ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ “ಶ್ರೀ ದುರ್ಗಾ ಸೇವಾ ಸಮಿತಿ” ಉದ್ಘಾಟನೆ

ಕುಂಜೂರು ,ಮಾ.2 : ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ‘ತ್ರಿಕಾಲ ಪೂಜೆ ಹಾಗೂ ಅನ್ನಸಂತರ್ಪಣೆ’ ಸೇವೆಸಲ್ಲಿಸಿದ ‘ಶ್ರೀ ದುರ್ಗಾ ಸೇವಾ ಸಮಿತಿ’ಯು ವಿಧ್ಯುಕ್ತವಾಗಿ ಉದ್ಘಾಟಿಸಲ್ಪಟ್ಟಿತು.

ಎಲ್ಲೂರು ಸೀಮೆಯ ಪ್ರಮುಖರು, ಗ್ರಾಮದ ಹಿರಿಯರು, ಭಕ್ತರ ಉಪಸ್ಥಿತಿಯಲ್ಲಿ ಪ್ರೊ.ರಘುರಾಮ ರಾವ್ ಹಾಗೂ ಎಲ್ಲೂರು ಗುತ್ತು ಪ್ರಭಾಕರ ಶೆಟ್ಟಿ ಅವರು ದೀಪ ಬೆಳಗಿ ದುರ್ಗಾ ಸೇವಾ ಸಮಿತಿಯನ್ನು ಉದ್ಘಾಟಿಸಿದರು ‌.ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು. ‘ಕುಂಜೂರು ಶ್ರೀ ದುರ್ಗಾ ದೇವಸ್ಥಾನ’ ಹಾಗೂ ‘ಕುಂಜೂರು ಪ್ರದೇಶ’ ಎಲ್ಲೂರು ಸೀಮೆಯ ವ್ಯಾಪ್ತಿಯಲ್ಲಿರುವುದರಿಂದ ಸೀಮೆಯ ದೇವಾಲಯ ಗಳಲ್ಲಿರುವ ‘ನಡವಳಿಕೆ – ಸಂಪ್ರದಾಯ’ಗಳನ್ನು‌ ‘ಶಿಷ್ಟಾಚಾರ’ವೆಂಬ ತಿಳಿವಳಿಕೆಯಲ್ಲಿ
ಶ್ರೀ ದುರ್ಗಾ ಸೇವಾ ಸಮಿತಿಯನ್ನು ಸಂಘಟಿಸಲಾಗಿದೆ .

ಕುಂಜೂರು ದುರ್ಗಾ ದೇವಸ್ಥಾನದ ಕೂಡುಕಟ್ಟಿನ ಸ್ಥಳವಂದಿಗರನ್ನು, ಗ್ರಾಮದ ಹಿರಿಯರನ್ನು‌, ನಡೆದುಕೊಳ್ಳುವ ಊರ – ಪರವೂರ ಭಕ್ತರನ್ನು ಮುಂದಿರಿಸಿಕೊಂಡು ಸಮಿತಿಯನ್ನು ರಚಿಸಲಾಗಿದೆ .ಇವರಲ್ಲಿ ಸುಲಭ ಲಭ್ಯರನ್ನು ಹಾಗೂ ಅನುಭವಿಗಳನ್ನು ಸಲಹೆಗಾರರನ್ನಾಗಿ ಹೆಸರಿಸಲಾಗಿದೆ.

ನಮ್ಮ ಸೀಮೆಯವರೇ ಆಗಿದ್ದು ಬೆಂಗಳೂರಿನಲ್ಲಿ, ಮುಂಬಯಿಯಲ್ಲಿ ಪ್ರಸಿದ್ಧ ಲೆಕ್ಕ ಪರಿಶೋಧಕರು , ಕಾನೂನು ಸಲಹೆಗಾರರಾಗಿರುವವರು, ಬಹುಮಾನ್ಯರು ಮತ್ತು ಸ್ಥಳೀಯವಾಗಿ ನೋಂದಾಯಿತ ಟ್ರಸ್ಟ್ ಗಳಲ್ಲಿ, ಸೇವಾಸಮಿತಿಗಳಲ್ಲಿ ಕಾರ್ಯನಿರ್ವಹಿಸಿ ಅನುಭವವುಳ್ಳವರು ಸಮಿತಿಯ ಮುಖ್ಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ.

 
 
 
 
 
 
 
 
 

Leave a Reply