ಕೃಷ್ಣನ ಮಹಿಮೆ ಎಂದರೆ ಇದು. ಜೀವನದುದ್ದಕ್ಕೂ ಬತ್ತದ ಉತ್ಸಾಹ. ಪ್ರಾಯ ಎಪ್ಪತ್ತರ ಹತ್ರ ಬಂದ್ರೂ ಇಪ್ಪತ್ತರ ತಾರುಣ್ಯದ ಚೈತನ್ಯದ ಚಿಲುಮೆಯಂತೆ ಬದುಕುವ ಸ್ಫೂರ್ತಿ ಜೀವನ ಪರ್ಯಂತ ರಾಧಾ ಕೃಷ್ಣರಂತೆ ಸರಸ ಸಲ್ಲಾಪದ, ಪ್ರೀತಿ ಪ್ರಣಯಗಳ ಆಗರ.
ಮಡದಿ ಮಾನಿನಿಗೆ ಮನೋಹರನಾಗಿಯೇ ಕೊಳಲೂದಿ ಕರೆಯುವ ಚಿರ ತಾರುಣ್ಯ. ಅದಕ್ಕೇ ದೇವಾನು ದೇವತೆಗಳು ಋಷಿಮುನಿಗಳು, ಹರಿದಾಸರುಗಳು ಕೃಷ್ಣನೆಡೆಗೆ ಆಕರ್ಷಿತರಾದರು.
ಕೃಷ್ಣ ಸಖ್ಯಾನಂದದಲ್ಲಿ ಭಾವಪರವಶರಾಗಿ ತೇಲಾಡಿದರು. ಸ್ತುತಿಸಿ ನುತಿಸಿ ಆರಾಧಿಸಿ ಪಾಡಿ ನಲಿದು ಕೊಂಡಾಡಿ ಕೃಷ್ಣನನ್ನು ಸಾಕ್ಷಾತ್ಕರಿಸಿಕೊಂಡು ಧನ್ಯರಾದರು. ಈ ಚಿತ್ರದಲ್ಲಿ ಉಡುಪಿಯ ಸಾಮಾಜಿಕ ಧಾರ್ಮಿಕ ಧುರೀಣ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಕಡಿಯಾಳಿ ರಾಮಚಂದ್ರ ಉಪಾಧ್ಯಾಯ ದಂಪತಿ.
ಇಳಿವಯಸ್ಸಲ್ಲೂ ತಾರುಣ್ಯದ ಲವಲವಿಕೆ ಉತ್ಸಾಹದಿಂದ ರಾಧಾ ಕೃಷ್ಣ ರಂತೆ ವೇಷ ಧರಿಸಿ ಸರಸದಲ್ಲಿರುವುದನ್ನು ಗಮನಿಸಿ. ತಾನು ಕೃಷ್ಣನಾಗಿ ಕೊಳೂದುತ್ತಾ ಮಡದಿ ರಾಧೆಯನ್ನು ಸೆಳೆಯುವ ಈ ಆನಂದ ಕ್ಷಣಕ್ಕೆ ಸಾಟಿಯಾವುದು ಹೇ ಕೃಷ್ಣ…ತುಭ್ಯಮ್ ನಮಃ