ಉಡುಪಿ ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಗೆ ಸತತ ಮೂರನೇ ಬಾರಿ ಟ್ರೋಫಿ 

ಬೆಂಗಳೂರಿನ ಚಾಮರಾಜಪೇಟೆಯ ಆಯುರ್ವೇದ ಅಕಾಡೆಮಿ (ರಿ) ಇಲ್ಲಿ ಡಿಸೆಂಬರ್ 11ರಂದು ಸ್ವಾಸ್ಥ್ಯಮಾಸದ ಪ್ರಯುಕ್ತ ಅಂತರ್ ಆಯುರ್ವೇದ ಕಾಲೇಜು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಈ ಸ್ಪರ್ಧೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳ ತಂಡವು ಅತ್ಯುತ್ತಮ ಸಾಧನೆಯೊಂದಿಗೆ ಸತತ ಮೂರನೆ ಬಾರಿ ಗೆದ್ದು, ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆಮೊದಲ ಹಂತದಲ್ಲಿ ನಡೆದ ಆನ್ಲೈನ್ ಸ್ಪರ್ಧೆಗಳಲ್ಲಿ ಕಾಲೇಜಿನ 15 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂತಿಮ ಸುತ್ತಿಗೆ ಆಯ್ಕೆಯಾದ 9 ವಿದ್ಯಾರ್ಥಿಗಳ ತಂಡವು ಕಾಲೇಜಿನ ಸ್ವಸ್ಥವೃತ್ತ ವಿಭಾಗದ ಪ್ರಾಧ್ಯಾಪಕರಾದ ಡಾ. ಶ್ರೀನಿಧಿ ಧನ್ಯ ಅವರೊಂದಿಗೆ ಬೆಂಗಳೂರಿಗೆ ತೆರಳಿದ್ದರು.

ಅವರಲ್ಲಿ ರಸಪ್ರಶ್ನೆಯಲ್ಲಿ ಕಾಲೇಜಿನ ಸನತ್ ಕುಮಾರ್- ಪ್ರಥಮ ಹಾಗೂ ಮಹತಿ ಚಾತ್ರ-ದ್ವಿತೀಯ ಬಹುಮಾನ ವನ್ನೂ, ಚರ್ಚಾಸ್ಪರ್ಧೆಯಲ್ಲಿ ಆತ್ರೇಯ ನಾರಾಯಣ- ಪ್ರಥಮ ಮತ್ತು ಸನತ್ ಕುಮಾರ್- ದ್ವಿತೀಯ ಸ್ಥಾನವನ್ನೂ, ಭಾಷಣ ಸ್ಪರ್ಧೆಯಲ್ಲಿ ಆತ್ರೇಯ ನಾರಾಯಣ- ಪ್ರಥಮ ಮತ್ತು ಮಹತಿ ಚಾತ್ರ- ದ್ವಿತೀಯ ಬಹುಮಾನವನ್ನೂ, ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಶಿವಾನಿ ಕಾರಂತ್- ದ್ವಿತೀಯ  ಮತ್ತು ಶುಭ ಎಸ್ ಭಟ್-ತೃತೀಯ ಸ್ಥಾನವನ್ನೂ,

ಪ್ರಬಂಧ ಸ್ಪರ್ಧೆಯಲ್ಲಿ ರಮ್ಯ ಎಸ್- ದ್ವಿತೀಯ ಬಹುಮಾನವನ್ನೂ, ಆಶುಭಾಷಣ ಸ್ಪರ್ಧೆಯಲ್ಲಿ ಅಯುಧ ಕೆಂಭಾವಿ -ದ್ವಿತೀಯ ಮತ್ತು ಆತ್ರೇಯ ನಾರಾಯಣ- ತೃತೀಯ ಬಹುಮಾನವನ್ನು ಗಳಿಸಿದರು. ವಿದ್ಯಾರ್ಥಿಗಳು 12 ನೇ ತಾರೀಕಿನಂದು ಅಲ್ಲಿ ನಡೆದ ಧನ್ವಂತರಿ ಹೊಮದಲ್ಲಿ ಭಾಗವಹಿಸಿ, ಬಳಿಕ ಹಿಂದಿರುಗಿದರು. ಪ್ರಯಾಣ ಹಾಗೂ ಕಾರ್ಯಕ್ರಮಗಳಲ್ಲಿ ಕೊವಿಡ್-19 ತಡೆಯುವ ಸಕಲ ಮುಂಜಾಗರೂಕ ಕ್ರಮಗಳನ್ನು ಪಾಲಿಸಲಾಗಿತ್ತು.

 
 
 
 
 
 
 
 
 
 
 

Leave a Reply