ಪದ್ಮಾಸನದಲ್ಲಿ ಕುಳಿತು ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ. ಕಡೆಕಾರ್

ಉಡುಪಿ : ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ 65 ವರ್ಷ ಪ್ರಾಯದ ಗಂಗಾಧರ್ ಜಿ. ಕಡೆಕಾರ್ 1.400 ಕಿ.ಮೀ. ದೂರ ಈಜಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ‌ನಲ್ಲಿ ದಾಖಲೆ ಬರೆದಿದ್ದಾರೆ.

ಬ್ರೆಸ್ಟ್ ಸ್ಟ್ರೋಕ್ ಶೈಲಿಯಲ್ಲಿ ಸಮುದ್ರದಲ್ಲಿ ಗಂಗಾಧರ್ ಈಜುವ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ ‌ನಲ್ಲಿ ನೂತನ ದಾಖಲೆ ಬರೆದಿದ್ದಾರೆ. 1 ಗಂಟೆ 13 ನಿಮಿಷ 7 ಸೆಕೆಂಡ್ ನಲ್ಲಿ 1.400 ಕಿ.ಮೀ ಈಜುವ ಮೂಲಕ ಈ ಸಾಧನೆ ಮಾಡಿದ್ದು, ಶ್ರೀ ದೇವಿ ಭಜನಾ ಮಂದಿರ ಬಳಿಯ ಪಡುಕರೆ ಕಡಲ ಕಿನಾರೆಯಲ್ಲಿ ತಮ್ಮ ಅಪ್ರತಿಮ ಸಾಹಸವನ್ನು ಪ್ರದರ್ಶಿಸಿದ್ದಾರೆ.

 ಗಂಗಾಧರ್ ಇಂದು ಪದ್ಮಾಸನ ಭಂಗಿಯಲ್ಲಿ ಕುಳಿತ ಬಳಿಕ ಅವರ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಲಾಯಿತು. ಬೆಳಗ್ಗೆ 8.36 ಸಮುದ್ರದಲ್ಲಿ ಈಜು ಆರಂಭಿಸಿ 9.40ಕ್ಕೆ ದಡ ಸೇರಿದರು. ಗಂಗಾಧರ್ ಜಿ. ಕಡೆಕಾರ್ ಈಜಾಬೇಕಾದ ಆರಂಭದಿಂದ ಕೊನೆಯ ತನಕವೂ ತೇಲುವ ಮಾರ್ಕಿಂಗ್ ಮಾಡಲಾಗಿತ್ತು. ಕರಾವಳಿ ಕಾವಲು ಪಡೆಯ ಪೊಲೀಸರು ಬೋಟ್‌ನೊಂದಿಗೆ ಜೊತೆಗಿದ್ದರು, ರಕ್ಷಣಾ ಬೋಟ್‌ಗಳಿದ್ದವು. 

 
 
 
 
 
 
 
 
 
 
 

Leave a Reply