ಅಂತರ್ ಕಾಲೇಜು ಮಟ್ಟದ ಪುರುಷ ಮತ್ತು ಮಹಿಳೆಯರ ಬ್ಯಾಡ್ಮಿಂಟನ್ ಪಂದ್ಯಾಟ

ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಯುವಸಬಾಲೀಕರಣ ಕ್ರೀಡಾ ಇಲಾಖೆ ಇವುಗಳ ಆಶ್ರಮದಲ್ಲಿ ನಡೆದ 2021-22ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಮಟ್ಟದ ಪುರುಷ ಮತ್ತು ಮಹಿಳೆಯರ ಬ್ಯಾಡ್ಮಿಂಟನ್ ಪಂದ್ಯಾಟದ ಸಮಾರೋಪ ಸಮಾರಂಭವು ದಿನಾಂಕ 2-7-2022 ರಂದು ಅಜ್ಜರಕಾಡು ಉಡುಪಿ ಜಿಲ್ಲಾ ಒಳಾoಗಣ ಕ್ರೀಡಾಂಗಣ ದಲ್ಲಿ ನಡೆಯಿತು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಕನ್ನಡ ಸಹ ಪ್ರಾಧ್ಯಪಕರಾದ ಪ್ರೊ ರಾಧಾಕೃಷ್ಣ ಅವರು ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರು ಡಾ. ಜೆರಾಲ್ಡ್ ಸಂತೋಷ ಡಿಸೋಜ ಅವರು ಅತಿಥಿಗಳಾಗಿ ಆಗಮಿಸಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆಯುವಂತಹ ಸಾಮರ್ಥ್ಯವನ್ನು ಕ್ರೀಡಾಪಟುಗಳು ಪಡೆಯಬೇಕೆಂದರು.

ಅತಿಥಿ ಗಳಾಗಿ ಆಗಮಿಸಿದ್ದ ವಿಜಯ್ ಕೊಡವೂರು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕೆಂದು ಸಲಹೆ ಕೊಟ್ಟರು. ಹೆಬ್ರಿ ಕಾಲೇಜಿನ ಪ್ರಾಂಶುಪಾಲರು ಪ್ರೊ. ಪ್ರಸಾದ್ ರಾವ್, ಪಂದ್ಯಾಟ ವೀಕ್ಷಕರಾದ ಅರುಣ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕರು ಜಯರಾಮ್ ರೈ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ ರೋಷನ್ ಕುಮಾರ್ ಶೆಟ್ಟಿ, ಡಾ. ರಾಮಚಂದ್ರ ಪಾಟ್ಕರ್ ಉಪಸ್ಥಿತರಿದ್ದರು.

ಪ್ರಿಲಿಮಿನರಿ ರೌಂಡ್ ಮಹಿಳೆಯರ ವಿಭಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು 4ನೇ ಸ್ಥಾನವನ್ನು, MGM ಕಾಲೇಜು ಉಡುಪಿ 3ನೇ ಸ್ಥಾನವನ್ನು, ಆಳ್ವಾಸ್ ಕಾಲೇಜು ಮೂಡುಬಿದಿರೆ 2ನೇ ಸ್ಥಾನವನ್ನು, ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಮೊದಲ ಸ್ಥಾನ ಪಡೆಯಿತು.

ಪ್ರಿಲಿಮಿನರಿ ರೌಂಡ್ ಪುರುಷರ ವಿಭಾಗದಲ್ಲಿ S D P T ಕಾಲೇಜು ಕುಟ್ಯಲ್ 4ನೇ ಸ್ಥಾನವನ್ನು, P P C ಕಾಲೇಜು ಉಡುಪಿ 3ನೇ ಸ್ಥಾನವನ್ನು, ಭಂಡಾರ್ಕರ್ ಕಾಲೇಜು ಕುಂದಾಪುರ 2ನೇ ಸ್ಥಾನವನ್ನು, FMHMC ಕಾಲೇಜು ಮಡಿಕೇರಿ ಮೊದಲನೇ ಸ್ಥಾನ ಪಡೆಯಿತು.

ಚಾಂಪಿಯನ್ಷಿಪ್ ರೌಂಡ್ ಮಹಿಳೆಯರ ವಿಭಾಗದಲ್ಲಿ ಎಂಜಿಎಂ ಕಾಲೇಜು ಉಡುಪಿ 4ನೇ ಸ್ಥಾನವನ್ನು, ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ 3ನೇ ಸ್ಥಾನವನ್ನು, ಆಳ್ವಾಸ್ ಕಾಲೇಜು ಮೂಡುಬಿದಿರೆ 2ನೇ ಸ್ಥಾನವನ್ನು, ಸೇಂಟ್ ಅಲೋಶಿಯಸ್ ಕಾಲೇಜು ಮಂಗಳೂರು ಮೊದಲನೇ ಸ್ಥಾನ ಪಡೆಯಿತು.

ಚಾಂಪಿಯನ್ಷಿಪ್ ರೌಂಡ್ ಪುರುಷರ ವಿಭಾಗದಲ್ಲಿ SDM ಕಾಲೇಜು ಉಜಿರೆ 4ನೇ ಸ್ಥಾನವನ್ನು, ಸೇಂಟ್ ಫಿಲೋಮಿನಾ ಕಾಲೇಜು ಪುತ್ತೂರು 3ನೇ ಸ್ಥಾನವನ್ನು, ಆಳ್ವಾಸ್ ಕಾಲೇಜು ಮೂಡುಬಿದಿರೆ 2ನೇ ಸ್ಥಾನವನ್ನು, ಸೇಂಟ್ ಅಲೋಶಿಯಸ್ ಕಾಲೇಜು ಮಂಗಳೂರು ಮೊದಲನೇ ಸ್ಥಾನ ಪಡೆಯಿತು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply