04/06/2021 ರಂದು ಉಡುಪಿ ನಗರ ಪ್ರದೇಶದ ಕೋವಿಡ್ ಲಸಿಕೆ ಬಗ್ಗೆ ಮಾಹಿತಿ 

ನಾಳೆ ಶುಕ್ರವಾರ ದಿನಾಂಕ 04.06.2021 ರಂದು ಉಡುಪಿ ಜಿಲ್ಲಾಸ್ಪತ್ರೆಯ ಸಂತ ಸಿಸಿಲಿ ಲಸಿಕಾ ಕೇಂದ್ರದಲ್ಲಿ ನಲವತೈದು ವರ್ಷ ಮೇಲ್ಪಟ್ಟ ನಾಗರಿಕರಿಗೆ ಮತ್ತು ಕೇಂದ್ರ ಸರಕಾರದ ಮಂಚೂಣಿ ಕಾರ್ಯಕರ್ತರಿಗೆ ಒಟ್ಟು 250 ಪ್ರಥಮ ಡೋಸ್ ಕೋವಿಷೀಲ್ಡ್ ಲಸಿಕೆ ವಿತರಣೆ ನಡೆಯಲಿದೆ.

ಮಣಿಪಾಲ ನಗರ ಪ್ರಾಥಮಿಕ ಅರೋಗ್ಯ ಕೇಂದ್ರದ ಮಾಧವ ಕೃಪಾ ಶಾಲೆಯ ಲಸಿಕಾ ಕೇಂದ್ರದಲ್ಲಿ 130 ಡೋಸ್ ಮತ್ತು ಉಡುಪಿ ನಗರ ಪ್ರಾಥಮಿಕ ಅರೋಗ್ಯ ಕೇಂದ್ರ ಅಲಂಕಾರ್ ಟಾಕೀಸು ಬಳಿಯ ಲಸಿಕಾ ಕೇಂದ್ರದಲ್ಲಿ 150 ಡೋಸ್ ಪ್ರಥಮ ಡೋಸ್ ಕೊವಾಕ್ಸಿನ್ ತೆಗೆದು ಕೊಂಡು ಆರು ವಾರ ಆದ ಸಾಮಾನ್ಯ ನಾಗರಿಕರಿಗೆ ಕೊವಾಕ್ಸಿನ್ ಎರಡನೇ ಡೋಸ್ ಲಸಿಕೆ ವಿತರಣೆ ನಡೆಯಲಿದೆ.

ಉಡುಪಿ ಬಿ ಆರ್ ಆಸ್ಪತ್ರೆ 200 ಹಾಗು ಆದಿಉಡುಪಿ ಶಾಲೆಯ ಲಸಿಕಾ ಕೇಂದ್ರದಲ್ಲಿ 150 ರಾಜ್ಯ ಸರಕಾರದ ಮಂಚೂಣಿ ಕಾರ್ಯಕರ್ತರಿಗೆ (18 to 45 age group) ಪ್ರಥಮ ಡೋಸ್ ಕೋವಿಷೀಲ್ಡ್ ಲಸಿಕೆ ವಿತರಣೆ ನಡೆಯಲಿದೆ.

ಹಿರೇಬೆಟ್ಟು ಪ್ರಾಥಮಿಕ ಅರೋಗ್ಯ ಕೇಂದ್ರದ ಪರ್ಕಳ ಬಿ ಎಂ ಶಾಲೆ ಲಸಿಕಾ ಕೇಂದ್ರದಲ್ಲಿ ನಲವತೈದು ವರ್ಷ ಮೇಲ್ಪಟ್ಟ ನಾಗರಿಕರಿಗೆ 300 ಪ್ರಥಮ ಡೋಸ್ ಕೋವಿಷೀಲ್ಡ್ ಲಸಿಕೆ ವಿತರಣೆ ನಡೆಯಲಿದೆ.

ಕುಕ್ಕಿಕಟ್ಟೆ ಪ್ರಾಥಮಿಕ ಅರೋಗ್ಯ ಕೇಂದ್ರದ ಲಸಿಕಾ ಕೇಂದ್ರದಲ್ಲಿ 120 ಕೋವಿಷೀಲ್ಡ್ ಎರಡನೇ ಡೋಸ್ ಲಸಿಕೆ ವಿತರಣೆ ನಡೆಯಲಿದ್ದು ಪ್ರಥಮ ಡೋಸ್ ತೆಗೆದು ಕೊಂಡು 84 ದಿನ ಆದವರಿಗೆ ಮಾತ್ರ ಅವಕಾಶವಿದೆ.

ಜಿಲ್ಲೆಯ ಇತರ ಕೇಂದ್ರಗಳಲ್ಲಿ ಪ್ರತ್ಯೇಕ ಮಾದರಿಯಲ್ಲಿ ಲಸಿಕೆ ವಿತರಣೆ ನಡೆಯಲಿದ್ದು ಲಸಿಕೆ ಪಡೆಯಲಿಚ್ಛಿಸುವ ನಾಗರಿಕರು ಮುಂಚಿತವಾಗಿ ಲಸಿಕಾ ಕೇಂದ್ರಗಳಿಗೆ ಫೋನ್ ಮಾಡಿ ಮಾಹಿತಿ ಪಡೆದು ಕಂಡ ನಂತರವೇ ಹೋಗ ಬೇಕು ಎಂದು ಜಿಲ್ಲಾ ಅರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

 
 
 
 
 
 
 
 
 
 
 

Leave a Reply