ಈಜು ವಿಭಾಗದಲ್ಲಿ ಇಂಡಿಯಾ ಬುಕ್ ಆಫ್ ರೆಕಾಡ್೯ ದಾಖಲೆ ಮಾಡಿದ ರೋನಾನ್ ಲೂವಿಸ್

ಉಡುಪಿ :- ಉಡುಪಿಯ ಸೈoಟ್ ಸಿಸಿಲಿಸ್ ಕಾಲೇಜಿನ ಪ್ರಥಮ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿ ರೋನಾನ್ ಲೂವಿಸ್ ರವರು ಈಜು ವಿಭಾಗದಲ್ಲಿ ವಿಶೇಷವಾದ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ್ದಾರೆ. ಮಂಗಳೂರಿನ ಮಂಗಳ ಈಜುಕೊಳದಲ್ಲಿ 50 ಮೀಟರ್ ನೀರಿನ ಒಳಗೆ ಒಂದೇ ಉಸಿರಿನಲ್ಲಿ ಈಜಿ 54 ಸೆಕೆಂಡ್ ಒಳಗೆ ಈ ದೂರ ಕ್ರಮಿಸಿ ದಾಖಲೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಗೆನ್ನಿಸ್ ಬುಕ್ ಆಫ್ ರೆಕಾರ್ಡ ದಾಖಲೆ ಮಾಡುವಲ್ಲಿ ತಯಾರಿ ನಡೆಸುತ್ತಿದ್ದಾರೆ .

ಬಹುಮುಖ ಪ್ರತಿಭೆಯ ವಿದ್ಯಾಥಿ೯: – ರೋನಾನ್ ಕೇವಲ ಈಜು ಅಲ್ಲದೆ ಇನ್ನಿತರ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ. ಸೈಕ್ಲಿoಗ್, ಸ್ಕೆಟಿಂಗ್, ವಿವಿಧ ಕ್ರೀಡಾ ವಿಭಾಗದಲ್ಲಿ ಎತ್ತಿದ್ದ ಕೈ.ಹಲವಾರು ಬಹುಮಾನಗಳನ್ನು ಬಾಚಿ ಕೊಂಡಿದ್ದಾರೆ.

ಪ್ರಕೃತಿಗೆ ಅಪೂವ೯ ಕೊಡುಗೆ: – ಸಣ್ಣ ವಯಸ್ಸಲ್ಲಿಯೇ ಪ್ರಕ್ರತಿ ಪ್ರೇಮಿಯಾಗಿರುವ ಇವರು ತನ್ನ ತಂದೆಯ ಮಾಗ೯ ದಶ೯ನದಲ್ಲಿ ಇವರೆಗೆ ಸುಮಾರು 5 ಸಾವಿರಕ್ಕೂ ಮಿಕ್ಕಿ ಗಿಡಗಳನ್ನು ನೆಟ್ಟು ಎಲ್ಲರಿಗೂ ಮಾದರಿಯಾಗಿದ್ದಾರೆ.ಸ್ವತಃ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ರವರಿಂದ ಗೌರವ ಪಡೆದಿದ್ದಾರೆ.

ನೀರಿಗೆ ಹೆದರುತ್ತಿದ್ದ ಹುಡುಗ ಇಂದು ನೀರಿಗೆ ಹೆದರಿಸುತ್ತಿರುವ ಮಟ್ಟಿಗೆ ಬೆಳವಣಿಗೆ… ಸಣ್ಣ ವಯಸ್ಸಲ್ಲಿ ನೀರಿಗೆ ಹೆದರುತ್ತಿದ್ದ ಈ ಹುಡುಗ ಒತ್ತಾಯ ಪೂವ೯ಕವಾಗಿ ತಂದೆ ಈಜು ಕಲಿಸಲು ಬಿಡುತ್ತಿದ್ದರು.ಎಷ್ಟೋ ಸಂದಭ೯ದಲ್ಲಿ ನೀರಿನಿಂದ ಆಚಗೆ ಬಂದಿದ್ದು ಇದೆ. ಗುರುಗಳಾದ ಅಂತರಾಷ್ಟ್ರೀಯ ಖ್ಯಾತಿಯ ಈಜುಪಟು ಗೋಪಾಲ್ ಖಾವಿ೯ ಯವರಿ೦ದ ಈಜು ಕಲಿತು ಇಂದು ಈ ಹಂತಕ್ಕೆ ಬೆಳೆದು ನಿಂತಿದ್ದಾರೆ. ಮುಂದೆ ಇನ್ನಷ್ಟು ಸಾಧನೆ ಮಾಡಲು ಹೊರಟ್ಟಿದ್ದಾರೆ.

ಕೇವಲ 8 ನೇ ವಯಸ್ಸಲ್ಲಿ ಪ್ರಾರಂಭವಾದ ಈ ಈಜು ಕಲಿಕೆ ನಿರಂತ ರವಾಗಿ ಸಾಗುತ್ತಿದೆ. ಇದೀಗ ಮಂಗಳೂರಿನಲ್ಲಿ ಚಂದ್ರಶೇಖರ ಶೆಟ್ಟಿ ಯವರ ಮಾಗ೯ದಶ೯ನದಲ್ಲಿ ಮುಂದಿನ ದಾಖಲೆಗಾಗಿ ತಯಾರಿ ನಡೆಯುತ್ತಿದೆ. ಕೇವಲ ಆಟದಲ್ಲಿ ಮಾತ್ರ ವಲ್ಲವೆ ಕಲಿಕೆಯಲ್ಲಿ ಯೂ ಉತ್ತಮ ಅಂಕಗಳೊಂದಿಗೆ ಮುಂದುವರೆಯುತ್ತಿದ್ದಾರೆ. ನಾಣ್ಯ , ಸ್ಟಾoಪ್ ಸಂಗ್ರಹಣೆಯಲ್ಲಿ ಕೂಡ ಅತೀವ ಆಸಕ್ತಿ ಇದೆ.

ತಂದೆ ರೋಶನ್ ಲೂವಿಸ್ , ತಾಯಿ ಶೈಲಾ ಲೂವಿಸ್ ರ ನಿರಂತರ ಪ್ರೋತ್ಸಾಹ ದಿಂದ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು ಎಂಬುದು ರೋನಾನ್ ರ ಮನದಾಳದ ಮಾತು. ಗಿನ್ನೆಸ್ ದಾಖಲೆ ಸುಲಭದ ಸಂಗತಿಯಲ್ಲ ಈ ಸಾಧನೆ ಮಾಡಲು ಹೊರಟಿರುವ ಇವರು.250 ಮೀ ನೀರಿನ ಅಡಿಯಲ್ಲಿ ಒಂದೇ ಉಸಿರಿನಲ್ಲಿ ಸಾಗಬೇಕು ಅದಕ್ಕಾಗಿ ಅಭ್ಯಾಸ ನಡೆಯುತ್ತಿದೆ.

ವಿದ್ಯಾ೯ ಗಳಿಗೆ ಮಾದರಿ:- ಎಷ್ಟೋ ವಿದ್ಯಾಥಿ೯ಗಳು ತಮಗೆ ಸಿಕ್ಕ ಸಮಯವನ್ನು ಪೋಲು ಮಾಡುತ್ತಾರೆ. ಆದರೆ ಈತ ಅದನ್ನು ಸಾಧನೆಗೆ ಸದುಪಯೋಗ ಪಡಿಸುತ್ತಿರುವುದು ಅಭಿನಂದನೀಯ. ಮುಂದಿನ ದಿನಗಳಲ್ಲಿ ಭಾರತವನ್ನು ಈಜಿನಲ್ಲಿ ಪ್ರತಿ ನಿಧಿಸುವ ಅವಕಾಶ ಬರಲಿ ಎಂಬ ಶುಭ ಹಾರೈಕೆ ನಮ್ಮದು.

✍🏻 ರಾಘವೇಂದ್ರ ಪ್ರಭು ಕವಾ೯ಲು
ಯುವ ಲೇಖಕ.

 
 
 
 
 
 
 
 
 
 
 

Leave a Reply