ಚಿನ್ನ ಗೆದ್ದ ಮೀರಾಬಾಯಿ ಚಾನು

ಕಾಮನ್ ವೆಲ್ತ್ ಗೇಮ್ಸ್ ಮೀರಾಬಾಯಿ ಚಾನು ಅವರು ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್ ಫೈನಲ್ ನಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಈ ಮೂಲಕ ಸಿಡಬ್ಲ್ಯೂಜಿ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ.

ಮೊದಲ ಸುತ್ತಿನಲ್ಲಿ 84 ಕೆಜಿ ಭಾರ ಎತ್ತಿದ್ದ ಚಾನು, ಎರಡನೇ ಸುತ್ತಿನಲ್ಲಿ 88 ಕೆಜಿ ಭಾರ ಎತ್ತಿ 12 ಕೆಜಿ ಮುನ್ನಡೆ ಕಾಯ್ದುಕೊಂಡಿದ್ದರು. ಕೊನೆಯದಾಗಿ ಚಿನ್ನಕ್ಕೆ ಮುತ್ತಿಕ್ಕುವಯಲ್ಲಿ ಯಶಸ್ವಿಯಾಗಿದ್ದಾರೆ.

ವೇಟ್‌ ಲಿಫ್ಟರ್ ಮೀರಾಬಾಯಿ ಚಾನು ಮಹಿಳೆಯರ 49 ಕೆಜಿ ವಿಭಾಗದಲ್ಲಿ ಒಟ್ಟು 201 ಕೆಜಿ ಎತ್ತುವ ಮೂಲಕ ಚಿನ್ನ ಗೆದ್ದು ದಾಖಲೆ ನಿರ್ಮಿಸಿದ್ದಾರೆ.

 
 
 
 
 
 
 
 
 
 
 

Leave a Reply