ಟಿಂಗ್ ಟಾಂಗ್~ ನಾಗಭೂಷಣ್ ಬೇಳೂರು 

 

ಕೆಲವು ವರ್ಷಗಳ ಹಿಂದೆ ಎಲ್ಲರ ಮನೇಲೂ ಇದೆ ಸದ್ದು.​ ​ ಹೌದು ಮೊದಲೆಲ್ಲ ಎಲ್ಲರ ಮನೆಯಲ್ಲೂ ಒಂದು ಸೈಕಲ್ ಇರ್ತಾ ಇತ್ತು.​ ​ಎಷ್ಟ್ ದೂರ ಹೋಗುದಿದ್ರು ಸೈಕಲ್ ತುಳಿದೆ ಹೋಗ್ತಾ ಇದ್ರೂ ಅದಕ್ಕೆ ಆವಾಗಿನವರೆಲ್ಲ ಅಷ್ಟ್ಟೊಂದು ಬಲಶಾಲಿ, ಬಲಶಾಲಿಗಿಂತ ತಾಳ್ಮೆ ಇರ್ತಾ ಇತ್ತು.. ಸೈಕಲ್ನಲ್ಲಿ ಅವರ ಸಂಸಾರವನ್ನೇ ಕರೆದು ಕೊಂಡು ಒಂದು ಊರಿಂದ ಇನ್ನೊಂದು ಊರಿಗೆ ಹೋಗ್ತಾ ಇರ್ತಾ ಇದ್ರು.

ಒಬ್ಬ ಮನೆಯ ಯಜಮಾನ ಸೈಕಲ್ ಹಿಂದೆ ತನ್ನ ಮಡದಿಯನ್ನು ಮುಂದೆ ಪುಟ್ಟದಾದ ಸೀಟ್ ನಲ್ಲಿ ತನ್ನ ಮಗುವನ್ನು ಕೂರಿಸಿಕೊಂಡು ಹೋಗ್ತಾ ಇರಬೇಕಾದ್ರೆ ಅವನ ಬಲ,ಧೈರ್ಯ, ತಾಳ್ಮೆ ಎಂತದ್ದು ಇರಬೇಕು​. ​ ಆದ್ರೆ ಇವಾಗ ಕಾರು ಬೈಕು ಇದ್ರು ಆ ಬಲ, ಧೈರ್ಯ, ಸಂತೋಷ ಇಲ್ಲ.
 
ಮುಖ್ಯವಾಗಿ ತಾಳ್ಮೆ ಮೊದಲೇ ಇಲ್ಲಾ.​ ​ಮೊದ್ಲು ಬೇಸಿಗೆ ರಜೆಯಲ್ಲಿ ಐಸ್ ಕ್ರೀಮ್ ಮಾರುವವ ಸೈಕಲ್ ತುಳಿದು ಬರ್ತಾ ಇದ್ದ. ಅವಾಗ ಐಸ್ ಕ್ರೀಮ್ ರುಚಿಯಾಗಿ ಇರ್ತಾ ಇತ್ತು ಬೆಲೆನೂ ಕಡಿಮೆ ಇತ್ತು.​ ​ಆದ್ರೆ ಇವಾಗ ಅದೇ ಐಸ್ಕ್ರೀಮ್ ಮಾರುವವ ರಿಕ್ಷಾದಲ್ಲಿ ಬರ್ತಾ ಇದ್ರು ಆ ರುಚಿ ನಮಗೆ ಸಿಕ್ತಾ ಇಲ್ಲಾ ಅನಿಸ್ತಾ ಇದೆ​. ನನ್ನ ಪ್ರಕಾರ ಈ ಸೈಕಲ್ ಅನ್ನೋದು ನ​ಮ್ಮಣ್ಣ  ದೈಹಿಕ  ಹಾಗೂ ಮಾನಸಿಕವಾಗಿಯೂ ಪ್ರಬಲಗೊಳಿಸುತ್ತೆ.

ಮೊದಲೆಲ್ಲ ಸೈಕಲ್ ಅನ್ನೋದು ಜೀವನದ ಒಂದು ಅಂಗವಾಗಿತ್ತು ಅಂದ್ರೆ ತಪ್ಪಿಲ್ಲ. ಆದ್ರೆ ಅದೇ ಸೈಕಲ್ ಇವಾಗ ನಮ್ಮ ದೇಹದ ಬೊಜ್ಜು ಕರಗಿಸಲು ಬಳಸುತ್ತೇವೆ ಅನ್ನಲು ನಮಗೆ ಬೇಸರ ಆಗುತ್ತೆ. ಬೆಳ್ಳಿಗ್ಗೆ ಎದ್ದ ನಂತರ 4-5 ಕಿಲೋ ಮೀಟರ್ ಸೈಕಲ್ ತುಳಿಯುತ್ತೇವೆ​. ​ ಯಾಕಾಗಿ ನಮ್ಮ ದೇಹದ ಸಾಮಾನ್ಯವಾಗಿ ಕರಗದ ಬೊಜ್ಜನ್ನು ಕರಗಿಸಲು. ಆದರೆ ಜನರೆಲ್ಲಾ ತಿರುಗಾಡುವ ಸಮಯದಲ್ಲಿ ಮನೆಯ ಹತ್ತಿರದ ಅಂಗಡಿಗೆ ಹೋಗಲು ಬೈಕ್ ​ಅಥವಾ  ಕಾರನ್ನು ಉಪಯೋಗಿಸುತ್ತೇವೆ. 
 
ಯಾಕೆ ​ಗೊತ್ತಾ – ಜನರು ನಮ್ಮನ್ನು ನೋಡಿ ಎಲ್ಲಿ ನಗುತ್ತಾರೆ ಅನ್ನುವ ಮನೋಭಾವ. ನಮ್ಮ ದೈತ್ಯ ಗಾತ್ರದ ದೇಹವನ್ನು ನೋಡಿ ನಕ್ಕರು ಪರವಾಗಿಲ್ಲ​​ ಆದರೆ ನಾವು ಸೈಕಲ್ ತುಳಿದು ಹೋಗುದನ್ನು ನೋಡಿ ಯಾರು ನಗಬಾರದು ಅಷ್ಟ್ಟೇ.

ಯಾಕೋ ಏನೋ ಜನರಿಗೆ ಈ ಸೈಕಲ್ ತುಳಿಯುವರನ್ನು ನೋಡಿದ್ರೆ ನಗು ಬರುತ್ತೆ. ಅವರ ಕೈ ಬೆರಳನ್ನು ಉದ್ದ ಮಾಡಿ ತೋರಿಸಿ ನಗುತ್ತಾರೆ.​ ಆದರೆ ಸೈಕಲ್ ತುಳಿಯುವರನ್ನು ಒಮ್ಮೆ ಕೇಳಿ ನೋಡಿ. ಅವರು ಅದರಲ್ಲೇ ತೃಪ್ತಿ ಪಡೆದಿರುತ್ತಾರೆ.​ ​ಆರೋಗ್ಯ ದ್ರಷ್ಟಿಯಿಂದ​,​ ​ಆರ್ಥಿಕ ದ್ರಷ್ಟಿಯಿಂದ ಈ ಸೈಕಲ್ ಒಂದು ಉತ್ತಮ ಸಾಧನ ಅಂತ ಹೇಳಿದ್ರೆ ತಪ್ಪಿಲ್ಲ​. ​

ಹೀಗೆ ಕಳೆದ ಭಾರಿ ಲಾಕ್ಡೌನ್ ಅಲ್ಲಿ ಒಂದು ಸೈಕಲ್ ತೆಗೆದುಕೊಂಡು ಹೀಗೆ ಮನೆ ಹತ್ತಿರ ಹೋಗ್ತಾ ಇರಬೇಕಾದ್ರೆ ಒಬ್ರು ಕರೆದು ಕೇಳಿದ್ರು. “ಹೊಯ್ ಎನ್ ​ಮಾರ್ರೆ ಲಾಕ್ಡೌನ್ ಅಲ್ಲಿ ಕೆಲಸ ಇಲ್ದೆ ಬೈಕ್ ಗೆ ಪೆಟ್ರೋಲ್ ಹಾಕಲಿಕ್ಕೆ ಹಣ ಇಲ್ಲದೆ ಸೈಕಲ್ ತುಳಿತ ಇದ್ದೀರಾ ಅಂದ್ರು” ನಾನು ಅದಕ್ಕೆ ಹುಂ ಅಂದೆ.

​​
ಅವರು ಏನೇ ತಿಳಿಯಲಿ ಆದರೆ ಅವರು ಈ ಸೈಕಲ್ ಮಹಿಮೆ ತಿಳಿದಿಲ್ಲ ಅನಿಸುತ್ತೆ.​ ಎರಡು ಚಕ್ರದ ಸೈಕಲ್ ​ನಲ್ಲಿ  ಹೋಗಿ ಬಿದ್ದು ಪೆಟ್ಟು ಮಾಡಿಕೊಂಡವರಿಲ್ಲ.​ ​ಆದರೆ ನಾಲ್ಕು ಚಕ್ರದ ಕಾರಿನಲ್ಲಿ ಹೋಗಿ ಬಿದ್ದು ಪ್ರಾಣ ಹೋದವರು ಇದ್ದಾರೆ.​ ​ಇದೆ ಅಲ್ವಾ ಸೈಕಲ್ ಮಹಿಮೆ..

ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ಹುಚ್ಚು ಹಿಡಿಸುವ ಬದಲು ಸೈಕಲ್ ಕೊಟ್ಟು ಹುಚ್ಚನ್ನು ಹಿಡಿಸಿ.  ಆ ಮಕ್ಕಳ ಆರೋಗ್ಯಕ್ಕೆ ಒಳ್ಳೇದು. ಅಲ್ಲದೆ ಒಂದು ಸಣ್ಣ ಜಾಗರೂಕತೆ ಸಹ ಬೆಳೆಯುತ್ತೆ.
​​

ಹೊ! ಟಿಂಗ್ ಟಾಂಗ್ ಅನ್ನುತ್ತಾ ಅಂಚೆ ಅಣ್ಣ ಬಂದಿದ್ದೆ ಗೊತ್ತ್ ಆಗಲಿಲ್ಲ.​ ​ಮತ್ತೆ ಸಿಗುವ
ವಿಶ್ವ ಬೈಸಿಕಲ್ ದಿನದ ಶುಭಾಶಯಗಳು​. ​
 
 
 
 
 
 
 
 
 
 
 

Leave a Reply