ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಉಚಿತ ವೈಫೈ ಸೌಲಭ್ಯ ಉದ್ಘಾಟನೆ

ಉಡುಪಿ: ಮಿಶ್ರ ಕಲಿಕಾ ವಿಧಾನ (ಬ್ಲೆಂಡೆಡ್ ಲರ್ನಿಂಗ್) ಕೊರೋನೊತ್ತರ ಜಗತ್ತಿನ ಶಿಕ್ಷಣ ಕ್ಷೇತ್ರದ ಅನಿವಾರ್ಯವಾಗಿದೆ ಎಂದು ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲರಾದ ಡಾ.ಭಾಸ್ಕರ್ ಶೆಟ್ಟಿ ಎಸ್ ಅಭಿಪ್ರಾಯಪಟ್ಟರು.

ಕಾಲೇಜಿನಲ್ಲಿ ನೂತನವಾಗಿ ಜಾರಿಗೆ ತಂದ ಕ್ಯಾಂಪಸ್ ವೈಫೈ ಸೌಲಭ್ಯವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಆನ್‌ಲೈನ್ ಕಲಿಕೆಯು ತರಗತಿಯ ಕಲಿಕೆಯಷ್ಟೆ ಪ್ರಮುಖವಾಗಿಬಿಟ್ಟಿದೆ. ಹಾಗಾಗಿ ವಿದ್ಯಾರ್ಥಿಗಳ ಕಲಿಕಾ ದೃಷ್ಟಿಯಿಂದ ನೀಡಲಾಗುತ್ತಿರುವ ಉಚಿತ ಕ್ಯಾಂಪಸ್ ವೈಫೈ ಸೌಲಭ್ಯವನ್ನು ಎಲ್ಲಾ ವಿದ್ಯಾರ್ಥಿಗಳು ಜವಾಬ್ದಾರಿಯುತವಾಗಿ ಮತ್ತು ಕಲಿಕೆಗೆ ಪೂರಕವಾಗಿ ಬಳಸಬೇಕು ಎಂದು  ಕಿವಿಮಾತು ಹೇಳಿದರು. ಕಾಲೇಜಿನ ಒಳಾಂಗಣದಲ್ಲಿ ಮೂರು ಕಡೆ ರೂಟರ್ ಅಳವಡಿಸಿ ಎಲ್ಲಾ ವಿದ್ಯಾರ್ಥಿನಿಯರಿಗೂ ಉಚಿತ ವೈಫೈ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೂ ಅನುಕೂಲವಾಗುವ ಕ್ಯಾಂಪಸ್ ವೈಫೈ ಸೌಲಭ್ಯದ ಕುರಿತು ಡಾ.ಉಮೇಶ್ ಮಯ್ಯ, ಸಹ ಸಂಚಾಲಕರು, ಐಕ್ಯೂಎಸಿ ಹಾಗೂ ಪ್ರೊ. ರಾಮಚಂದ್ರ ಅಡಿಗ ಜಿ, ಡೀನ್ ವಿಜ್ಞಾನ ವಿಭಾಗ ಇವರು ಮಾಹಿತಿ ನೀಡಿದರು. ಕು.ರಮ್ಯಾ ವಿ, ಸಹಾಯಕ ಪ್ರಾಧ್ಯಾಪಕರು ಸ್ವಾಗತಿಸಿ, ವಿದ್ಯಾರ್ಥಿನಿ ಪವಿತ್ರಾ ಬಲ್ಲಾಳ್ ಪ್ರಾರ್ಥಿಸಿದರುದರು. ವಿದ್ಯಾರ್ಥಿ ಕ್ಷೇಮಪಾಲಕ ಡಾ.ಗಣೇಶಪ್ಪ ಕೆ ಇವರು ವಂದಿಸಿ, ಪ್ರೊ. ಸೋಜನ್ ಕೆ.ಜಿ ಸಹ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply