Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ವೈದ್ಯರ ದಿನಾಚರಣೆ ಅಭಿನಂದನಾ ಸಮಾರಂಭ

ಉಡುಪಿ :- ಕನಾ೯ಟಕ ರಾಜ್ಯ ವೈದ್ಯಕೀಯ, ಪ್ರತಿನಿಧಿಗಳ ಸಂಘ ಉಡುಪಿ ಮತ್ತು ಜಯಂಟ್ಸ್ ಗ್ರೂಫ್ ಆಫ್ ಬ್ರಹ್ಮಾವರ ಇದರ ವತಿಯಿಂದ 20 ನೇ ವಷ೯ದ ವೈದ್ಯರ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭ ಜುಲೈ.2ರಂದು ಕಾತಿ೯ಕ್ ಎಸ್ಟೇಟ್ ಸಭಾಂಗಣದಲ್ಲಿ ನಡೆಯಿತು.

ಕಾಯ೯ಕ್ರಮದ ಮುಖ್ಯ ಅತಿಥಿ ಡಿ.ಎಚ್.ಒ ಡಾII ನಾಗಭೂಷಣ್ ಉಡುಪ , ವೈದ್ಯರ ಸೇವೆ ನಮ್ಮ ಸಮಾಜದಲ್ಲಿ ಅತ್ಯಂತ ಅಮೂಲ್ಯವಾದ ಸೇವೆ.ವೈದ್ಯರು ತಮ್ಮ ಈ ಅಪೂವ೯ ಸೇವೆಯ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ.ಆದರೆ ವೈದ್ಯರ ಮೇಲೆ ನಡೆಯುತ್ತಿರುವ ಅಮಾನವೀಯ ಹಲ್ಲೆ ಪ್ರಕರಣಗಳು ಖಂಡನೀಯ ಎಂದರು.

ಜಿಲ್ಲಾ ಸಜ೯ನ್.ಡಾ|| ಮಧುಸೂಧನ್ ನಾಯಕ್ ವೈದ್ಯಕೀಯ ಪ್ರತಿನಿಧಿಗಳ ಸೇವೆ ಉತ್ತಮವಾದದ್ದು ಹೊಸ ಔಷಧಗಳ ಬಗ್ಗೆ ಅವರಿಂದ ವೈದ್ಯರುಗಳಿಗೆ ಮಾಹಿತಿ ಸಿಗುತ್ತಿದೆ. ಅವರು ವೈದ್ಯರು ಮತ್ತು ರೋಗಿಗಳ ಮಧ್ಯೆ ಇರುವ ಕೊಂಡಿ ಎಂದರು.

ಐ.ಎಂ.ಎ ಉಡುಪಿ ಕರಾವಳಿ ಅಧ್ಯಕ್ಷ ಡಾII ಕಲ್ಯ ವಿನಾಯಕ್ ಶೆಣ್ಣಿ ವೈದ್ಯರುಗಳನ್ನು ಗುರುತಿಸಿ ಅವರ ಸೇವೆಗೆ ಕಳೆದ 20 ವಷ೯ಗಳಿಂದ ಮನ್ನಣೆ ನೀಡುತ್ತಿರುವ ವೈದ್ಯಕೀಯ ಪ್ರತಿನಿಧಿಗಳ ಸಂಘ ಮತ್ತು ಜಯಂಟ್ಸ್ ಗ್ರೂಪ್ ಕಾಯ೯ ಶ್ಯಾಘನೀಯ ಎಂದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕುಡೆ ವಹಿಸಿದ್ದರು.ವೇದಿಕೆಯಲ್ಲಿ ವೈದ್ಯಕೀಯ ಪ್ರತಿನಿಧಿಗಳ ಸಂಘ ಅಧ್ಯಕ್ಷ ಸತೀಶ್ ಹೆಗ್ಡೆ, ಜಯಂಟ್ಸ್ ಕಾಯ೯ದಶಿ೯ ಶ್ರೀನಾಥ್ ಕೋಟ ಮುಂತಾದವರಿದ್ದರು.

ಈ ಸಂದಭ೯ದಲ್ಲಿ ಹಿರಿಯ ಸಾಧಕ ವೈದ್ಯರಾದ ಕೆ.ಎಂ.ಸಿ ಮಣಿಪಾಲದ ಡಾII ರವೀoದ್ರ ಪ್ರಭು ಎ, ಕಟಪಾಡಿ ಸರಸ್ವತಿ ಕ್ಲಿನಿಕ್ ನ ಡಾII ರವೀಂದ್ರನಾಥ್ ಶೆಟ್ಟಿ, ಡಾII ಎನ್.ಆರ್ ಆಚಾಯ೯ ಆಸ್ಪತ್ರೆಯ ಪ್ರಮುಖರಾದ ಡಾII ಸಬಿತಾ ಬಿ.ಆಚಾಯ೯, ಕೆ.ಎಂ.ಸಿ ಮಕ್ಕಳ ತಜ್ಞ ಡಾII ಶ್ರೀಕಿರಣ್ ಹೆಬ್ಬಾರ್, ಸಕಾ೯ರಿ ಪ್ರಾ.ಆ ಕೇಂದ್ರ ಸಾಲಿಗ್ರಾಮ ದ ಡಾII ರಾಘವೇಂದ್ರ ರಾವ್ ರವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಈ ಸಂದಭ೯ದಲ್ಲಿ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸುಂದರ ಪೂಜಾರಿ ಸ್ವಾಗತಿಸಿದರು.ಮಂಜುನಾಥ್ ಕಾರಂತ್, ಸುಬ್ರಮಣ್ಯ ಆಚಾಯ೯, ಮಾಧವ ಉಪಾಧ್ಯ’, ಅನಂತಕೃಷ್ಣ ಹೊಳ್ಳ, ಶ್ರೀಕಾಂತ್ ಪೂಜಾರಿ , ವಿವೇಕ ಕಾಮತ್ ಪರಿಚಯಿಸಿದರು.ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು ಪ್ರಸ್ತಾವನೆಗೈದರು.ವೈದ್ಯಕೀಯ ಪ್ರತಿನಿಧಿ ಸಂಘ ದ ಕಾಯ೯ದಶಿ೯ ಪ್ರಸನ್ನ ಕಾರಂತ್ ವಂದಿಸಿದರು.ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು.ಈ ಸಂದಭ೯ದಲ್ಲಿ ಭಾಗವಹಿಸಿದ ವೈದ್ಯರುಗಳಿಗೆ ಗೌರವಿಸಲಾಯಿತು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!