ರುದ್ರ ರಮಣೀಯ ದೃಶ್ಯ~ ಕ್ಲಿಕ್: ಸುಶಾಂತ್ ಭಟ್ ಕೆರೆಮಠ

ಗೊಡಚಿನಮಲ್ಕಿ ಜಲಪಾತ ಗೋಕಾಕ ಪಟ್ಟಣದಿಂದ ಸುಮಾರು 19 ಕಿ.ಮೀ ದೂರದಲ್ಲಿರುವ ಒಂದು ಜಲಪಾತ. ಬೆಳಗಾವಿಯಿಂದ 40 ಕಿ.ಮೀ. ದೂರದಲ್ಲಿದೆ. ಮಾರ್ಕಂಡೇಯ ನದಿಯಿಂದ ಉಂಟಾಗಿರುವ ಇದಕ್ಕೆ ಮಾರ್ಕಂಡೇಯ ಜಲಪಾತ ಎಂದೂ ಕರೆಯುತ್ತಾರೆ. ಇಲ್ಲಿ ಜಲಪಾತದ ಎರಡು ಹಂತಗಳಿವೆ. ಮಾರ್ಕಂಡೇಯ ನದಿಯು ಮೊದಲು 25 ಮೀಟರ್ ಎತ್ತರದಿಂದ ಧುಮುಕಿ ಅನಂತರ ಹಂತದಲ್ಲಿ 18 ಮೀಟರ್ ಎತ್ತರದಿಂದ ಧುಮುಕುತ್ತದೆ. ಈ ಜಲಪಾತವು ಎತ್ತರಕ್ಕಿಂತ ಹೆಚ್ಚು ಅಗಲವಾಗಿದ್ದು ಬಂಡೆಗಲ್ಲುಗಳ ಮೇಲೆ ಹಂತ ಹಂತವಾಗಿ ಜಾರಿದಂತೆ ಇಳಿಯುತ್ತದೆ. ಅಲ್ಲಿಂದ ಮುಂದೆ ಮಾರ್ಕಂಡೇಯ ನದಿಯು ಘೋಡ್ಗೇರಿಯಲ್ಲಿ ಘಟಪ್ರಭಾ ನದಿಯನ್ನು ಸೇರುತ್ತದೆ. 

 
 
 
 
 
 
 
 
 
 
 

Leave a Reply