ಎಲ್ಲಿಗೆ ಬಂತು ನೋಡಿ ಈ ಮೊಬೈಲ್ ಅವಾಂತರ~ ನಾಗಭೂಷಣ್ ಬೇಳೂರು

ಅಯ್ಯೋ ಮಾರಾಯರೆ ಪುಸ್ತಕ ಹಿಡಿದು ಓದುವುದೇ ತಡ ನಿದ್ರೆ ಬರುತ್ತೆ ಅನ್ನುವವರು ಮಧ್ಯ ರಾತ್ರಿ ತನಕ ಮೊಬೈಲ್ಅನ್ನು ನಿದ್ರೆ ಬಿಟ್ಟು ಹಿಡಿದಿರುತ್ತಾರೆ. ಇತ್ತಿಚಿನ ದಿನದಲ್ಲಿ ಪುಸ್ತಕ ಓದುವವರ ಸಂಖ್ಯೆ ಬಹಳ ಕಡಿಮೆ ಆಗಿದೆ ಅಂದರೆ ತಪ್ಪಾಗದು. ಯಾವಾಗ ಕೈಯಲ್ಲಿ ಮೊಬೈಲ್ ಬಂತು ನೋಡಿ ಆವಾಗ ಪುಸ್ತಕ ಮೂಲೆ ಸೇರಿತು. 
ಇನ್ನು ಕೆಲವರಿಗೆ ಪುಸ್ತಕ ಓದಬೇಕು ಅನ್ನುವುದೇ ತಡ ಅವರ ಹಾರಿಕೆ ಉತ್ತರ ನೋಡಬೇಕು. “ಅಲ್ಲಾ ಸ್ವಾಮಿ ಆ ಪುಸ್ತಕದಲ್ಲಿ ಏನು ಬದನೇಕಾಯಿ ಇದೆ ಅಂತ ಓದಬೇಕು” ಅಂತ ಬದನೆಕಾಯಿ ಸಿಗುವ ಮೊಬೈಲ್ ಹಿಡಿದು ಹೇಳುದುಂಟು. ಆದರೆ ಆ ಪುಸ್ತಕದ ರುಚಿ ನಿಜವಾದ ಓದುಗನಿಗೆ ತಿಳಿದಿರುತ್ತೆ. 
ಮೊಬೈಲ್ ನಲ್ಲಿ ಚಂದ್ರನ ವಿಡಿಯೋ ಅಥವಾ ಫೋಟೋ ನೋಡಿದ್ರೆ ಚಂದ್ರ ಲೋಕಕ್ಕೆ ಹೋದ ಅನುಭವ ಆಗುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಪೂರ್ಣಚಂದ್ರ ತೇಜಸ್ವಿ ಅವರು ಬರೆದ ‘ಚಂದ್ರನ ಚೂರು’ ಪುಸ್ತಕ ಒಮ್ಮೆ ಓದಿ ನೋಡಿ ಚಂದ್ರ ಲೋಕಕ್ಕೆ ಹೋದ ಅನುಭವ ಆಗದೆ ಇದ್ದರೆ ಹೇಳಿ. ಇದೊಂದೇ ಪುಸ್ತಕ ಅಂತ ಅಲ್ಲಾ ಅದೆಷ್ಟ್ಟೋ  ಪುಸ್ತಕ ಸಹ ಇಂತಹ ಅನುಭವ ಕೊಡುತ್ತೆ. 
ಅದಕ್ಕೆ ಹೇಳೋದು ದೇಶ ಸುತ್ತ ಬೇಕು ಕೋಶ ಓದ ಬೇಕು ಅಂತ. ಒಂದು ಮಾತಿದೆ ತಲೆ ತಗ್ಗಿಸಿ ಪುಸ್ತಕ ಓದು ಅದು ನಿನನ್ನು ತಲೆ ಎತ್ತಿ ನೆಡೆಯುವಂತೆ ಮಾಡುತ್ತೆ ಅನ್ನೋದು ಸುಳ್ಳಲ್ಲ. ಮೊದಲೆಲ್ಲ ಮಕ್ಕಳಿಗೆ ಊಟ ಮಾಡಿಸುವಾಗ ನಿದ್ರೆ ಮಾಡಿಸುವಾಗ ಪುಸ್ತಕದ ಕಥೆ ಹೇಳಿ ಊಟ ನಿದ್ರೆ ಮಾಡಿಸ್ತಾ ಇದ್ರು.  ಆದ್ರೆ ಇವಾಗ ಎಲ್ಲಾ ಬದಲಾಗಿದೆ. ಊಟ ಮಾಡಿಸುವಾಗ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಬಿಟ್ರೆ ಕೆಲಸವೇ ಆಗಿ ಹೋಯಿತು ಅಂದುಕೊಳ್ಳಬೇಕು.

ಅದೇನೇ ಇರಲಿ.  ಆದಷ್ಟ್ಟು ಪುಸ್ತಕ ಓದುವ ಅಭ್ಯಾಸ ಮಾಡಿ ನೋಡಿ.  ಅದರಲ್ಲಿನ ಖುಷಿ ಮೊಬೈಲ್ ನಲ್ಲಿ ಸಿಗುವುದಿಲ್ಲ.

 
 
 
 
 
 
 
 
 
 
 

Leave a Reply