ಸ್ವಾಸ್ಥ್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮ

ರೇಡಿಯೋ ಮಣಿಪಾಲ್ 90.4 Mhz

-ದೇಸಿ ಸೊಗಡು

ಸಮುದಾಯ ಬಾನುಲಿ ಕಮ್ಯುನಿಟಿ ರೇಡಿಯೋ ಅಸೋಸಿಯೇಶನ್ ನ ಸಹಯೋಗದಲ್ಲಿ ಕಾರ್ಕಳದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ-ಪೆರ್ವಾಜೆ ಯಲ್ಲಿ ವಿದ್ಯಾರ್ಥಿಗಳಿಗಾಗಿ ಸ್ವಾಸ್ಥ್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಆಶಾ ಮತ್ತು ಸ್ವಚ್ಛ ಬ್ರಿಗೇಡ್ ಬಜಗೋಳಿ ಇದರ ಕಾರ್ಯಕರ್ತೆ ಆರತಿ ಅಶೋಕ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಕೋವಿಡ್ 19 ಮತ್ತು ಶಾಲಾರಂಭದ ಸವಾಲುಗಳನ್ನು ವಿದ್ಯಾರ್ಥಿಗಳು ಯಾವರೀತಿ ಎದುರಿಸಬೇಕು ಎನ್ನುವ ವಿಷಯದ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ರೇಡಿಯೋ ಮಣಿಪಾಲದ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರಾದ ಡಾ.ರಶ್ಮಿ ಅಮ್ಮೆಂಬಳ, ಶಾಲಾ ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಹೆಗಡೆ, ನಿವೃತ್ತ ಶಾಲಾ ಶಿಕ್ಷಕಿ ಲಕ್ಷ್ಮೀ ಮತ್ತು ಸ್ವಚ್ಛ ಬ್ರಿಗೇಡ್ ಕಾರ್ಕಳದ ಸಕ್ರಿಯ ಸದಸ್ಯೆ ಸುನೀತ ಅಂಡಾರು ಉಪಸ್ಥಿತರಿದ್ದರು. ಶಾಲಾ ಸಿಬ್ಬಂದಿಗಳು ಸಹಕರಿಸಿದರು.

 ..

ರೇಡಿಯೋ ಮಣಿಪಾಲ,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ,ಮಣಿಪಾಲ.

 
 
 
 
 
 
 
 
 
 
 

Leave a Reply