ರಾಷ್ಟ್ರೀಯ ಮಟ್ಟದ ಅಬಾಕಸ್ ೨೦೨೨ ಸ್ಪರ್ಧೆಯಲ್ಲಿ ಕೋಟ ಎಜ್ಯುಕೇರ್ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ

ಕೋಟ: ಕೇರಳದ ತಿರುವನಂತಪುರದಲ್ಲಿ ನಡೆದ ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈ.ಲಿ ವತಿಯಿಂದ ನಡೆದ 17ನೇ ರಾಷ್ಟ್ರೀಯ ಮಟ್ಟದ ಅಬಾಕಸ್ ೨೦೨೨ ಸ್ಪರ್ಧೆಯಲ್ಲಿ ಕೋಟ ಎಜ್ಯುಕೇರ್ ಸಂಸ್ಥೆ ವತಿಯಿಂದ ಭಾಗವಹಿಸಿದ ರಾಘವೇಂದ್ರ ಕೊಠಾರಿ ಮತ್ತು ಗೀತಾ ಕೊಠಾರಿ ಅಕ್ಷಯ ಮೆಡಿಕಲ್ಸ್ ಕೋಟ ಇವರ ಪುತ್ರ ಅಥರ್ವ ಆರ್ ಕೊಠಾರಿ ಪ್ರಥಮ ಸ್ಥಾನ, ರಾಮ ಮೊಗೇರ ಹೈಸ್ಕೂಲ್ ಕಲ್ಯಾ ಕಾರ್ಕಳ ಮತ್ತು ನಾಗರತ್ನ ಗುಂಡ್ಮಿ, ಶಿಕ್ಷಕರು ಕೋಟ ಪಡುಕರೆ. ಇವರ ಪ್ರಥಮ ಪುತ್ರ ಪ್ರಕುಲ್ ಮೆಂಡನ್ ದ್ವಿತೀಯ ಸ್ಥಾನ ಹಾಗೂ ದ್ವಿತೀಯ ಪುತ್ರ ಶಿಖರ್ ಮೆಂಡನ್ ತೃತೀಯ ಸ್ಥಾನ ,ಗಿಳಿಯಾರು ಭಾಸ್ಕರ್ ಸ್ವಾಮಿ ಹಾಗೂ ಶಾಲಿನಿ ಇವರ ಪುತ್ರಿ ಸರ್ವಶ್ರೀ ತೃತೀಯ ಸ್ಥಾನ, ಹಂದಟ್ಟು ಭಾಸ್ಕರ್ ಪೂಜಾರಿ ಹಾಗೂ ರಜನಿ ಇವರ ಪುತ್ರ ಹಾರ್ದಿಕ ಬಿಲ್ಲವ ೫ನೇ ಸ್ಥಾನ. ಪಡೆದಿದ್ದಾರೆ.ಕೋಟ ಎಜ್ಯುಕೇರ್ ಸಂಸ್ಥೆ ಸ್ಥಾಪಕ ಅಧ್ಯಕ್ಷರಾದ ಚೇತನ ಎಂ ಅಭಿನಂದನೆ ಸಲ್ಲಿಸಿದ್ದಾರೆ

 
 
 
 
 
 
 
 
 
 
 

Leave a Reply