ ಮಾಡಿದ್ರೂ ನೀವು ಇಲ್ಲಿ ಕ್ಲಿಕ್ಕಿಸಿದ ತಕ್ಷಣ ಅಲ್ಲಿ ಮೊಬೈಲ್ 5 ನಿಮಿಷ ರಿಂಗಣೀಸುತ್ತದೆ. ಒಂದು ವೇಳೆ ನಿಮ್ಮ ಆಸುಪಾಸು ನೀವೇ ಮರೆತು,ಸೈಲೆಂಟ್ ಇಟ್ಟುಕೊಂಡಿದ್ದು, ಮೊಬೈಲ್ ಕಾಣದೇ ಹೋದಲ್ಲಿ , ಈ ರೀತಿ ಹುಡುಕಲು ಸುಲಭ. 
ಸೆಕ್ಯೂರ್ ಡಿವೈಸ್: ಇಲ್ಲಿ ಕ್ಲಿಕ್ ಮಾಡಿದ ತಕ್ಷಣ ಮೇಸೆಜ್ ಕಳಿಸಲು ಅವಕಾಶವಿದೆ. ಯಾರಿಗಾದರೂ ಮೊಬೈಲ್ ಸಿಕ್ಕ ಪಕ್ಷದಲ್ಲಿ ವ್ಯಕ್ತಿ ಗೆ ಮೇಸೆಜ್ ಮಾಡಿ ರೀಡ್ ಲೊಕೆಷನ್ ಟ್ರೇಸ್ ಮಾಡಬಹುದು. ಹಾಗೂ ಫೋನ್ ಸ್ಕ್ರೀನ್ ಲಾಕ್ ಆಗುವುದು. ಸ್ಕ್ರೀನ್ ಲಾಕ್ ಇಲ್ಲದೆ ಮೊಬೈಲ್ ಆಪರೇಟ್ ಮಾಡೋದು ಕಷ್ಟ. ಅಲ್ಲದೆ ಆತನಿಗೆ ಸ್ವಲ್ಪ ಗಾಬರಿಯಾದಿತು.ಎಲ್ಲಿಂದ ಟ್ರಾಕ್ ಮಾಡಲಾಗುತ್ತಿದೆ ಎಂದು.
ಇರೇಸ್ ಡಿವೈಸ್: ಕಳೆದುಕೊಂಡ ಮೊಬೈಲ್ ನಲ್ಲಿ ಯಾವುದೇ ಪರ್ಸನಲ್ ವಿಷಯಗಳು, ಗೌಪ್ಯತೆ ಲೀಕ್ ಆಗುತ್ತದೆ ಎಂಬ ಭಯ ಇರುವುದಿಲ್ಲ, ಈ ಆಪ್ಶನ್ ಒತ್ತಿದಂತೆ ನಿಮ್ಮ ಇಡೀ ಮೊಬೈಲ್ ನ ಪೂರ್ತಿ ಡಾಟಾ ಕ್ಲೀನ್ ಆಗುವುದು. 
ಇಷ್ಟೆಲ್ಲಾ ಆದ ಮೇಲೆ ನಿಮಗೆ ಮತ್ತು ಸ್ವಲ್ಪ ಆಶಾದಾಯಕ ರಿಲೀಫ್. ಕೊನೆಯದಾಗಿ ನಿಮ್ಮ ಫೋನ್ ನಲ್ಲಿ ಜೀಮೇಲ್ ಆನ್ ಇದ್ದರೆ ಫೋನ್ಕೆ ಲಾಸ್ಟ್ ಲೊಕೆಷನ್ ಡಿಟೇಲ್ಸ್ ಪಕ್ಕದ ಮ್ಯಾಪ್ ನಲ್ಲಿ ಕಾಣಬಹುದು. ಈ ರೀತಿ ತಕ್ಕ ಮಟ್ಟಿಗೆ ಗೂಗಲ್ ನಿಮಗೆ ಕಳೆದು/ ಕದ್ದು ಹೋದ ಮೊಬೈಲ್ ಸೇಫ್ ಇರುವಂತೆ ಮಾಡಲು ಸಹಾಯಕ. 
ಈ ಫೀಚರ್, ಫೋನ್ ನಿಮ್ಮ ಬಳಿ ಇದ್ದಾಗಲೇ ಲಾಗ್ ಇನ್ ಮಾಡಿ ಪ್ರಾಕ್ಟಿಕಲ್ ಆಗಿ ನೋಡಬಹುದು. ಒಮ್ಮೆಪ್ರಯತ್ನಿಸಿ. 
ಸಿ.ಇ.ಐ.ಆರ್.ಕಂಪ್ಲೇಂಟ್: ಫೈಂಡ್ ಮೈ ಡಿವೈಸ್ ಪೇಜ್ ನ ಎಡಭಾಗದಲ್ಲಿ ಮೇಲೆ ನಿಮ್ಮ ಫೋನಿನ IMEI ನಂಬರ್ ಸೇವ್ ಆಗಿರುತ್ತದೆ. ಎಲ್ಲರ ಬಳಿ, ಪ್ರತಿ ಕ್ಷಣ ಮೊಬೈಲ್ ಬಿಲ್ ಇರುವುದಿಲ್ಲ, ಆಗಾಗಿ IMEI ನಂಬರ್ ಬಳಸಿಕೊಂಡು ನೀವು ನಿಮ್ಮ ಮೊಬೈಲ್ ಬ್ಲಾಕ್ ಮಾಡಬಹುದು. ಹೌದು ಫ್ರೆಂಡ್ಸ್,.. ಕದ್ದ ವ್ಯಕ್ತಿ ಅಥವಾ ಸಿಕ್ಕ ವ್ಯಕ್ತಿ ನಿಮ್ಮ ಮೊಬೈಲ್ ಏನು ಮಾಡದಂತೆ ಮಾಡಬಹುದು. ನೀವು ಮಾಡಬೇಕಿರುವುದು ಏನು?
ಮೊಬೈಲ್ ಕಳೆದು ಹೋಗಿದೆ, ಸಿಮ್ ಬ್ಲಾಕ್ ಆಯಿತು, ಪೋಲೀಸ್ ಕಂಪ್ಲೇಂಟ್ ಆಗಿದೆ, ಫೈಂಡ್ ಮೈ ಡಿವೈಸ್ ನಲ್ಲಿ ಯಾರೋ ಮೊಬೈಲ್ ಬಳಸುವ ಕ್ಲೂ ಸಿಕ್ಕಿದೆ, ವಾಟ್ ನೆಕ್ಸ್ಟ್? ತಕ್ಷಣ ಇಂಟರ್ನೆಟ್ ಮೂಲಕ www.Ceir.Gov.In ಗೆ ಲಾಗ್ ಇನ್ ಮಾಡಿ,CEIR ಸೆಂಟ್ರಲ್ ಇಕ್ವೀಪ್ ಮೆಂಟ್ ಐಡೆಂಟಿಟಿ ರಿಜಿಸ್ಟರ್.
ಇದು ಕೇಂದ್ರದ ದೂರಸಂಪರ್ಕ, ಟೆಲಿಕಾಂ ವಿಭಾಗದ ವೆಬ್ಸೈಟ್. ಸರ್ಕಾರ ಕದ್ದು/ ಕಳೆದು ಹೋದ ಮೊಬೈಲ್ ಬ್ಲಾಕ್ ಮಾಡೋ ಉದ್ದೇಶದಿಂದ ಈ ವೆಬ್ ಸೈಟ್ ಆರಂಭಿಸಿದೆ. ಪೇಜ್ ಓಪನ್ ಮಾಡಿದಾಕ್ಷಣ ಕೆಳಗೆ 3 ಆಪ್ಶನ್ ಕಾಣುತ್ತದೆ. 
1) ಬ್ಲಾಕ್ ಸ್ಟೋಲ್ ನ್/ಲಾಸ್ಟ್ ಮೊಬೈಲ್: IMEI ಬ್ಲಾಕ್ ಮಾಡಬೇಕು ಎಂದಾದರೆ ಇಲ್ಲಿ ಕೇಳಿದ ಎಲ್ಲಾ ಮಾಹಿತಿ ತುಂಬಿರಿ,ಬ್ರಾಂಡ್,ಬಿಲ್,ಮಾಡೆಲ್, ಕಳೆದುಕೊಂಡ ಸ್ಥಳ, ದಿನಾಂಕ, ಪೋಲಿಸ್ ಠಾಣೆ, ಎಫ್.ಐ.ಆರ್ ಕಾಪಿ, ಇತ್ಯಾದಿ. ಕೊನೆಗೆ ಸಬ್ಮಿಟ್ ಮಾಡಿ. ನಿಮಗೆ ಕಂಪ್ಲೇಂಟ್ ರಿಜಿಸ್ಟರ್ ಆದ ಮೇಸೆಜ್ ಬರುತ್ತದೆ. ಅದನ್ನು ನೋಟ್, ಸೇವ್ ಮಾಡಿ. ಒಂದು ವೇಳೆ ಮೊಬೈಲ್ ಸಿಕ್ಕಾಗ ಅನ್ಲಾಕ್ ಮಾಡಲು ಬೇಕಾಗುತ್ತದೆ.
2)ಅನ್ ಬ್ಲಾಕ್ / ಫೌಂಡ್ ಮೊಬೈಲ್: ಮೊಬೈಲ್ ಸಿಕ್ಕ ಬಳಿಕ, ಅನ್ ಲಾಕ್ ಮಾಡುವ ವಿಧಾನ, ಸೇವ್ ಮಾಡಿದ ಕಂಪ್ಲೇಂಟ್ ರಿಕ್ವೆಸ್ಟ್ ನಂಬರ್, ಮೊಬೈಲ್ ಸಂಖ್ಯೆ, ಅನ್ ಲಾಕ್ ಮಾಡುವ ಕಾರಣ ಇವುಗಳ ಮಾಹಿತಿ ಇಲ್ಲಿ ಕೊಡಬೇಕಾಗುತ್ತದೆ. 
3) ರಿಕ್ವೆಸ್ಟ್ ಸ್ಟೇಟಸ್: ಕಂಪ್ಲೇಂಟ್ ರಿಕ್ವೆಸ್ಟ್ ಸಂಬಂಧಪಟ್ಟ ಸ್ಟೇಟಸ್ ಇಲ್ಲಿ ನೋಡಬಹುದು. ಈ ವಿಧಾನಗಳನ್ನು ಅನುಸರಿಸಿ ನೀವು ಕಳೆದುಕೊಂಡ ಬೆಲೆಬಾಳುವ ದುಬಾರಿ ಮೊಬೈಲ್ ಗಳನ್ನು ಸಿಂಪಲಾಗಿ ಟ್ರಾಕ್ ಮಾಡಬಹುದು. 
ಈ ಮಾಹಿತಿ ಅನೇಕರಿಗೆ ತಿಳಿದಿದ್ದರೂ, ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ… ಕೆಲವರಂತೂ ಪೋಲಿಸ್ ಕಂಪ್ಲೇಂಟ್ ಕೂಡ ಕೊಡುವುದಿಲ್ಲ. ಸ್ವಲ್ಪ ದಿನ ಗಡಿಬಿಡಿ,ಗೊಂದಲ, ಟೆನ್ಷನ್ ಮಾಡಿ ಸುಮ್ಮನಾಗುತ್ತಾರೆ.
ಪರಿಣಾಮ ನಿಮ್ಮ ಮೊಬೈಲ್ ಇತರರ ಕೈಯಲ್ಲಿ ಮಿಸ್ ಯೂಸ್ ಆಗುತ್ತದೆ. ಒಮ್ಮೆ ಮೊಬೈಲ್ ಕಳೆದು ಹೋಯಿತು ಅಂದರೆ ಅದರ ಕಂಟ್ರೋಲ್ ನಿಮ್ಮ ಕೈಯಲ್ಲಿ ಇಲ್ಲ. ಕಾನೂನಿನ ಪ್ರಕಾರ  ರೆಕಾರ್ಡ್ಸ್ ನಿಮ್ಮ ಹೆಸರಲ್ಲಿ ಇರುವುದರಿಂದ ನಾಳೆ ಹೆಚ್ಚು ಕಡಿಮೆ ಆದಲ್ಲಿ, ನಿಮ್ಮ ಕೈಯಲ್ಲಿ ಕಂಪ್ಲೇಂಟ್ ಕಾಪಿನೂ ಇಲ್ಲದಿದ್ದರೆ… ಯಾರು ಹೊಣೆ? ಅಂತಹ ಸನ್ನಿವೇಶದಲ್ಲಿ ಮೇಲಿನ ವಿಧಾನಗಳು ತುಂಬಾ ಸಹಾಯಕ. ಟೆಕ್ನಾಲಜಿ ಎಷ್ಟು ಉಪಯುಕ್ತ ವೋ ಕೆಲವೊಂದು ಸಂದರ್ಭಗಳಲ್ಲಿ ಅಷ್ಟೇ ಡೆಂಜರ್, ಸೇಫ್ ಆಗಿ ಇರಿ…. ಹ್ಯಾಂಡಲ್ ವಿತ್ ಕೇರ್….!!
 
 
 
 
 
 
 
 
 
 
 

Leave a Reply