Janardhan Kodavoor/ Team KaravaliXpress
29.6 C
Udupi
Sunday, February 5, 2023
Sathyanatha Stores Brahmavara

ಇ-ಮಾಧ್ಯಮಗಳ ಸದ್ಭಳಕೆ~ಖಿನ್ನತೆಯಿಂದ ಪ್ರಸನ್ನತೆಗೆ..

ಕಟಪಾಡಿಯ ಪೊಸರು ಕೆ.ಎಮ್. ಶೆಣೈ ಕುಟುಂಬದ ‘ಝೂಮ್’ ಗಣೇಶ.
ಕಾಲ ಹೇಗೆಲ್ಲಾ ಬದಲಾವಣೆ ಯಾಗುತ್ತದೆ ಎಂದು ಅರಿತವರಿಗೂ, ಹೀಗೆಯೂ ಬದಲಾವಣೆ ಆಗುತ್ತದೆ ಎಂದು ಯಾರೂ ಊಹಿಸಿರ ಲಿಕ್ಕಿಲ್ಲ.  ಕಾರಣ ಪ್ರತೀ ವರ್ಷವೂ ವಿನಾಯಕ ಚೌತಿ ಧಾಮಂ~ ಧೂಮಂ ಅಂತ ಗಡದ್ದ್ ಆಗಿ ಮಾಡ್ತಾ ಇದ್ದ ಕೆ.ಎಮ್. ಶೆಣೈ ಫ್ಯಾಮಿಲಿ ಯವರು, ಎಲ್ಲರೂ ಒಂದೆಡೆ ಸೇರಿ ಸಂಭ್ರಮ ಪಡುತ್ತಿದ್ದ  ಆ ಸುಂದರ ಕ್ಷಣಗಳು ಮತ್ತೆ ಬಾರದೇ ಹೋಯಿತಲ್ಲಾ ಎಂಬ ಬೇಸರ ಒಂದೆಡೆ ಯಾದರೆ, ಈ ಸಲವೂ ಹೇಗಾದರೂ ಮಾಡಿ ನಮ್ಮ ಪ್ರಧಾನಿ ಮೋದಿಯವರು ಹೇಳಿದಂತೆ “ನಾವೆಲ್ಲರೂ ಶಾರೀರಿಕವಾಗಿ ದೂರದೂರ ವಿದ್ದರೂ, ಆಂತರಿಕವಾಗಿ, ಮಾನಸಿಕವಾಗಿ ತುಂಬಾ ಹತ್ತಿರದಲ್ಲಿ ಇದ್ದೇವೆ”, ಹೀಗೆ ಪಾಲಿಸಲು ಶೆಣೈ ಮತ್ತು ಅವರ ಸಹಮಿತ್ರರು ಯೋಚಿಸಿ ಈ ಸಲದ ಗೌರಿಗಣೇಶ ಹಬ್ಬದ ಸಂಭ್ರಮವನ್ನು ಸಾಧ್ಯವಾದ ಮಟ್ಟಿಗೆ ಹಳೇ ಸಂಭ್ರಮ ಮನೆಮಾಡುವಂತೆ ಮಾಡಲು ಯೋಚಿಸಿದರು.
ಕೆ.ಮಾಧವ ಶೆಣೈ ಫ್ಯಾಮಿಲಿಯ ಹಿರಿಯರು ಕಳೆದ ನಲವತ್ತೈದು ವರ್ಷಗಳಿಂದ ಪ್ರತೀ ವರ್ಷವೂ ದೂರದ ಮುಂಬಾಯಿ, ಬೆಂಗಳೂರು ಹೀಗೆ ಎರಡು ಮೂರು ದಿನದ ಮುಂಚಿತವಾಗಿ ಬಂದು ಹಬ್ಬದ ವ್ಯವಸ್ಥೆಗಳನ್ನು ಮಾಡಿ, ಒಟ್ಟಿಗೆ ಹಾಡು, ಹಾಸ್ಯ ಹೀಗೆ ಮಾಡುತ್ತಾ, ವಿವಿಧ ತರಹೇ ವಾರು ತಿನಿಸುಗಳನ್ನು ಮಾಡುತ್ತ, ಒಟ್ಟಾಗಿ ಸೇರಿ ಊಟ ಪ್ರಸಾದ ಸ್ವೀಕರಿಸಿ  ಜೀವನದ ನೋವು ನಲಿವುಗಳನ್ನು ಹಂಚಿಕೊಳ್ಳುತ್ತಾ ವಿನಾಯ ಕನ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದ ಆ ಕಾಲಕ್ಕೆ, ಈ ವರ್ಷದ ಈ ಕೊರೋನ ಮಾರಿಯೊಂದು ಅಡ್ಡಿಯಾಯಿತಲ್ಲಾ ಎಂಬ ಬೇಸರ ಎಲ್ಲರಲ್ಲಿಯೂ ಇತ್ತು, ಆದರೆ ಇದಕ್ಕೆ ಆಸ್ಪದ ಕೊಡದೇ ಏನಾದರೂ ಮಾಡಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಇವರು ಗಮನ ಹರಿಸಿದ್ದೇ ‘ಇ-ಮಾಧ್ಯಮ’ದ ಮೊರೆ.

ಈ ‘ಮಹಾ ಮಾರಿ’ಯಿಂದಾಗಿ ಇತ್ತೀಚಿನ ದಿನಗಳಲ್ಲಿ ಶಿಕ್ಷಣ, ಉದ್ಯಮ ಆನ್ -ಲೈನ್ ನಲ್ಲಿ ಆಗ್ತಾ ಇದೆ, ಹಾಗಿದ್ದಾಗ ಈ ಇ-ಮಾಧ್ಯಮಗಳ ಸೇತುವಾದ ಝೂಮ್, ಗೂಗಲ್ ಮೀಟ್ ನ ಸಹಾಯ ಪಡೆಯಲು ತೀರ್ಮಾನಿಸಿ, ಶೆಣೈ ಫ್ಯಾಮಿಲಿಯ ಕಿರಿಯರ ಸಹಕಾರದಿಂದ ಅವರ ಹಿರಿಯರ ಮನೆಯಲ್ಲಿ ಗೌರಿಗಣೇಶ ಹಬ್ಬದ ಸಂಭ್ರಮವನ್ನು ದೂರದ ಊರಿನಲ್ಲಿ ಕುಳಿತ ನಮ್ಮ ಹಿರಿ ಕಿರಿಯರಿಗೆ ನೋಡಲು ವ್ಯವಸ್ಥೆ ಕಲ್ಪಿಸಿ ದರು. ಇದಕ್ಕೆ ‘ಝೂಮ್ ಆ್ಯಪ್’ ಸಹಕಾರಿಯಾಯಿತು ಇವತ್ತಿನ ಗಣಪತಿಯ ಮಹಾಮಂಗಳಾರತಿಯ ಸಮಯಕ್ಕೆ ಸಮಯ ನಿಗಧಿ ಮಾಡಿ, ಮೀಟಿಂಗ್ ಕೋಡ್ ಅನ್ನು ಹಿರಿಯರು ಇರೋ ಮನೆಯ ಕಿರಿಯರಿಗೆ ಕಳಿಸಿ ಸರಿಯಾದ ಸಮಯಕ್ಕೆ ಲಾಗ್ ಇನ್ ಆಗಲು ತಿಳಿಸಿದರು, ಮೊಬೈಲ್ ಸ್ಟ್ಯಾಂಡ್ ಇಟ್ಟು, ಅದ್ರಲ್ಲಿ ಹೈ ಡೆಫಿನೇಶನ್ ಫೋಟೋ ಕ್ಯಾಪ್ಚರ್ ಮಾಡೋ ಮೊಬೈಲ್ ಇಟ್ಟು ನೇರ ದೃಶ್ಯಾವಳಿಗಳನ್ನು ನೇರ ಪ್ರದರ್ಶನ ಮಾಡಲು ಶುರು ಮಾಡಿದರು, ಮೊದಮೊದಲು ಈ ಪೂಜೆಯಲ್ಲಿ ಇದ್ದ ಹಿರಿಯರಿಗೆ ಇವರೇನೋ ಮಾಡ್ತಾ ಇದ್ದಾರೆ,

ಹೀಗೆ ವಿಡಿಯೋ ಮಾಡ್ತಾ ಇದ್ದಾರೆ ಅಂತ ತಿಳಿದ್ರು, ಯಾವಾಗ ಅವರ ಅಣ್ಣ, ತಮ್ಮ, ಅಕ್ಕ, ತಂಗಿ ದೂರದ ಊರಿನಿಂದ ಈ ಮೊಬೈಲ್ ಪರದೆಯ ಮೇಲೆ ಕಾಣೋಕೆ, ಮಾತಾಡೋಕೆ, ಕೈ ಮುಗಿಯೋಕೆ ಶುರುಮಾಡಿದ್ರೋ ಇವರೆಲ್ಲರ ಕಣ್ಣಲ್ಲಿ ಸಂತೋಷದ ಆನಂದಭಾಷ್ಪ ಹರಿಯ ತೊಡಗಿ ತಂತೆ. ನಲವತ್ತು ನಿಮಿಷಗಳ ಈ ಲೈವ್ ಅವರ ನಲವತ್ತು ಐವತ್ತು ವರ್ಷಗಳ ಹಳೆಯ ನೆನಪುಗಳನ್ನು ಮೆಲಕುಹಾಕಲು ಸಾಧ್ಯ ವಾಯಿತು. ನಮಗೆ ಗೊತ್ತಿರೋ ಕೆಲವೊಂದು ಇ-ಮಾಧ್ಯಮಗಳ ಬಳಕೆ ನಮ್ಮ ಹಿರಿಯರಿಗೂ ತಿಳಿಸಿದರೆ ಅವರ ಮನಸಿನ ಬೇಸರ ದೂರ ವಾಗಿ, ಖಿನ್ನತೆ ಯಿಂದ ಪ್ರಸನ್ನತೆಗೆ ಮನಪರಿವರ್ತಿಸಲು ಸಾಧ್ಯ. ಹಿರಿತನ ಎನ್ನೋದು ಅನುಭವದ ಸಾಗರ, ಕಿರಿತನ ಎನ್ನೋದು ಸಣ್ಣ ಜರಿ, ಈ ‘ಜರಿ’ ಜರಿಯದೇ, ಸದಾ ಹಿರಿಯರ ಆಸರೆಯಾಗಿದ್ದಲ್ಲಿ ಸಂತೋಷಕ್ಕೆ ಪಾರವೇ ಇಲ್ಲ..ಅಲ್ಲವೇ ..  ಜೈ  ‘ಝೂಮ್’ ಗಣೇಶ..  
ರಾಘವೇಂದ್ರ ಜಿ.ಜಿ, ಉಡುಪಿ
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!