ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ದೀರ್ಘಕಾಲೀನ ಮತ್ತು ಹಸ್ತಕ್ಷೇಪಿತ ನೋವಿನ ವಿಭಾಗ ಮತ್ತು ಪ್ರೀಮಿಯಂ ಕ್ಯಾನ್ಸರ್ ಸೇವೆ ಕ್ಲಿನಿಕ್ ಉದ್ಘಾಟನೆ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ದೀರ್ಘಕಾಲೀನ ಮತ್ತು ಹಸ್ತಕ್ಷೇಪಿತ (ಇಂಟರ್ವೆನ್ಷನಲ್) ನೋವಿನ ವಿಭಾಗ ಮತ್ತು ಪ್ರೀಮಿಯಂ ಕ್ಯಾನ್ಸರ್ ಸೇವೆ ಕ್ಲಿನಿಕ್ ಉದ್ಘಾಟನೆ- ಕರಾವಳಿ ಕರ್ನಾಟಕದಲ್ಲಿ ಇದು ಮೊದಲನೆಯದು

ಮಣಿಪಾಲ: ದೀರ್ಘಕಾಲೀನ ಮತ್ತು ಹಸ್ತಕ್ಷೇಪಿತ (ಇಂಟರ್ವೆನ್ಷನಲ್) ನೋವಿಗೆ ಸಂಬಂಧಿಸಿದ ವಿಶೇಷ ಚಿಕಿತ್ಸಾಲಯವನ್ನು ಇಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಉದ್ಘಾಟಿಸಲಾಯಿತು. ಮುಖ್ಯ ಅಥಿತಿಯಾಗಿದ್ದ ಮಾಹೆ ಮಣಿಪಾಲದ ಸಹ ಕುಲಪತಿ(ಆರೋಗ್ಯ ವಿಜ್ಞಾನ) ಡಾ.ಪಿ.ಎಲ್.ಎನ್.ಜಿ ರಾವ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅತಿಥಿಯಾಗಿದ್ದ ಮಣಿಪಾಲ್ ಟಾಟಾ ವೈದ್ಯಕೀಯ ಕಾಲೇಜು, ಜಮ್ ಷೆಡ್ ಪುರ ಇದರ ಡೀನ್ ಡಾ.ಪೂರ್ಣಿಮಾ ಬಾಳಿಗ ಅವರು ಕ್ಯಾನ್ಸರ್ ಸೇವೆ ಕ್ಲಿನಿಕ್ ಅನ್ನು ಉದ್ಘಾಟಿಸಿದರು.

ಡಾ.ಶರತ್ ಕುಮಾರ್ ರಾವ್- ಡೀನ್ ಕೆಎಂಸಿ, ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ – ಶ್ರೀ ಸಿ ಜಿ ಮುತ್ತನ , ವೈದ್ಯಕೀಯ ಅಧೀಕ್ಷಕ -ಡಾ.ಅವಿನಾಶ್ ಶೆಟ್ಟಿ , ಡಾ ಕೀರ್ತಿಲತಾ ಪೈ- ಡೀನ್ ಮಣಿಪಾಲ ದಂತ ವಿಜ್ಞಾನ, ಡಾ ಅರುಣ್ ಮಯ್ಯ – ಡೀನ್ ಮಣಿಪಾಲ ಹೆಲ್ತ್ ಪ್ರೊಫೆಶನ್, ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಂಯೋಜಕ ಡಾ. ನವೀನ್ ಎಸ್ ಸಲಿನ್ಸ್ ಉಪಸ್ಥಿತರಿದ್ದರು.ದೀರ್ಘಕಾಲೀನ ಮತ್ತು ಹಸ್ತಕ್ಷೇಪಿತ (ಇಂಟರ್ವೆನ್ಷನಲ್) ನೋವಿನ ವಿಶೇಷ ವಿಭಾಗ ಉದ್ಘಾಟಿಸಿ ಮಾತನಾಡಿದ ಡಾ.ಪಿ.ಎಲ್.ಎನ್.ಜಿ ರಾವ್ ಅವರು, “ನೋವು ಮತ್ತು ಕ್ಯಾನ್ಸರ್ ಎರಡು ಕಾಯಿಲೆಗಳಾಗಿವೆ, ಆದ್ದರಿಂದ ರೋಗಿಗೆ ಚಿಕಿತ್ಸೆ ನೀಡುವಲ್ಲಿ ಬಹುಶಿಸ್ತೀಯ ವಿಧಾನದ ಅಗತ್ಯವಿದೆ.

ಈ ಹೊಸ ವಿಭಾಗವು ಕ್ಯಾನ್ಸರ್ ರೋಗಿಗಳಿಗೆ ಸೇವೆ ಸಲ್ಲಿಸಲು ಮಾತ್ರವಲ್ಲದೆ ದೀರ್ಘಕಾಲದ ನೋವಿನಿಂದ ಬಳಲುತ್ತಿರುವ ಇತರ ರೋಗಿಗಳ ಅಗತ್ಯತೆಗಳನ್ನು ಸಹ ಪೂರೈಸುತ್ತದೆ. 1980 ರ ದಶಕದಿಂದ ಕ್ಯಾನ್ಸರ್ ಕೇಂದ್ರವು ಕಾರ್ಯನಿರ್ವಹಿಸುತ್ತಿದ್ದು , ಎಂಸಿಸಿಸಿಸಿ ರಚಿಸಿದ ನಂತರ ಕಳೆದ ಎರಡು ವರ್ಷಗಳಲ್ಲಿ ಇದು ಹೊಸ ವಿಧಾನಗಳನ್ನು ಅಳವಡಿಸುವುದರ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ” ಎಂದರು.

ಪ್ರೀಮಿಯಂ ಕ್ಯಾನ್ಸರ್ ಸೇವೆ ಕ್ಲಿನಿಕ್ ಅನ್ನು ಉದ್ಘಾಟಿಸಿ ಮಾತನಾಡಿದ ಡಾ.ಪೂರ್ಣಿಮಾ ಬಾಳಿಗ ಅವರು, “ಕಳೆದ ಎರಡು ವರ್ಷಗಳಲ್ಲಿ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಬೆಳವಣಿಗೆ ಕಂಡು ನನಗೆ ತುಂಬಾ ಸಂತೋಷವಾಗುತ್ತಿದೆ. ಆಸ್ಪತ್ರೆಯು ಈಗ ಆರಂಭಿಸುತ್ತಿರುವ ಕ್ಯಾನ್ಸರ್ ಸೇವೆ ಚಿಕಿತ್ಸಾಲಯದಿಂದ ರೋಗಿಗಳಿಗೆ ಹೆಚ್ಚಿನ ಕಾಯುವಿಕೆ ಮತ್ತು ವಿಳಂಬವಿಲ್ಲದೆ ವೈದ್ಯರ ಸಮಾಲೋಚನೆ ಮತ್ತು ಚಿಕಿತ್ಸೆಯನ್ನು ಒದಗಿಸಲು ಸಾಧ್ಯವಾಗಲಿದೆ” ಎಂದರು.

ಡಾ. ಶರತ್ ರಾವ್ ಅವರು ಸ್ವಾಗತಿಸಿದರು ಮತ್ತು ಡಾ. ಅವಿನಾಶ್ ಶೆಟ್ಟಿ ಅವರು ವಂದಿಸಿದರು. ಪ್ರಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗದ ಸಹ ಪ್ರಾದ್ಯಾಪಕರಾದ ಡಾ ಮಾಯಾಂಕ್ ಗುಪ್ತ, ದೀರ್ಘಕಾಲೀನ ಮತ್ತು ಹಸ್ತಕ್ಷೇಪಿತ (ಇಂಟರ್ವೆನ್ಷನಲ್) ನೋವಿನ ವಿಭಾಗದ ಅವಲೋಕನ ನೀಡಿದರು

3 ತಿಂಗಳಿಗಿಂತ ಹೆಚ್ಚು ಕಾಲ ಎಡೆಬಿಡದೆ ಕಾಡುವ ದೀರ್ಘಕಾಲದ ನೋವು ಸಾಮಾನ್ಯವಾಗಿ ನಡೆಯುತ್ತಿರುವ ಯಾವುದೇ ಗಾಯದ ಅನುಪಸ್ಥಿತಿಯಲ್ಲಿ ಸಂಭವಿಸುತ್ತದೆ ಮತ್ತು ಇದರಿಂದ ಯಾವುದೇ ಉಪಯೋಗವಿಲ್ಲ, ಆದ್ದರಿಂದ ದೀರ್ಘಾವಧಿಯ ನೋವನ್ನು ಒಂದು ರೋಗವೆಂದು ಪರಿಗಣಿಸಬಹುದು.

ನೋವು ದೇಹದ ಯಾವುದೇ ಭಾಗದಲ್ಲೂ ಉಂಟಾಗಬಹುದು: ಚರ್ಮ, ಸ್ನಾಯು, ಕೀಲುಗಳು, ಮೂಳೆ (ನೊಸಿಸೆಪ್ಟಿವ್ ನೋವು); ನರಗಳು (ನ್ಯೂರೋಪತಿಕ್ ನೋವು ಅಥವಾ ನ್ಯೂರಾಲ್ಜಿಯಾ), ಒಳಭಾಗದ ಅಂಗಗಳು (ವಿಸೆರೆಲ್ ನೋವು) ಅಥವಾ ಕೆಲವೊಮ್ಮೆ ಮೇಲಿನ ಸಂರಚನೆಗಳ ಸಂಯೋಜನೆ (ಮಿಶ್ರ ನೋವು). ದೀರ್ಘಾವಧಿಯ ನೋವು ವಿವಿಧ ಕಾರಣಗಳಿಂದ ಸಂಭವಿಸಬಹುದು, ಉದಾಹರಣೆಗೆ: ಅಂಗಗಳ ಕ್ಷಯಿಸುವಿಕೆ, ಸಂಧಿವಾತ, ಉರಿಯೂತ, ನರಹಾನಿ, ಡಿಸ್ಕ್ ಪ್ರೊಲ್ಯಾಪ್ಸ್, ಟ್ರಾಮಾ, ಶಸ್ತ್ರಚಿಕಿತ್ಸೆ, ಮಧುಮೇಹ ಮತ್ತು ಕ್ಯಾನ್ಸರ್. ಕೆ

ಲವೊಮ್ಮೆ, ಫೈಬ್ರೊಮಯಲ್ಜಿಯಾದಂಥ ಸ್ಥಿತಿಯಲ್ಲಿ, ನೋವೇ ಒಂದು ಕಾಯಿಲೆಯಾಗಿ ಪರಿಣಮಿಸುತ್ತದೆ ಮತ್ತು ಇದಕ್ಕೆ ಸ್ಪಷ್ಟವಾದ ಕಾರಣವಿರುವುದಿಲ್ಲ. ಹಸ್ತಕ್ಷೇಪಿತ (ಇಂಟರ್ವೆನ್ಷನಲ್) ವಿಧಾನವು ದೇಹದ ನಿರ್ದಿಷ್ಟ ಭಾಗಗಳಿಗೆ ನೋವು ನಿವಾರಕ ಚುಚ್ಚುಮದ್ದನ್ನು ಕೊಡುವ ಮೂಲಕ ದೀರ್ಘಕಾಲೀನ ನೋವಿನ ನಿರ್ವಹಣೆ ಮಾಡುತ್ತದೆ. ದೈನಂದಿನ ಚಟುವಟಿಕೆಗಳಿಗೆ ಅಡ್ಡಿಮಾಡುವಷ್ಟು ತೀವ್ರ ಪ್ರಮಾಣದ ನೋವಿದ್ದಲ್ಲಿ ಅಥವಾ ಇತರ ಚಿಕಿತ್ಸೆಗಳು ನೋವನ್ನು ಕಡಿಮೆ ಮಾಡಲು ಅಸಫಲವಾದಾಗ ಸಾಮಾನ್ಯವಾಗಿ ಇಂತಹ ಇಂಟರ್ವೆನ್ಷನಲ್ ವಿಧಾನ ನಡೆಸಲಾಗುತ್ತದೆ.

ನೋವು ನಿರ್ವಹಣಾ ಸೇವೆಗಳು ಅಥವಾ ಪೆಯಿನ್ ಕ್ಲಿನಿಕ್‍ಗಳು ಸುಧಾರಿತ ಪರಿಣತ ಆರೋಗ್ಯ ಆರೈಕೆ ಸೇವೆಗಳಾಗಿದ್ದು ವಿಭಿನ್ನ ಬಗೆಯ ನೋವಿನ ಸೂಕ್ತ ಪತ್ತೆ ಮತ್ತು ನಿರ್ವಹಣೆಯ ಮೇಲೆ ಕೇಂದ್ರೀಕೃತವಾಗಿರುತ್ತವೆ. ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ದೀರ್ಘಕಾಲೀನ ಮತ್ತು ಹಸ್ತಕ್ಷೇಪಿತ (ಇಂಟರ್ವೆನ್ಷನಲ್) ನೋವಿಗೆ ಸಂಬಂಧಿಸಿದ ಸೇವೆಯು ಅತ್ಯಾಧುನಿಕ, ಸಮಗ್ರ ನೋವು ನಿರ್ವಹಣಾ ಸೇವೆಯಾಗಿದ್ದು, ದೀರ್ಘಕಾಲದಿಂದ ನಿಭಾಯಿಸಲು ಅಸಾಧ್ಯವಾದ ನೋವಿನಿಂದ ನರಳುತ್ತಿರುವವರಿಗೆ ತಮ್ಮ ನೋವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಮತ್ತು ಅವರ ಜೀವ ಗುಣಮಟ್ಟವನ್ನು ಸುಧಾರಿಸಲು ನೆರವಾಗುವ ಉದ್ದೇಶವನ್ನು ಹೊಂದಿದೆ.

ರೋಗಿಗಳ ಬೇಡಿಕೆಯ ಮೇರೆಗೆ, ನಾವು ಪ್ರೀಮಿಯಂ ಕ್ಯಾನ್ಸರ್ ಸೇವೆ ಕ್ಲಿನಿಕ್ ಅನ್ನು ಆರಂಭಿಸುತ್ತಿದ್ದೇವೆ. ಯಾವುದೇ ಕಾಯುವಿಕೆಯಿಲ್ಲದೆ ವೇಗವಾಗಿ ವೈದ್ಯರ ಸಂದರ್ಶನ ನೀಡುವುದು ಈ ಕ್ಲಿನಿಕ್ ನ ಉದ್ದೇಶವಾಗಿದೆ. ಇದರಿಂದ ವೈದ್ಯರ ಭೇಟಿಗಾಗಿ ಬಹಳ ಸಮಯ ಆಸ್ಪತ್ರೆಯಲ್ಲಿ ವ್ಯಯಿಸುವುದು ತಪ್ಪಲಿದೆ. ಪೂರ್ವ ನಿಗದಿ ಯೊಂದಿಗೆ (with appointment) ಈ ಸೌಲಭ್ಯವು ಪ್ರತೀ ದಿನ ಮಧ್ಯಾಹ್ನ 2.30 ರಿಂದ ಸಂಜೆ 4.30 ರವರೆಗೆ ಸೇವೆಗೆ ಲಭ್ಯ. ಪೂರ್ವ ನಿಗದಿಗಾಗಿ (For appointment) ದೂರವಾಣಿ ಸಂಖ್ಯೆ 0820 2922057 ಸಂಪರ್ಕಿಸಬಹುದು.

 
 
 
 
 
 
 
 
 
 
 

Leave a Reply