Janardhan Kodavoor/ Team KaravaliXpress
29.6 C
Udupi
Thursday, January 20, 2022
Sathyanatha Stores Brahmavara

ಶಿವಾನಿಯ ಅಸಾಧಾರಣ ಸಾಧನೆ

ಹೆಬ್ರಿಯ ಸುಜಾತ ಶೆಟ್ಟಿ ಮತ್ತು ಶಿವಾನಂದ ಶೆಟ್ಟಿ ದಂಪತಿಗಳ ಸುಪ್ರತ್ರಿ ಕುಮಾರಿ ಶಿವಾನಿ ಶೆಟ್ಟಿಗೆ ಆಟಪಾಠದೊಂದಿಗೆ ಯೋಗಾಸನದಲ್ಲಿ ತುಂಬಾ ಆಸಕ್ತಿ. ಯೋಗದಲ್ಲಿ ಉನ್ನತ ಸಾಧನೆಯನ್ನು ಮಾಡಬೇಕೆಂಬ ಹಂಬಲಕ್ಕೆ ಇಂಬು‌ ಕೊಟ್ಟವರು ಕಾರ್ಕಳದ ಪ್ರಸಿದ್ಧ ಅಂತರಾಷ್ಟ್ರೀಯ ಯೋಗ ಶಿಕ್ಷಕ ಕೆ. ನರೇಂದ್ರ ಕಾಮತ್‌ರವರು.

ಅವರಿಂದ ತರಬೇತಿಯನ್ನು ಪಡೆದ‌‌ ಈಕೆ  ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ರಾಜ್ಯ ಮಟ್ಟದ ಯೋಗಾಸನ ಮತ್ತು ಆರ್ಟಿಸ್ಟಿಕ್‌’ ಸ್ಫರ್ಧೆಯಲ್ಲಿ ಭಾಗವಹಿಸಿ 9 ರಿಂದ 14 ವರುಷಗಳ ವಯೋಮಿತಿಯ ವಿಭಾಗದಲ್ಲಿ ಸೆಮಿಫೈನಲ್‌ ಗೆ ಆಯ್ಕೆಯಾಗಿದ್ದಾಳೆ.

ಅಲ್ಲದೆ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಮತ್ತು ಸೂರ್ಯ ನಮಸ್ಕಾರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ. ಮುಂದೆ ಹೆಚ್ಚಿನ ತರಬೇತಿಯನ್ನು ತನ್ನ ಗುರುಗಳಿಂದ ಪಡೆದು ಯೋಗ ವಿಜ್ಞಾನಿ ಆಗಬೇಕೆಂಬ ಹೆಬ್ಬಯಕೆ ಅವಳದ್ದು.

 ಉಡುಪಿಯ ವಿದ್ಯೋದಯ ಪಬ್ಲಿಕ್‌ ಸ್ಕೂಲ್‌ನ ನಾಲ್ಕನೇ ತರಗತಿಯ ವಿದ್ಯಾರ್ಥಿನಿಯಾಗಿರುವ. ಶಿವಾನಿ ಶೆಟ್ಟಿಯ ಸಾಧನೆಗೆ ಪ್ರಾಂಶುಪಾಲರು, ಶಿಕ್ಷಕರು, ಪ್ರೋತ್ಸಾಹ ಮತ್ತು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.  

ಹತ್ತು ಹಲವು ಯೋಗ ಸ್ಪರ್ಧೆಗಳಲ್ಲಿ‌ಭಾಗವಹಿಸಿರುವ ಈಕೆ ವರ್ಷಿಣಿ ಯೋಗ ಎಜುಕೇಶನ್‌ ಮತ್ತು ಕಲ್ಚರಲ್‌ ಸ್ಪೋರ್ಟ್‌ ಶಿವಮೊಗ್ಗ ಮತ್ತು ಧ್ಯಾನ ಜ್ಯೋತಿ ಯೋಗ ಎಜುಕೇಶನ್‌ ಸ್ಪೋರ್ಟ್‌ ಸೋಷಿಯಲ್‌ ಮತ್ತು ಕಲ್ಚರಲ್‌ ಚಾರಿಟೆಬಲ್‌ ಟ್ರಸ್ಟ್‌ ಹುಬ್ಬಳ್ಳಿ ಇವರ ಸಹಯೋಗದಲ್ಲಿ ನಡೆದ 2ನೇ ಅಂತರ್‌ ರಾಜ್ಯ ಆನ್ಲೈನ್‌ ಯೋಗಾಸನ ಚಾಂಪಿಯನ್‌ಶಿಪ್‌2021 ರಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನ ಗಳಿಸಿ ಅಂಡಮಾನ್‌ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ.

ಈಕೆಯ ಈ ಸಾಧನೆಗೆ ಟೀಮ್ ಕರಾವಳಿ ಎಕ್ಸ್ಪ್ರೆಸ್.ಕಾಂ ಅಭಿನಂದನೆಯನ್ನು ಸಲ್ಲಿಸುತ್ತಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!