ಯಾರು ಬುದ್ದಿಮಾoದ್ಯರು?~ ಡಾ. ಶಶಿಕಿರಣ್ ಶೆಟ್ಟಿ

ಅಂದು ಕ್ಲಿನಿಕ್ ಗೆ ಬಂದರೆ ಒಬ್ಬ ಬುದ್ದಿ ಮಾಂದ್ಯ ಹುಡುಗ ಔಷದಿಗೆ ಬಂದಿದ್ದ, ಒಂದು 80 ವರ್ಷದ ಅಜ್ಜಿ ಈಗಷ್ಟೇ ಬಂದಿದ್ದರು.. ನನಗೆ ಆಶ್ಚರ್ಯ ಆಗಿತ್ತು. ಆ ಬುದ್ದಿಮಾoದ್ಯ ಹುಡುಗ ಅಜ್ಜಿಗೆ ಮೊದಲು ಒಳಗೆ ಕಳಿಸಿದ್ದ. ತಾನು ಮೊದಲು ಬಂದಿದ್ದರೂ ಅಜ್ಜಿಯನ್ನು ಒಳಗೆ ಕಳಿಸಿದ್ದ ಹುಡುಗನ ಬಗ್ಗೆ ನಿಜಕ್ಕೂ ಹೆಮ್ಮೆ ಇತ್ತು. ನನಗೆ ಅಷ್ಟರಲ್ಲಿ ಅಲ್ಲೊಂದು ಘಟನೆ ನಡೆದಿತ್ತು.
ದೊಡ್ಡ ಕಾರ್ ಅಲ್ಲಿ ಬಂದ ಹುಡುಗನೊಬ್ಬ ಅಜ್ಜಿಯನ್ನು ದಾಟಿ ಬಾಗಿಲು ದೂಡಿ ಒಳಗೆ ಬಂದಿದ್ದ. ನಮ್ಮಪ್ಪನಿಗೆ ಹುಷಾರಿಲ್ಲ ಔಷಧಿ ಕೊಡಿ ಎಂದ. ನಿಮ್ಮಪ್ಪನಿಗೆ ವಯಸ್ಸೆಷ್ಟು ಎಂದು ಕೇಳಿದೆ 60 ಎಂದ. ಅಲ್ಲ ಅಲ್ಲಿ 80 ವರ್ಷದ ಅಜ್ಜಿ ಇದ್ದಾರೆ. ಅವರನ್ನು ದೂಡಿ ಒಳಗೆ ಹೇಗೆ ಬಂದೇ? ಎಂದೆ.
ನೋಡಿ ಅಜ್ಜಿ ಜೊತೆ ಕೂರಲು, ಬುದ್ದಿ ಮಾಂದ್ಯರ ಜೊತೆ ಕೂರಲು ನನಗೆ ಟೈಮ್ ಇಲ್ಲ. ನನ್ನ ಔಷಧಿ ಕೊಟ್ಟರೆ ಹೋಗುತ್ತೇನೆ, ಎಂದು ರೋಪ್ ಹಾಕಿದ. ಅಜ್ಜಿ ಯನ್ನು ಕೂರಲು ಹೇಳಿ, ಅವನಿಗೆ ಬಾಗಿಲು ಅಲ್ಲಿದೆ ಎಂದು ತೋರಿಸಿ, ತೊಲಗುವಂತೆ ತಿಳಿಸಿದೆ. ಮುಖ ಕೆಂಪು ಮಾಡಿಕೊಂಡು ಹೊರ ಹೋದ, ಬುದ್ದಿ ಇಲ್ಲ.. ಎಂದೇನೇನೋ ಗೊಣಗುತ್ತಿದ್ದುದು ಕೇಳಿಸಿತು. ಗೊತ್ತಾಗಿರಲಿಲ್ಲ ಆ ಕ್ಷಣ.
ಅದೆಷ್ಟು ಸತ್ಯ ನೋಡಿ ಸ್ವಲ್ಪ ಹಣ, ಒಂದು ಕಾರು, ಒಂದು ಮನೆ ಇದೆ ಎಂದಾಕ್ಷಣ ಆ ಹಣದ ಹಾಗೇ ಒಮ್ಮೆmla ಯೋ , ಮಂತ್ರಿಯೋ ಆದ ತಕ್ಷಣ ಅದಿಕಾರದ ಮದವೇರುವ ಇಂತಹ ಅಹಂಕಾರಿ ಬುದ್ದಿ ಮಾಂದ್ಯ ಜನರಿಗೆ ತಾವು ಎಲ್ಲಿದ್ದೇವೆ ಎನ್ನುವುದನ್ನೇ ಮರೆತು ಬಿಡುತ್ತಾರೆ, ಇಂತಹ  ಜನರೇ ಸಾರ್ವಜನಿಕ ಹಣ ತಿಂದು ಜನರಿಗೆ, ಅಕ್ಕಿ ಬೇಕಾ, ಸಕ್ಕರೆ ಬೇಕಾ?, ಎಂದು ಕೇಳುವುದು, ಇಂತಹವರೇ ಕರ್ತವ್ಯ ನಿರತ ಸರಕಾರಿ ವೃತ್ತಿ ಮಾಡುವ ಜನರೊಂದಿಗೆ ವರಟಾಗಿ ಮಾತಾಡುವುದು, ಕಾರ್ಯಕರ್ತರಿಗೆ ಹೊಡೆಯುವುದು, ಕೆಟ್ಟ ಪದಗಳಿಂದ ಬಯ್ಯುವುದು ಮುಂತಾದ ಕೆಲಸ ಮಾಡುವ ಬುದ್ದಿಮಾಂದ್ಯ ವ್ಯಕ್ತಿಗಳನ್ನು ತಕ್ಷಣ ಅಲ್ಲಿಂದ ಓಡಿಸಿ ಬಿಡೋಣ.
ಯಾಕೆಂದರೆ ಈ ಶೋಕಿವಾಲಗಳು ಹಾಕಿ ಕೊಂಡಿರುವ ಬಟ್ಟೆ ಕೂಡಾ ನಾವು, ನೀವು (ಸಾರ್ವಜನಿಕರು) ಕೊಟ್ಟ ತೆರಿಗೆ ಹಣವೇ ಆಗಿದೆ ಅಲ್ಲವೇ?~ ಡಾ. ಶಶಿಕಿರಣ್ ಶೆಟ್ಟಿ
 
 
 
 
 
 
 
 
 
 
 

Leave a Reply