ಅಗ್ನಿ ಮಂಥನ – 2024, ರಾಷ್ಟ್ರೀಯ  ಸಮ್ಮೇಳನ

ಉಡುಪಿ ಫೆಬ್ರವರಿ 21: ಆಯುರ್ವೇದ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದು ಪ್ರತಿಷ್ಠಿತ ವಿದ್ಯಾಲಯವಾದ  ಶ್ರೀ ಧರ್ಮಸ್ಥಳ ಮಂಜು ನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯವು ಇದೇ ದಿನಾಂಕ 24.02.2024ರಂದು ಸಂಸ್ಥೆಯ ಅಧ್ಯಕ್ಷರಾದ ಪರಮ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಷ್ಟ್ರಮಟ್ಟದ ಒಂದು ದಿನದ ಸಮ್ಮೇಳನವನ್ನು ಕಾಲೇಜಿನ ಶರೀರ ಕ್ರಿಯಾ ವಿಭಾಗದಿಂದ ಆಯೋಜಿಸಲಾಗಿದೆ.

ಈ ಸಮ್ಮೇಳನವು ಸಂಸ್ಥೆಯ ಹಿರಿಯ ಮಾರ್ಗದರ್ಶಕರಾಗಿದ್ದ ದಿವಂಗತ ಶ್ರೀ ಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಜನ್ಮ ದಿನದ ಸಂಸ್ಮರಣಾರ್ಥವಾಗಿ ಪ್ರತಿವರ್ಷ ಆಚರಿಸಲ್ಪಡುತ್ತಿದೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾ ದ್ಯಾಲಯ ಕುತ್ಪಾಡಿ, ಉಡುಪಿ ಇದರ ಶ್ರೀ ಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮಾರಕ ಭವನದ ‘ಭಾವಪ್ರಕಾಶ’ ಸಭಾಂಗಣ ದಲ್ಲಿ ಸಂಪನ್ನಗೊಳ್ಳಲಿದೆ.

ಬೆಳಿಗ್ಗೆ 9.15ಕ್ಕೆ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟಕರಾಗಿ ಡಾ. ಶ್ರೀನಿವಾಸಲು ಕೆ. IFS, AYUSH Commissioner, Govt. of Karnataka  ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅತಿಥಿಗಳಾಗಿ ಡಾ. ಅನಂತ ದೇಸಾಯಿ, NAM Project Head, Dept. of AYUSH ಮತ್ತು ಡಾ. ಸತೀಶ್ ಆಚಾರ್ಯ, ಜಿಲ್ಲಾ ಆಯುಷ್ ಅಧಿಕಾರಿ, ಉಡುಪಿ ಇವರು ಉಪಸ್ಥಿತರಿರುತ್ತಾರೆ. ಕಾರ್ಯಕ್ರಮವು ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. 

ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವೈದ್ಯ ಉಪೇಂದ್ರ ದೀಕ್ಷಿತ್, ರಾಷ್ಟ್ರೀಯ  ಆಯುರ್ವೇದ ಗುರು, ನವದೆಹಲಿ, ಡಾ. ಅನಂತಲಕ್ಷ್ಮೀ ಪ್ರಾಧ್ಯಾಪಕರು, ಶರೀರ ಕ್ರಿಯಾ ವಿಭಾಗ, ಸರಕಾರಿ ಆಯುರ್ವೇದ ಕಾಲೇಜು, ಕಣ್ಣೂರು ಹಾಗೂ ಡಾ. ಪ್ರಸನ್ನ ಎನ್. ಮೊಗಸಾಲೆ, ಸಹಪ್ರಾಧ್ಯಾಪಕರು, ರೋಗನಿದಾನ ವಿಭಾಗ, ಎಸ್.ಡಿ.ಎಮ್. ಆಯುರ್ವೇದ ಕಾಲೇಜು, ಉಡುಪಿ ಇವರು ಭಾಗವಹಿಸಲಿದ್ದಾರೆ.

ದೈಹಿಕ ಜಾಠರಾಗ್ನಿಯಿಂದ ಸೇವಿಸಿದ ಆಹಾರದ ಪಚನಕ್ರಿಯೆ ಹಾಗೂ ತನ್ಮೂಲಕ ಶರೀರ ಪೋಷಣೆಯ ಕುರಿತು ದೀರ್ಘ ಸಮಾಲೋಚನೆ ನಡೆಯಲಿದೆ. ರಾಷ್ಟಾçದ್ಯಂತ ವಿವಿಧ ಸಂಸ್ಥೆಗಳಿoದ 500 ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಆಗಮಿಸಲಿದ್ದು, ಸುಮಾರು 250ಕ್ಕೂ ಅಧಿಕ ಪ್ರಬಂಧಗಳು ಮಂಡನೆಯಾಗಲಿವೆ.

ಸಮಾರೋಪ ಸಮಾರಂಭವು ಸಂಜೆ ಗಂಟೆ 4.30ಕ್ಕೆ ನಡೆಯಲಿದ್ದು, ಡಾ. ನಾಗರಾಜ್ ಎಸ್., ವೈದ್ಯಕೀಯ ಅಧೀಕ್ಷಕರು, ಎಸ್.ಡಿಎಮ್. ಆಯುರ್ವೇದ ಆಸ್ಪತ್ರೆ, ಉಡುಪಿ ಇವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

 
 
 
 
 
 
 
 
 
 
 

Leave a Reply