ಉದಯ ನಾಯ್ಕ ಅವರಿಗೆ ಕರ್ನಾಟಕ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಪ್ರಶಸ್ತಿ

ಬೆಂಗಳೂರು :ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಸೂರೆನ್ಸ್ ಕಂಪನಿ ಉಡುಪಿ ಶಾಖೆಯ ಹಿರಿಯ ಮಾರುಕಟ್ಟೆ ಪ್ರಬಂಧಕ ರಾಗಿರುವ ಉದಯ ನಾಯ್ಕಗೆ ಆರೋಗ್ಯ ವಿಮಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೆ ಸ್ಟಾರ್ ಹೆಲ್ತ್ ಕಂಪನಿಯ ಕರ್ನಾಟಕ ವಲಯ ಪ್ರಶಸ್ತಿ :.

ಆಗಸ್ಟ್ 17, 2021 Conrad ಬೆಂಗಳೂರು Hilton ಇಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಸ್ಟಾರ್ ಹೆಲ್ತ್ ಅಂಡ್ ಅಲ್ಲೈಡ್ ಇನ್ಸುರೆನ್ಸ್ ಕಂಪೆನಿಯು ಕರ್ನಾಟಕದ ಎಲ್ಲಾ ಶಾಖೆಗಳಲ್ಲಿ ಆರೋಗ್ಯ ವಿಮಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಾರುಕಟ್ಟೆ ಪ್ರಬಂಧಕರಿಗೆ 2020 -21 ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ನಡೆದಿರುವ ಅದ್ದೂರಿ ಕಾರ್ಯಕ್ರಮದಲ್ಲಿ ಉಡುಪಿ ಶಾಖೆಯ ಹಿರಿಯ ಮಾರುಕಟ್ಟೆ ಪ್ರಬಂಧಕ ರಾಗಿರುವ ಉದಯ್ ನಾಯ್ಕ ಅವರಿಗೆ ಕರ್ನಾಟಕ ವಲಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸ್ಟಾರ್ ಹೆಲ್ತ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ವಿಕಾಸ್ ಶರ್ಮಾ ಪ್ರಶಸ್ತಿ ನೀಡಿ ಗೌರವಿಸಿದರು . ಈ ಸಂದರ್ಭದಲ್ಲಿ ಕರ್ನಾಟಕದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿರುವ ಜೋನ್ ನರೊನಾ , ಹಿರಿಯ ಉಪಾಧ್ಯಕ್ಷ ರಾಗಿರುವ ಮನು ಬಟೂರ್ , ಕ್ಲೈಂ ಇಲಾಖೆಯ ಮುಖ್ಯಸ್ಥರಾಗಿರುವ ಡಾಕ್ಟರ್ ರಾಜೀವ್ ಲೋಚನ್ , ವಲಯ ಮೆನೇಜರ್ ಕಿಶನ್ ವಿ ಕೆ , ಮಂಗಳೂರು ಏರಿಯಾ ಮೆನೇಜರ್ ಮೆಲ್ವಿನ್ ಡಿಸೋಜ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.

ಮಂಗಳೂರಿನ ಹಿರಿಯ ಮಾರುಕಟ್ಟೆ ಪ್ರಬಂಧಕ ರಾಗಿರುವ ಪ್ರವೀಣ್ ಕ್ಯಾಸ್ಟಲಿನೊ , ವಿಶ್ವಜ್ಞ ಆಚಾರ್ಯ , ಉಡುಪಿ ಶಾಖೆಯ ಹಿರಿಯ ಮಾರುಕಟ್ಟೆ ಪ್ರಬಂಧಕರಾಗಿರುವ ಶಿವನಂದ ಸಾಲಿಯಾನ್ ಹಾಗೂ ಕರ್ನಾಟಕದ ಎಲ್ಲಾ ಶಾಖೆಯ ಉತ್ತಮ ಸಾಧನೆ ಮಾಡಿರುವ ಸೇಲ್ಸ್ ಮ್ಯಾನೇಜರ್ ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply