ಭೈರವಿ ಆರ್. ಪಂಡ್ಯರವರಿಗೆ ಪಿ.ಎಚ್.ಡಿ. ಪದವಿ

ಉಡುಪಿ : ಪೂರ್ಣಪ್ರಜ್ಞ ಕಾಲೇಜಿನ ಹಿಂದಿ ವಿಭಾಗದ ಉಪನ್ಯಾಸಕಿಯಾಗಿರುವ ಭೈರವಿ ಆರ್. ಪಂಡ್ಯ ಇವರು, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕರಿಯಪ್ಪ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾಗಿರುವ ಡಾ. ಶ್ರೀಧರ ಹೆಗಡೆ ಇವರ ಮಾರ್ಗದರ್ಶನದಲ್ಲಿ ‘ಮಮತಾ ಕಾಲಿಯಾ ಔರ್ ವರ್ಷಾ ಅಡಾಲ್ಜ ಕಿ ಪ್ರಾತಿನಿಧಿಕ್ ಕಹಾನಿಯೋಂ ಮೆ ತುಲನಾತ್ಮಕ್ ಅನುಶೀಲನ್’ ವಿಷಯದ ಕುರಿತು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ಸಂಶೋಧನ ಮಹಾಪ್ರಬಂಧಕ್ಕೆ ಪಿ.ಎಚ್‌ಡಿ ಪದವಿ ಲಭಿಸಿದೆ.

ವಿಶ್ವವಿದ್ಯಾನಿಲಯದ ಘಟಿಕೋತ್ಸವದ ಸಂದರ್ಭದಲ್ಲಿ ಪಿ.ಎಚ್‌ಡಿ. ಪದವಿಯನ್ನು ಪ್ರಧಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 
 
 
 
 
 
 
 
 
 
 

Leave a Reply