ಪಂಚನಬೆಟ್ಟು ಹೈಸ್ಕೂಲು 33 ರ ಸಂಭ್ರಮ

ಉಡುಪಿ: ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ನೀಡಿ ಸಾಧನೆಯ ಗಟ್ಟಿ ಹೆಜ್ಜೆಗಳನ್ನು ಪಂಚನಬೆಟ್ಟು ವಿದ್ಯಾವರ್ಧಕ ಸಂಘ ದಾಖಲಿಸಿದೆ. ಈ ಹೈಸ್ಕೂಲು ಜನತೆಯ ಸಂಪೂರ್ಣ ಸಹಕಾರದಿಂದ ಸಾಧನೆಯ ಶಿಖರಕ್ಕೇರಲಿ ಎಂದು ಮಂಗಳೂರಿನ ಸೇವ್ ಲೈಪ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಅರ್ಜುನ್ ಭಂಡಾರ್ಕಾರ್ ಹೇಳಿದರು. ಅವರು ಪಂಚನಬೆಟ್ಟು ವಿದ್ಯಾವರ್ಧಕ ಸಂಘ ಮತ್ತು ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢ ಶಾಲೆಯ 33 ರ ಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಶಾಲೆಯ ವಿದ್ಯಾರ್ಥಿ ಪಾಟೀಲ ವೇದಿಕೆಯಲ್ಲಿ ಮಾತನಾಡಿದ ರೀತಿ,ಅವನ ಆತ್ಮವಿಶ್ವಾಸ ನೋಡಿ ಈ ಶಾಲೆಯ ಬಗ್ಗೆ ಅಪಾರ ಅಭಿಮಾನ ಮೂಡಿತು ಎಂದರು. ಈಗಿನ ಕಾಲಕ್ಕೆ ತಕ್ಕಂತೆ ಶಾಲೆಯನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದು ಎಂದು ಮುಖ್ಯ ಅತಿಥಿ ಮುಂಬಯಿಯ ರಾಮಕೃಷ್ಣ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಎಸ್.ಆರ್.ನಾಯಕ್ ಹೇಳಿದರು. ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘರ್ಷದಿಂದ ಶಿಕ್ಷಣ ಕ್ಷೇತ್ರ ಸೊರಗಿದೆ.ಮಾತೃಭಾಷೆಯಲ್ಲಿ ಉತ್ತಮ ಶಿಕ್ಷಣ ನೀಡ ಬೇಕು ಎಂದು ಸಂಘದ ಅಧ್ಯಕ್ಷ ಎ.ನರಸಿಂಹ ಹೇಳಿದರು. ಸಿಹಿ ಕಹಿಗಳನ್ನು ಲೆಕ್ಕಿಸದೆ ಸಂಸ್ಥೆ ಮುನ್ನಡೆದಿದೆ ಎಂದು ಮುಂಬಯಿಯ ಪತ್ರಕರ್ತ, ಸಾಹಿತಿ ಅಶೋಕ ಸುವರ್ಣ ಪ್ರಶಂಸಿದರು. ಅ.ಕ.ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು, ಸಂಘದ ಉಪಾಧ್ಯಕ್ಷ ನಾಗೇಶ ಶೆಣೈ, ಕಾರ್ಯದರ್ಶಿ ಅಶೋಕ್ ಆಚಾರ್ಯ, ಪಂಚನಬೆಟ್ಟು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಾಂಡುರಂಗ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘಟಕ, ನಟ ಶಂಕರ ಶೆಟ್ಟಿ ಅವರು ಪ್ರತಿಭೆಗಳನ್ನು ಗೌರವಿಸಿದರು. ಮಕ್ಕಳ ಪ್ರತಿಭಾ ದರ್ಶನ ಕಾರ್ಯಕ್ರಮದಲ್ಲಿ ಶ್ರೇಯಾ ಎಂ.ಜಿ ಸುಳ್ಯ, ಅವನಿ ಎಂ.ಎಸ್ ಸುಳ್ಯ,ದೀಕ್ಷ್ಣ ಕಲ್ಮಾಡಿ,ಸ್ವಪ್ನ ಕುಲಾಲ್ ಬನ್ನಡ್ಕ, ಆದ್ಯ ಕಲ್ಯಾ,ಸಾನ್ವಿ.ಜಿ.ಭಟ್, ತನಿಶಾ ಕಾರ್ಕಳ, ಜನಿತ್ ಜಿ.ಎನ್ ಸುರತ್ಕಲ್, ಅಪೂರ್ವ ಮಾಳ, ಸುನಿಧಿ ಎಸ್.ಅಜೆಕಾರು, ಸುನಿಜ ಅಜೆಕಾರು, ನಮೃತ್ ಆಚಾರ್ಯ ಮತ್ತು ಶಾಲೆಯ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ಯಕ್ಷ ಸಾಂಗತ್ಯ ಮಿತ್ರ ಮಂಡಳಿ ಕಾರ್ಕಳ ಇವರು ಮಹಿಷ ಮರ್ಧಿನಿ ಯಕ್ಷಗಾನ ಪ್ರದರ್ಶಿಸಿದರು.ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಮೇಶ ಸೇರ್ವೇಗಾರ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಕೆ.ಉಮೇಶ ನಾಯಕ್ ವಂದಿಸಿದರು. ಸಂದೇಶ ಕುಲಾಲ್ ಮತ್ತು ಸತೀಶ ಶೆಟ್ಟಿಗಾರ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply