ಉಪಾಧ್ಯಾಯ ಸಮ್ಮಾನ್ ಸಾಧಕರಿಗೆ ಪ್ರದಾನ

ಉಡುಪಿ: ಪ್ರತಿಯೊಬ್ಬರೂ ತಮ್ಮ ಆದಾಯವನ್ನು ಧರ್ಮಕಾರ್ಯಕ್ಕೆ, ದೇಶಕ್ಕೆ ಮತ್ತು ಸ್ವಂತಕ್ಕೆ ಎಂಬುದಾಗಿ 3 ಭಾಗವಾಗಿ ವಿಂಗಡಿಸಬೇಕು. ಸತ್ಪಾತ್ರರಿಗೆ ದಾನ ಮಾಡಬೇಕು. ಗೋದಾನ ಪಡೆದವನು ಆಕಳನ್ನು ಕಸಾಯಿಖಾನೆಗೆ ನೀಡಿದರೆ ಅದರ ಪಾಪ ಕೊಟ್ಟವನಿಗೂ ತಟ್ಟುತ್ತದೆ. ಹೀಗಾಗಿ ಪಾತ್ರಾಪಾತ್ರ ವಿಮರ್ಶೆ ಮಾಡುವುದು ಅತೀ ಅಗತ್ಯ. ಸಮಾಜಕ್ಕೆ ಪೂರಕವಾಗಿರುವ ಎಲ್ಲಾ ವಿದ್ಯೆಯೂ ಶ್ರೇಷ್ಠ. ಅದರಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಬೇಕು  ಎಂದು ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಭಾನುವಾರ ಮಂತ್ರಾಲಯ ಸಭಾಭವನದಲ್ಲಿ ಉಪಾಧ್ಯಾಯ ಮೂಡುಬೆಳ್ಳೆ ಕಲಾಪ್ರತಿಷ್ಠಾನ ವತಿಯಿಂದ ನೀಡಲಾಗುವ ’ಉಪಾಧ್ಯಾಯ ಸಮ್ಮಾನ್’ ಪ್ರಶಸ್ತಿ ಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದರು.  ಈ ಸಂದರ್ಭದಲ್ಲಿ ಅಕ್ಷಯಪಾತ್ರೆ ಪ್ರತಿಷ್ಠಾನ ಸಲಹೆಗಾರ ಸಿ.ವಿ. ತಿರುಮಲ ರಾವ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಮಿಥುನ್ ಹೆಗ್ಡೆ,

ಮಾಧವ ಉಪಾಧ್ಯ , ನಾಗರತ್ನ ಉಪಾಧ್ಯ, ರಮಾಕಾಂತ ಉಪಾಧ್ಯ, ಉಪಾಧ್ಯಾಯ ಮೂಡುಬೆಳ್ಳೆ ಕಲಾ ಪ್ರತಿಷ್ಠಾನದ ಅಧ್ಯಕ್ಷ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಲಾವಿದ ಡಾ. ಉಪಾಧ್ಯಾಯ ಮೂಡುಬೆಳ್ಳೆ, ಪ್ರದ್ಯುಮ್ನ ಉಪಾಧ್ಯಾಯ, ಡಾ.ಪ್ರಮೋದನ ಉಪಾಧ್ಯಾಯ, ಸಂಧ್ಯಾ ಉಪಾಧ್ಯಾಯ ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ: ಬಿ. ಮಿಥುನ್ ಆರ್. ಹೆಗ್ಡೆ ಪಡುಬಿದ್ರಿ (ಸಮಾಜ ಸೇವೆ), ವಿದ್ವಾನ್ ಶ್ರೀಕಂಠ ಭಟ್ಟ ಕಮ್ಮರಡಿ (ವೇದಶಾಸ್ತ್ರ), ಬಾಲಚಂದ್ರ ರಾವ್ ನಂದಳಿಕೆ (ಸಾಹಿತ್ಯ) , ಪ್ರಕಾಶ್ ಅಮ್ಮಣ್ಣಾಯ ಕಾಪು ( ಜ್ಯೋತಿಷ್ಯ), ರಾಜಗೋಪಾಲ ಆಚಾರ್ಯ ಕೋಟೇಶ್ವರ (ರಥಶಿಲ್ಪ), ಸತೀಶ್ ಶೆಟ್ಟಿ  ಪಟ್ಲ(ಯಕ್ಷಗಾನ), ಡಾ. ಸುನೀಲ್ ಮುಂಡ್ಕೂರ್ (ವೈದ್ಯಕೀಯ-ಕಲೆ), ಶಿವಣ್ಣ ಜಿ. ಕೆ. ಬೆಂಗಳೂರು (ಚಿತ್ರಕಲೆ-ಸಂಘಟನೆ), ವಿದುಷಿ ಮಾನಸಿ ಸುಧೀರ್ (ನಾಟ್ಯ-ನಟನೆ), ಬಿ. ಶ್ರೀಧರ ಭಟ್ ಬೆಳ್ಮಣ್ (ಪಾಕಶಾಸ್ತ್ರ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಶೇಷ ಪ್ರಶಸ್ತಿ: ಪ್ರಕಾಶ್.ಕೆ (ವಾಣಿಜ್ಯ ಸೇವೆ), ಬಿ. ಪುಂಡಲೀಕ ಮರಾಠೆ (ಪತ್ರಿಕಾರಂಗ), ಮಧುಸೂದನ ತಂತ್ರಿ ಪುತ್ತೂರು (ತಂತ್ರಾಗಮ), ಸುಗುಣ ಎಸ್.ಹೊಳ್ಳ (ಶಿಕ್ಷಣ), ಪ್ರವೀಣಾ ಮೋಹನ್ (ಚಿತ್ರಕಲೆ), ಪೂರ್ಣಿಮಾ ಜನಾರ್ದನ್ (ಸಾಹಿತ್ಯ), ವತ್ಸ ಭಟ್ಟ ಕಮ್ಮರಡಿ (ಜ್ಯೋತಿಷ್ಯ), ಸಂದೀಪ್ ಮಂಜ (ಸಂಘಟನೆ),  ಡಾ. ಕಿರಣ್ ಬೆಂಗಳೂರು (ವೈದ್ಯಕೀಯ), ಬಾಲಕೃಷ್ಣ ರಾವ್ ಕೆ. (ಪಾಕಶಾಸ್ತ್ರ),  ಸೀತಾರಾಮ ಭಟ್ಟ (ಪೌರೋಹಿತ್ಯ), ಸುದರ್ಶನ್ ಆಚಾರ್ಯ ಬೆಳ್ಳೆ (ವೇದಶಾಸ್ತ್ರ).

 
 
 
 
 
 
 
 
 
 
 

Leave a Reply