ಯಶ್ಪಾಲ್‌ ಸುವರ್ಣಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಮಹಮ್ಮದ್‌ ಶಫಿ ಬಂಧನ

ಬಂಧಿತ ಆರೋಪಿಯನ್ನು ಮಂಗಳೂರಿನ ಬಜ್ಪೆ ನಿವಾಸಿ ಮಹಮ್ಮದ್‌ ಶಫಿ (26) ಎಂದು ಗುರುತಿಸಲಾಗಿದೆ.

ಕೆಲ ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿಯವರಾದ ಯಶ್‌ಪಾಲ್ ಸುವರ್ಣ ರವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾರಿಗುಡಿ 6 ಎಂಬ ಇನ್ಸ್ಟಾಗ್ರಾಮ್  ಖಾತೆಯ ಮೂಲಕ ಕಿಡಿಗೇಡಿಗಳು ಯಶಪಾಲ್ ಸುವರ್ಣರನ್ನು ಹತ್ಯೆಗೈದವರಿಗೆ ಹತ್ತು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಕೊಲೆ ಬೆದರಿಕೆ ಹಾಕಿದ್ದು, ಈ ಹಿನ್ನೆಲೆಯಲ್ಲಿ, ಬಿ.ಜೆ.ಪಿ, ಪಕ್ಷದ ಕಾಪು ವಿಧಾನಸಭಾ ಕ್ಷೇತ್ರದ ಯುವಮೋರ್ಚಾದ ಅಧ್ಯಕ್ಷರಾದ ಉದ್ಯಾವರ ಗ್ರಾಮದ ಸಚಿನ್‌ ಸುವರ್ಣ ಎಂಬವರು ನೀಡಿದ ದಿನಾಂಕ: 08/06/2022 ರಂದು ಕಾಪು ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಆಕ್ರ:59/2022 ಕಲಂ:505(2), 507 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. 

ಕರಾವಳಿ ಭಾಗದ ಸಾರ್ವಜನಿಕರಲ್ಲಿ ಹಾಗೂ ಇಡೀ ರಾಜ್ಯದ ಜನರಲಿ, ಬಹಳ ಚರ್ಚೆಗೆ ಆಸ್ಪದವಾದ ವಿಚಾರ ಇದಾಗಿತ್ತು. ಪ್ರಕರಣ ದಾಖಲಾದ ತಕ್ಷಣ ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಸ್. ವಿಜಯ್‌ ಪ್ರಸಾದ್‌ ರವರು ಉಡುಪಿ ಜಿಲ್ಲಾ, ಸೈಬರ್ ಪೊಲೀಸ್ ಠಾಣಾ ನಿರೀಕ್ಷಕರಾದ ಮಂಜುನಾಥ ಹಾಗೂ ಸಿಬ್ಬಂದಿಗಳು ಮತ್ತು ಆರ್.ಡಿಸಿ, ವಿಭಾಗದ ಸಿಬ್ಬಂದಿ ದಿನೇಶ್‌ ರವರ ಸಹಾಯದಿಂದ ಆಧುನಿಕ ತಂತ್ರ ಜ್ಞಾನವನ್ನು ಬಳಸಿ ಬೆದರಿಕೆ ಪೋಸ್ಟ್ ಗಳನ್ನು ಹಾಕುತ್ತಿದ್ದವನು ಮಹಮ್ಮದ್ ಶಾಫಿ ಬಜ್ಪೆ, ಗ್ರಾಮ ಮಂಗಳೂರು ಎಂಬುದಾಗಿ ಮಾಹಿತಿಯನ್ನು ಸಂಗ್ರಹಿಸಿರುತ್ತಾರೆ.

ನಂತರದಲ್ಲಿ ವಿಷ್ಣುವರ್ಧನ್, ಐಪಿಎಸ್, ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ಮತ್ತು ಎಸ್.ಟಿ, ಸಿದ್ಧಲಿಂಗಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಕಾಪು ಸಿಪಿಐ ಪ್ರಕಾಶ್ ರವರ ನೇತೃತ್ವದಲ್ಲಿ, ಕಾಪು ಪಿಎಸ್‌ಐ ಶೈಲ ಡಿ.ಎಂ, ಹಾಗೂ ಸಿಬ್ಬಂದಿಯವರಾದ ಪ್ರವೀಣ, ನಾರಾಯಣ, ರಾಜೇಶ್, ಹೇಮರಾಜ್ ರವರ ಒಂದು ವಿಶೇಷ ತಂಡವನ್ನು ರಚಿಸಿದ್ದು, ತಂಡವು ಆರೋಪಿ ಮೊಹಮ್ಮದ್ ಶಾಫಿಯನ್ನು ಬಜ್ಪೆ ತಾರಿಕಂಬಳ ಬಸ್‌ ನಿಲ್ದಾಣದ ಬಳಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.

ಪ್ರಕರಣದ ತನಿಖೆಯ ಸಮಯ ಆರೋಪಿತ ಮಹಮ್ಮದ್ ಶಾಫಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತಾನು ಸ್ನೇಹಿತ ಆಸಿಫ್ ಸೇರಿಕೊಂಡು  ಮಾರಿಗುಡಿ 6 ಎಂಬ ಇನ್ಸ್ಟಾಗ್ರಾಮ್ ಪೇಜ್ ನ್ನು ಸುಮಾರು 6 ತಿಂಗಳ ಹಿಂದೆ ತೆರೆದಿದ್ದಾಗಿ, ಉಡುಪಿಯ ಯಶ್ ಪಾಲ್ ಸುವರ್ಣ ಹಾಗೂ ಪ್ರಮೋದ್ ಮುತಾಲಿಕ್ ರವರ ಫೋಟೋ ಇರುವ ಪೋಸ್ಟ್ ನು ಸೃಷ್ಟಿಸಿ ಅದರಲ್ಲಿ, ಈ ಎರಡು ಹಂದಿಗಳ ತಲೆ ಕಡಿದರೆ 20 ಲಕ್ಷ, ಒಂದು ತಲೆಗೆ 10 ಲಕ್ಷ. ರೂಪಾಯಿ ಘೋಷಣೆ, ನಿಮ್ಮ ಖಾತೆಗೆ ಜಮಾ ಆಗುತ್ತೆ ಎಂದು ಪೊಸ್ಟ್ ಕಾರ್ಡ್ ತಯಾರಿಸಿ ಪೋಸ್ಟ್ ಮಾಡಿದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಪ್ರಕರಣದ ತನಿಖೆ ತೀವ್ರ ಗತಿಯಲ್ಲಿ ಸಾಗುತ್ತಿದೆ.

 

ಇನ್ನೊಬ್ಬ ಆರೋಪಿ ಆಸಿಪ್ ಎಂಬಾತನ ಬಂಧನಕ್ಕೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೆಚ್ಚುವರಿ ಎಸ್ಪಿ ಎಸ್‌ ಟಿ ಸಿದ್ದಲಿಂಗಪ್ಪ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

 
 
 
 
 
 
 
 
 
 
 

Leave a Reply