Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಬೌದ್ಧಿಕ ಆಸ್ತಿ ಹಕ್ಕುಗಳು- ವ್ಯಾಪ್ತಿ ಮತ್ತು ಪ್ರಸ್ತುತತೆ

ಪ್ರಾಚೀನ ಭಾರತೀಯ ಧರ್ಮವು ಜ್ಞಾನದ ಮುಕ್ತ ಅರಿವನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಸುಗಮಗೊಳಿಸಿತ್ತು. ಭಾರತೀಯರು ವಿಜ್ಞಾನದ ಪ್ರತಿಯೊಂದು ಶಾಖೆಗಳಿಗೆ ತತ್ವಶಾಸ್ತçಗಳಿಗೆ ಹಾಗೂ ಇತರ ಅಗಣಿತ ಕ್ಷೇತ್ರಗಳಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. 
 
ವೇದಗಳು, ಉಪನಿಷತ್ತುಗಳಲ್ಲಿ ಅಡಗಿರುವ ರಹಸ್ಯಗಳು ಭಾರತೀಯರಿಗಿಂತ ಹೆಚ್ಚಾಗಿ ವಿದೇಶಯರಿಂದ ಹೆಚ್ಚು ಬಳಸಲ್ಪಟ್ಟವು. ಬೌದ್ಧಿಕ ಆಸ್ತಿ ಹಕ್ಕುಗಳ ಜ್ಞಾನವು ಸಮಾಜದ ಪ್ರತಿಯೊಬ್ಬರಿಗೂ, ವಿಶೇಷವಾಗಿ ಉದಯೋನ್ಮುಖ ವ್ಯವಸ್ಥಾಪಕರಿಗೆ ಅತ್ಯಗತ್ಯವಾಗಿವೆ ಎಂದು ಪೂರ್ಣಪ್ರಜ್ಞ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಲ್ಲಿ ಆಯೋಜಿಸಿದ “ಬೌದ್ಧಿಕ ಆಸ್ತಿ ಹಕ್ಕುಗಳು-ವ್ಯಾಪ್ತಿ ಮತ್ತು ಪ್ರಸ್ತುತತೆ” ಎಂಬ ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಎಸ್.ಡಿ.ಎಂ. ಕಾನೂನು ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಬಾಲಿಕಾ ಪ್ರಶಾಂತ್ ಅಭಿಪ್ರಾಯಪಟ್ಟರು. 
 
ಪಿ.ಐ.ಎಂ. ನ ಐ.ಪಿ.ಆರ್.ಎಸ್ ಸಂಘ ಆಯೋಜಿಸಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರ್ದೇಶಕರಾದ ಡಾ. ಭರತ್ ವಿ. ವಹಿಸಿದ್ದರು. ಪಿ.ಐ.ಎಂ. ನ ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಡಾ. ಕೃಷ್ಣ ಕೊತಾಯ, ಉಪನ್ಯಾಸಕ ವರ್ಗ ಹಾಗೂ ಪ್ರಥಮ ಮತ್ತು ದ್ವಿತೀಯ ಎಂ.ಬಿ.ಎ. ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಯೊಂದಿಗೆ ವಿಚಾರ ವಿನಿಮಯ ನಡೆಸಿ, ಸಂಶಯಗಳನ್ನು ನಿವಾರಿಸಿಕೊಂಡರು.
ದ್ವಿತೀಯ ಎಂ.ಬಿ.ಎ ವಿದ್ಯಾರ್ಥಿಗಳಾದ ಸಂಪತ್ ಜೋಗಿ, ಕು. ಗೀತಾ, ಕು. ಪ್ರತೀಭಾ, ಕು. ಶಾರ್ವರಿ ನಡೆಸಿಕೊಟ್ಟ ಈ ಕಾರ್ಯಕ್ರಮವನ್ನು ಸಂಸ್ಥೆಯ ಅದ್ಯಾಪಿಕೆ ಡಾ. ಭಾರತಿ ಕಾರಂತ್ ಸಂಯೋಜಿಸಿದ್ದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!