ವೈದ್ಯರಿಗೆ ಗೌರವ ಸನ್ಮಾನ

ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ. ಕರ್ನಾಟಕ ಸರ್ಕಾರದ ವತಿಯಿಂದ ಡಾ. ವಿ.ಎಸ್.‌ ಆಚಾರ್ಯ ಸಭಾಂಗಣ, ಉಡುಪಿ ಜಿಲ್ಲಾ ಪಂಚಾಯತ್‌, ಉಡುಪಿ ಇಲ್ಲಿ ಕರ್ನಾಟಕ ಮೂಲದ ಅಮೇರಿಕನ್‌ ಅಸೋಸಿಯೇಷನ್‌ ಆಫ್‌ ಫಿಸಿಷಿಯನ್ಸ್‌ ಆಫ್‌ ಇಂಡಿಯನ್‌ (AAPI)  ಸಂಸ್ಥೆಯ ಪದಾಧಿಕಾರಿಗಳು ಹಾಗೂ ಪ್ರಮುಖರಿಗೆ ಗೌರವಿಸುವ ಕಾರ್ಯಕ್ರಮ ದಿನಾಂಕ: 06.01.2024 ರಂದು ನಡೆಯಿತು.

ಅನಿವಾಸಿ ಭಾರತೀಯ ಸಮಿತಿ ವತಿಯಿಂದ ಅಮೆರಿಕಾ ದೇಶದಲ್ಲಿ ವಿವಿಧ ಕ್ಷೇತ್ರ ಹಾಗೂ ಭಾಗಗಳಲ್ಲಿ ಸೇವೆ ಸಲ್ಲಿಸಿರುವ ಕರ್ನಾಟಕ ಮೂಲದ ವೈದ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.

ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ  ಡಾ. ಆರತಿ ಕೃಷ್ಣ, ಉಡುಪಿ ಜಿಲ್ಲಾಧಿಕಾರಿ ವಿಧ್ಯಾಕುಮಾರಿ, ಅನಿವಾಸಿ ಭಾರತೀಯ ಸಮಿತಿ ಸದಸ್ಯ ಕಾರ್ಯದರ್ಶಿ ಲಕ್ಷ್ಮಮ್ಮ.ಪಿ, ಉಡುಪಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ರವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply