ಡಾ. ಭಾರತಿ ಮರವಂತೆಗೆ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ

 ಬಿಜಾಪುರ: ರಂಗೋಲಿ ಕ್ಷೇತ್ರದಲ್ಲಿ ಪ್ರದರ್ಶನ, ಸಂಶೋಧನೆ, ತರಬೇತಿ, ಪ್ರಯೋಗಗಳನ್ನು ಮಾಡುತ್ತಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ  ಪ್ರಾಧ್ಯಾಪಕಿ ಡಾ. ಭಾರತಿ ಮರವಂತೆ, ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿಯನ್ನು  ಜ.30ರಂದು ಬಿಜಾಪುರದ ಮುದ್ದೆಬಿಹಾಳದಲ್ಲಿ ಸ್ವೀಕರಿಸಿದರು.

ಕರ್ನಾಟಕ ರಾಜ್ಯ ಯುವಸಂಘಗಳ ಒಕ್ಕೂಟ, ವಿಜಯಪುರ ಜಿಲ್ಲಾ ತಾಲೂಕು ಮುದ್ದೇಬಿಹಾಳ, ಧರ್ಮಯುದ್ಧ ದಿನಪತ್ರಿಕಾ ಬಳಗ, ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮುದ್ದೇಬಿಹಾಳದ ಅಂಬೇಡ್ಕರ್ ಭವನದಲ್ಲಿ 30ಜಿಲ್ಲೆಯ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಲಾಗಿತ್ತು.

ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಮಾನ್ಯ ಶ್ರೀ ಅರಳಿ ನಾಗರಾಜ ವಿಶ್ರಾಂತ ನ್ಯಾಯಮುರ್ತಿಗಳು ಉಚ್ಚನ್ಯಾಯಾಲಯ ಬೆಂಗಳೂರು, ಪೂಜ್ಯ ಶ್ರೀ ಚನ್ನಾವೀರ ದೇವರು ಸಂಸ್ಥಾನ ಹಿರೇಮಠ ಕುಂಟೋಜಿ, ಪೂಜ್ಯ ಶ್ರೀ ಸಿದ್ಧಲಿಂಗದೇವರು ಖಾಸ್ಗತೇಶ್ವರ ಮಠ ತಾಳಿಕೋಟೆಯವರು  ಪ್ರಶಸ್ತಿ ಪ್ರಧಾನ ಮಾಡಿದರು.ರಾಜ್ಯ ಯುವಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಎಸ್ ಬಾಲಾಜಿ  ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply