ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್‌ಗೆ ರಾಷ್ಟ್ರ ಮಟ್ಟದ ಅತ್ಯುತ್ತಮ ವಹಿವಾಟು ಅಭಿವೃದ್ಧಿ ಬ್ಯಾಂಕ್ ಪ್ರಶಸ್ತಿ

​​ಮುಂಬಯಿಯಲ್ಲಿ ನಡೆದ 14ನೇ ವಾರ್ಷಿಕರಾಷ್ಟ್ರೀಯ ಯ ಸಹಕಾರ ಬ್ಯಾಂಕಿಂಗ್  ಮತ್ತು NAFCUB CEO ಕ್ಲಬ್‌ನ ವರ್ಚುವಲ್ ಸಭೆಯಲ್ಲಿ 2019-20ನೇ ಸಾಲಿನ ಅಂತರ್ ರಾಜ್ಯ ಸಹಕಾರ ಬ್ಯಾಂಕುಗಳ (FCBA-2020)) ಪ್ರಶಸ್ತಿ ಗಳನ್ನು ಪ್ರಕಟಿಸಿದ್ದು, ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕಿಗೆ “ಕಿರು ಪಟ್ಟಣ ಸಹಕಾರ ಬ್ಯಾಂಕು”ಗಳ ಶ್ರೇಣಿಯಲ್ಲಿ ರಾಷ್ಟಮಟ್ಟದ ಅತ್ಯುತ್ತಮ ವಹಿವಾಟು ಅಭಿವೃದ್ಧಿ ಬ್ಯಾಂಕ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
2019-20ರ ಸಾಲಿನಲ್ಲಿ ಬ್ಯಾಂಕ್ ರೂ.2088-11 ಕೋಟಿ ವಹಿವಾಟು ನಡೆಸಿದ್ದು ಪ್ರಶಂಸೆಗೆ ಪಾತ್ರವಾಗಿದೆ. ಪ್ರಸ್ತುತ ಬ್ಯಾಂಕ್ ೧೦ ಶಾಖೆಗಳನ್ನು ಹೊಂದಿದ್ದು 8 ಶಾಖೆಗಳಲ್ಲಿ ATM ಸೌಲಭ್ಯ ವಿದ್ದು ಎಲ್ಲಾ ತರಹದ ಸಾಲಗಳು ಮತ್ತು ವಿವಿಧ ಠೇವಣಿಗಳು ಮತ್ತು RTGS, NEFT, IMPS, Swiping Machine ಅಲ್ಲದೇ ಹಲವಾರು ಬ್ಯಾಂಕಿಂಗ್  ಸೇವೆ ಗಳನ್ನು ಗ್ರಾಹಕರಿಗೆ ನೀಡುತ್ತಿದ್ದು ಉಡುಪಿಯ ಜನರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ  ಶ್ರೀ ಎಚ್. ಜಯಪ್ರಕಾಶ್ ಕೆದ್ಲಾಯರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ  ಪಿ. ರಾಘವೇಂದ್ರ ಭಟ್, ನಿರ್ದೇಶಕರಾದ  ಹೆಚ್.ಎನ್. ರಾಮಕೃಷ್ಣ ರಾವ್, ಎನ್. ರವೀಂದ್ರ ರಾವ್,  ಜಗನ್ನಾಥ್ ಜಿ.,  ಜಯಪ್ರಕಾಶ್ ಭಂಡಾರಿ,  ದೇವದಾಸ್,  ಭಾಸ್ಕರ್ ರಾವ್ ಕಿದಿಯೂರು,  ಎನ್. ಸೂರ್ಯಪ್ರಕಾಶ್ ರಾವ್,  ಮನೋರಮಾ ಎಸ್.,  ರೂಪಾ ಮೋಹನ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಕುಮಾರಸ್ವಾಮಿ ಉಡುಪ ಮತ್ತು ಮುಖ್ಯ ಸಲಹೆಗಾರರಾದ ಶ್ರೀ ಬಿ. ರಂಗನಾಥ ಸಾಮಗರವರು ಉಪಸ್ಥಿತರಿದ್ದರು.
ಬ್ಯಾಂಕಿನ ನಿರ್ದೇಶಕರಾದ ಶ್ರೀ ಎನ್. ಪ್ರಹ್ಲಾದ್ ಬಲ್ಲಾಳ್‌ರವರು ಶುಭ ಹಾರೈಸಿದರು.
 
 
 
 
 
 
 
 
 
 
 

Leave a Reply