ಉಡುಪಿ ವಲಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಒಂದು ದಿನದ ಕಾರ್ಯಾಗಾರ

ಉಡುಪಿ: ಉಡುಪಿ ವಲಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಒಂದು ದಿನದ ಕಾರ್ಯಾಗಾರ ಹಾಗೂ ಸೇವಾ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ವು ಶಂಕರಪುರ ಸೈಂಟ್ ಜೋನ್ಸ್ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಗಾರವನ್ನು ಉದ್ಘಾಟಿಸಿದ ಶಾಲಾ ಸಂಚಾಲಕ ರೆ.ಫಾ ಫರ್ಡಿನಾಂಡ್ ಗೋನ್ಸಾಲ್ವಿಸ್ ಮಾತನಾಡಿ ಮಕ್ಕಳಿಗೆ ಬಾಲ್ಯದಲ್ಲೇ ಕಲಿಕೆಯೊಂದಿಗೆ ಶಿಸ್ತು, ಹಿರಿಯರಿಗೆ ಗೌರವ ತಿಳಿಸಿಕೊಟ್ಟರೆ ಮಾತ್ರ ಸಮಾಜದಲ್ಲಿ ಆದರ್ಶ ಪ್ರಜೆಗಳನ್ನು ರೂಪಿಸಬಹುದು.ಈ ಕೆಲಸ ಶಿಕ್ಷಕರಿಂದ ಆಗಬೇಕಾಗಿದೆ ಎಂದರು.ಉಡುಪಿ ಬಿ ಇ ಒ ಮಂಜುಳಾ ಕೆ ಅಧ್ಯಕ್ಷತೆ ವಹಿಸಿದ್ದರು.

ಮಣಿಪಾಲ ಮಾಹೆಯ ಮಕ್ಕಳ ಆಪ್ತ ಸಮಲೋಚಕ ಡಾ ರಾಯನ್ ಮಥಾಯಸ್ ಹದಿ ಹರೆಯದ ಮಕ್ಕಳ ಸಮಸ್ಯೆ ಹಾಗೂ ಪರಿಹಾರದ ಕುರಿತು ಉಪನ್ಯಾಸ ನೀಡಿದರು.ಈ ಸಾಲಿನಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಣ ಶಿಕ್ಷಕರನ್ನು ಸನ್ಮಾನಿಸಲಾಯಿತು.ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರವಿ ಕೆ, ಬಿ ಅರ್ ಸಿ ಕೋರ್ಡೀನೇಟರ್ ಉಮಾ ಪಿ, ದೈ ಶಿ ಪರಿವೀಕ್ಷಣಾಧಿಕಾರಿ ವಿಶ್ವನಾಥ ಬಾಯರಿ,ಜಿಲ್ಲಾ ದೈ ಶಿ ಸಂಘದ ಅಧ್ಯಕ್ಷ ಪ್ರಭಾಕರ ಜೈನ್,ಅಕಾಡೆಮಿಯ ಮುಖ್ಯಸ್ಥೆ ಸಿಸ್ಟರ್ ಜೂಲಿಯಾನ ಲಸ್ರಾದೊ ಪ್ರೌಢಶಾಲಾ ಮುಖ್ಯ ಶಿಕ್ಷಕ ಅಶ್ವಿನ್ ರೋಡ್ರಿಗಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ತಾ ದೈ ಶಿ ಸಂಘದ ಅಧ್ಯಕ್ಷ ಡೊಮಿಯನ್ ನೊರೋನ್ನ ಸ್ವಾಗತಿಸಿ, ಗೋಪಾಲ ಶೆಟ್ಟಿ ನಿರೂಪಿಸಿದರು.ಶಿಕ್ಷಕಿ ಪ್ಲೋರಿನ್ ಆಳ್ವ ವಂದಿಸಿದರು

 
 
 
 
 
 
 
 
 
 
 

Leave a Reply