ಡಾ. ಶಿವಕುಮಾರ ಅಳಗೋಡು ಅವರಿಗೆ ಹುಟ್ಟೂರ ಅಭಿನಂದನೆ

ಉಡುಪಿ : ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಶಿವಕುಮಾರ ಅಳಗೋಡು ಅವರ ಸಾಹಿತ್ಯ, ಶೈಕ್ಷಣಿಕ, ಕಲಾಸಾಧನೆಯನ್ನು ಪರಿಗಣಿಸಿ, ನಿಟ್ಟೂರಿನ ಶ್ರೀ ರಾಮೇಶ್ವರ ಮಕ್ಕಳ ಮೇಳ ಹಾಗೂ ಯಕ್ಷಗಾನಾಭಿಮಾನಿ ಬಳಗದ ವತಿಯಿಂದ ಹುಟ್ಟೂರಿನಲ್ಲಿ ಬೆಳ್ಳಿಯ ಕಡಗ, ಗದೆ, ‘ತುರಂಗ ಭಾರತ’ ಮಹಾಕಾವ್ಯದ 5ಸಂಪುಟ, ಹಾರ, ಶಾಲು, ಅಭಿನಂದನಪತ್ರ, ಗೌರವಧನ ನೀಡಿ ಅತ್ಯಪೂರ್ವವಾಗಿ ಅಭಿನಂದಿಸಲಾಯಿತು.
ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಯಕ್ಷಕವಿ ಶ್ರೀಧರ ಡಿ ಎಸ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ವಾಂಸ ಡಾ. ಶಾಂತಾರಾಮ ಪ್ರಭು, ಕವಿ ಸುಧಾಕಿರಣ ಅಧಿಕಶ್ರೇಣಿ ಹಾಗೂ ಮಕ್ಕಳ ಮೇಳದ ಯಕ್ಷಗುರು ಸುಬ್ರಹ್ಮಣ್ಯ ಡಿ ಎಸ್ ಉಪಸ್ಥಿತರಿದ್ದರು.
ಸಮಾರಂಭದ ಅಂಗವಾಗಿ ಡಾ. ಶಿವಕುಮಾರರ ಕಂಸನ ಪಾತ್ರನಿರ್ವಹಣೆಯೊoದಿಗೆ, ಮಕ್ಕಳ ಮೇಳದ ಪೂರ್ವ ವಿದ್ಯಾರ್ಥಿ ಗಳಿಂದ ‘ಕಂಸವಧೆ’, ಊರಿನ ಕಲಾವಿದರಿಂದ ಡಾ. ಶಿವಕುಮಾರ ಅಳಗೋಡು ರಚಿಸಿದ ‘ದಂಡಕ ದಮನ’ ಯಕ್ಷಗಾನ ಪ್ರದರ್ಶನಗೊಂಡಿತು.
 
 
 
 
 
 
 
 
 
 
 

Leave a Reply