ಪುರ್ರನೆ ಹಾರಿ ಹೋದ ಗುಬ್ಬಚ್ಚಿ~ ~ಉಮೇಶ್ ಉಡುಪಿ

ಪುರ್ರನೆ ಹಾರಿ ಹೋದ ಗುಬ್ಬಚ್ಚಿ ಗೆ
ಹಾರಲು ಕಲಿಸು ಬಾ….
ಹಾರಲು ಕಲಿಸು ಬಾ…
ನೀರುಣಿಸುವೆ…ಕಾಳುಣಿಸುವೆ…
ಎಂದ ನಮ್ಮನೆ ಪೋರನದೇನಿದು
ಶೋಧನೆ..?

ಕಾಡು -ನಾಡಿನ‌ ನಡುವೆ
ಉಸಿರು ಕಟ್ಟುವ ಬದುಕು
ತನ್ನದೆನ್ನುವ ಗುಬ್ಬಚ್ಚಿಯದು
ಅರಣ್ಯರೋಧನೆ..!
ಯಾವ ಪೀಳಿಗೆ ಕಾಣುವುದೋ
ಯಾವ ಪೀಳಿಗೆ ಕಾಣದಾಗುವುದೋ..

ಒಂದು ಗುಟುಕು ಕಾಳಿಗೆ
ಒಂದು ಹನಿಯ ನೀರಿಗೆ
ಗುಬ್ಬಚ್ಚಿ ಗೂಡು ತೊರೆದು ಹಾರಿದೆ
ನಾವು ನೀಡಿದ ಸಾವಿಗೆ !!
~ಉಮೇಶ್ ಉಡುಪಿ

 
 
 
 
 
 
 
 
 
 
 

Leave a Reply