ಭಾರತೀಯಾರ್ ಯುನಿವರ್ಸಿಟಿಯಿಂದ  ಶ್ರೀಲತಾ ರಾವ್ ಗೆ  ಡಾಕ್ಟರೇಟ್  ಪ್ರದಾನ.

 ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಧೀನ ಸಂಸ್ಥೆಗಳಲ್ಲಿ ಒಂದಾದ ವೆಲ್ಕಮ್ ಗ್ರೂಪ್ ಗ್ರಾಜ್ಯುವೇಟ್ ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್ ನ ಅಸೋಸಿಯೇಟ್ ಪ್ರೊಫೆಸರ್ ಶ್ರೀಲತಾ ರಾವ್ ಮಂಡಿಸಿದ್ದ  “A STUDY OF INDUSTRIAL TRAINING IN HOTEL MANAGEMENT EDUCATION AS A CAREER SELECTION TOOL : PERSPECTIVES OF STUDENTS IN KARNATAKA” ಎಂಬ ಮಹಾಪ್ರಬಂಧಕ್ಕೆ ಭಾರತೀಯಾರ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪ್ರದಾನ ಮಾಡಲಾಯಿತು. 

ಇವರು ಇಂದ್ರಾಳಿ ರಾಮಚಂದ್ರರಾವ್ ಹಾಗೂ ಶಾರದಾ ರವರ ಪುತ್ರಿ ಹಾಗೂ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ವಿಜಿ ಬೈಕಾಡಿ ಅವರ ಪತ್ನಿ.  ಇವರು ಡಾ.ಗೀತಾ ಹೆಗ್ಡೆ ಯವರ ಮಾರ್ಗದರ್ಶನದಲ್ಲಿ ಅಧ್ಯಯನ ಕೈಗೊಂಡಿದ್ದರು

 
 
 
 
 
 
 
 
 
 
 

Leave a Reply