ಉಡುಪಿ : ನಗರದ ಇತಿಹಾಸ ಪ್ರಸಿದ್ಧ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ 40 ವಷ೯ಗಳ ಕಾಲ ಅದ್ಯಾಪಕಿ, ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಹೆಲೆನ್ ಸಾಲಿನ್ಸ್ ರವರಿಗೆ ಹಳೆ ವಿದ್ಯಾಥಿ೯ ಮತ್ತು ಆಡಳಿತ ಮಂಡಳಿ ಪರವಾಗಿ ಸನ್ಮಾನಿಸಲಾಯಿತು. ಈ ಸಂದಭ೯ದಲ್ಲಿ ಮಾತನಾಡಿದ ಅವರು, ಈ ಶಾಲೆಯು ನನ್ನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಶಾಲೆಯ ಅಭಿವೃದ್ಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಈ ಸಂದಭ೯ದಲ್ಲಿ ಹಳೆ ವಿದ್ಯಾಥಿ೯ ಸಂಘದ ಪದಾಧಿಕಾರಿಗಳು, ಆಡಳಿತ ಮಂಡಳಿಯ ಸದಸ್ಯರು ಉದ್ಯಮಿಗಳಾದ ರಮೇಶ ಬಂಗೇರ, ದಿನೇಶ್ ಪುತ್ರನ್, ನಂದಕುಮಾರ್, ಪ್ರತಾಪ್ ಕುಮಾರ್, ತಲ್ಲೂರು ಶಿವರಾಮ ಶೆಟ್ಟಿ, ಈಶ್ವರ್ ಶೆಟ್ಟಿ ಚಿಟ್ಪಾಡಿ ಭಾಗವಹಿಸಿದ್ದರು.

 
 
 
 
 
 
 

Leave a Reply