ಸಹ ಸಚಿವೆ ಭಾರತಿ ಪವಾರ್ ಜತೆ ಸ್ಮೃತಿ ಇರಾನಿ ಸ್ಕೂಟಿ ಸವಾರಿ!

ಕೇಂದ್ರ ಸಚಿವ ಸ್ಮೃತಿ ಇರಾನಿ ದೆಹಲಿಯ ರಸ್ತೆಯಲ್ಲಿ ಸ್ಕೂಟಿ ಸವಾರಿ ಮಾಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಸಹ ಸಚಿವೆ ಭಾರತಿ ಪವಾರ್ ಅವರನ್ನು ಕಚೇರಿಗೆ ತಲುಪಿಸುವ ಮಹತ್ವದ ಸಮಯ ನನ್ನದು’ ಎಂದು ಬರೆದುಕೊಂಡಿದ್ದಾರೆ. ಇನ್ಸ್ಟಾದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ವೀಡಿಯೋಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಆರೋಗ್ಯ ಖಾತೆ ರಾಜ್ಯ ಸಚಿವೆ ಪವಾರ್ ಅವರು ಸ್ಕೂಟಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದಿದ್ದಾರೆ. ಇನ್ನೊಂದು ರಾಷ್ಟ್ರಧ್ವಜವನ್ನು ವಾಹನದ ಹಿಂದಕ್ಕೆ ಕಟ್ಟಿರುವುದನ್ನು ಕಾಣಬಹುದು.

Leave a Reply