ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಪ್ರಾದ್ಯಾಪಕರು ಪ್ರತಿಷ್ಠಿತ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ವಿಶೇಷ ಮನ್ನಣೆಯಿಂದ ಗುರುತಿಸಲ್ಪಟ್ಟಿದ್ದಾರೆ

ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ (ಎಂ ಐ ಟಿ )ದ ಮೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ನರೇಂದ್ರ ಖಾತ್ರಿ ಮತ್ತು ಡಾ. ನೀರಜ್ ಅವರು ಎರಡು ಗೌರವಾನ್ವಿತ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ತಮ್ಮ ಅಸಾಧಾರಣ ಸಂಶೋಧನಾ ಕೊಡುಗೆಗಳಿಗಾಗಿ ಗುರುತಿಸಲ್ಪಟ್ಟಿದ್ದಾರೆ ಹಾಗೂ ಸಂಸ್ಥೆಗೆ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ ಮತ್ತು ಅತ್ಯಾಧುನಿಕ ಸಂಶೋಧನೆಯಲ್ಲಿ ಅದರ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.

ದುಬೈನ ಅಮಿಟಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಕಂಪ್ಯೂಟೇಶನಲ್ ಇಂಟೆಲಿಜೆನ್ಸ್ ಮತ್ತು ನಾಲೆಡ್ಜ್ ಎಕಾನಮಿ (ICCIKE2023) ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ನರೇಂದ್ರ ಖಾತ್ರಿ ಅವರಿಗೆ ಅತ್ಯುತ್ತಮ ಪೇಪರ್ ಪೆಸೆಂಟೇಷನ್ ಗಾಗಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಮ್ಮೇಳನವು ವಿಶ್ವಾದ್ಯಂತ ಉನ್ನತ ದರ್ಜೆಯ ಸಂಶೋಧಕರು ಮತ್ತು ಶಿಕ್ಷಣ ತಜ್ಞರನ್ನು ಆಕರ್ಷಿಸುವ ಸಮ್ಮೇಳನವು ಕಂಪ್ಯೂಟೇಶನಲ್ ಇಂಟೆಲಿಜೆನ್ಸ್ ನಲ್ಲಿನ ನಾವೀನ್ಯತೆಗಳನ್ನು ಮತ್ತು ಜ್ಞಾನ ಆರ್ಥಿಕತೆಯಲ್ಲಿ ಅದರ ಅನ್ವಯಗಳನ್ನು ಚರ್ಚಿಸಲು ಮತ್ತು ಅನ್ವೇಷಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಡಾ. ನೀರಜ್ ಅವರ ಅಸಾಧಾರಣ ಕೆಲಸವು ಭೋಪಾಲ್‌ನ ಮೌಲಾನಾ ಆಜಾದ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ ಐ ಈ ಈ ಈ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಆನ್ ರಿನ್ಯೂವಬಲ್ ಎನರ್ಜಿ ಮತ್ತು ಸಸ್ಟೈನಬಲ್ ಇ-ಮೊಬಿಲಿಟಿ (RESEM 2023) ನಲ್ಲಿ ಅತ್ಯುತ್ತಮ ಪೇಪರ್ ಪ್ರೆಸೆಂಟೇಷನ್ ಮನ್ನಣೆಗಳಿಸಿದೆ.

ಭವಿಷ್ಯದ ಸುಸ್ಥಿರ ಪರಿಹಾರಗಳನ್ನು ಚರ್ಚಿಸಲು ನವೀಕರಿಸಬಹುದಾದ ಇಂಧನ ಮತ್ತು ಇ-ಮೊಬಿಲಿಟಿಯಲ್ಲಿ ತಜ್ಞರನ್ನು ಒಟ್ಟುಗೂಡಿಸಲು ಈ ಸಮ್ಮೇಳನವು ಹೆಸರುವಾಸಿಯಾಗಿದೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಅಂಗ ಸಂಸ್ಥೆಯಾದ ಎಂಐಟಿಯ ನಿರ್ದೇಶಕರಾದ ಕಮಾಂಡರ್ (ಡಾ) ಅನಿಲ್ ರಾಣಾ ಅವರು ಡಾ. ನರೇಂದ್ರ ಖಾತ್ರಿ ಮತ್ತು ಡಾ. ನಿರಾಜ್ ಅವರ ಗಮನಾರ್ಹ ಸಾಧನೆಗಳಿಗಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಕೊಡುಗೆಗಳು ಪ್ರಾಧ್ಯಾಪಕರಿಗೆ ಮಾತ್ರವಲ್ಲದೆ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಗಮನಾರ್ಹ ಮನ್ನಣೆಯನ್ನು ತಂದುಕೊಟ್ಟಿವೆ ಮತ್ತು ಇದು ಸಂಶೋಧನೆ ಮತ್ತು ಶೈಕ್ಷಣಿಕ ಉತ್ಕೃಷ್ಟತೆಯ ಪ್ರಮುಖ ಕೇಂದ್ರವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಹೇಳಿದರು .

 
 
 
 
 
 
 
 
 
 
 

Leave a Reply