ಬಾಳೆಕುದ್ರು ಮಠದ ವತಿಯಿಂದ ಸ್ಥಳೀಯ ಶಾಲೆಗಳಿಗೆ ನೋಟ್ ಬುಕ್ ವಿತರಣೆ

ಕೋಟ: ಮಕ್ಕಳಿಗೆ ಸಂಸ್ಕಾರ ನೀಡುವ ಜವಾಬ್ದಾರಿ ಬಹುಪಾಲು ಪೋಷಕರದ್ದು ಈ ನಿಟ್ಟಿನಲ್ಲಿ ಅಡ್ಡದಾರಿ ತುಳಿಯದಂತೆ ನೋಡಿಕೊಂಡು ಸಂಸ್ಕಾರಯುತವಾಗಿ ಬೆಳೆಸಿ ಎಂದು ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠ ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದ್ದಾರೆ

ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠದ ವತಿಯಿಂದ ಸ್ಥಳೀಯ ಶಾಲೆಗಳಿಗೆ ನೋಟ್‌ಬುಕ್ ವಿತರಿಸುವ ಸಮಾರಂಭದಲ್ಲಿ ಆಶ್ರೀðವಚನ ನೀಡಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ನೈಜ ಜೀವನದಲ್ಲಿ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಿ ಹೆಜ್ಜೆ ಇರಿಸಿಬೇಕಾಗಿದೆ.

ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಕೆಟ್ಟ ದಾರಿಗೆ ಹಿಡಿಯುವುದನ್ನು ನಾವುಗಳು ಕಾಣುತ್ತಿದ್ದೇವೆ ಒಳ್ಳೆಯ ಅಭ್ಯಾಸಗಳು ಬರುವುದು ಅತಿ ವಿರಳ ಇದಕ್ಕೆ ಕಾರಣ ಶಿಕ್ಷಕರಲ್ಲ ಬದಲಾಗಿ ಪೋಷಕರು, ಮಕ್ಕಳ ಆಗುಹೋಗುಗಳ ಬಗ್ಗೆ ಗಮನಹರಿಸದಿದ್ದು ಕಾರಣವಾಗಿದೆ.

ಮಕ್ಕಳಲ್ಲಿ ಶಿಕ್ಷಣದ ಜೊತೆ ಧಾರ್ಮಿಕ ಪ್ರಜ್ಞೆ ಬೆಳೆಸಬೇಕು ಆ ಮೂಲಕ ಸುಸಂಸ್ಕöÈತರಾಗಿ ಮಾಡಲು ಸಾಧ್ಯವಾಗಿತ್ತದೆ.

ರ್ದುಜ್ಜನರ ಸಹವಾಸ ಮಾಡದೆ ಸಜ್ಜನರೊಂದಿಗೆ ಬೆರೆತು ತಮ್ಮ ಅಡಿಪಾಯಗಳನ್ನು ಗಟ್ಟಿಗೊಳಿಸಿ ಎಂದರಲ್ಲದೆ ಶಿಕ್ಷಣದ ಮೂಲಕ ಉನ್ನತಿ ಗಳಿಸಿ ತಮ್ಮೂರಿನ ಗೌರವ ಘನತೆಯನ್ನು ಎತ್ತಿಹಿಡಿಯಿರಿ ಎಂದು ಆಶ್ರಿçÃðವದಿಸಿದರು.

ಕಾರ್ಯಕ್ರಮದ ಪ್ರಮುಖ ಶಾಲೆಯ ಶಿಕ್ಷಕರಿಂದ ಫಲಪುಷ್ಭದ ಮೂಲಕ ಗುರುವಂದನೆ ಸಲ್ಲಿಸಲಾಯಿತು.

ಮುಖ್ಯ ಅಭ್ಯಾಗತರಾಗಿ ಐರೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಶೆಟ್ಟಿ,ಸಾಂಸ್ಕöÈತಿಕ ಚಿಂತಕಿ ರಶ್ಮಿಪುಷ್ಭರಾಜ್ ಕುಂದಾಪುರ,ನಿವೃತ್ತ ಅಂಚೆ ಇಲಾಖೆಯ ಅಧಿಕಾರಿ ಮಾಧವ ಕಾರ್ವಿ,ಕೋಟೇಶ್ವರ ಗುರುಕುಲದ ಶಿಕ್ಷಣ ಸಂಸ್ಥೆಯ ಶಿಕ್ಷಕ ರಾಮಪ್ರಸಾದ್,ಹಂಗಾರಕಟ್ಟೆ ದೂಳಂಗಡಿ ಶಾಲೆಯ ಮುಖ್ಯ ಶಿಕ್ಷಕಿ ಶೇಷು ಟೀಚರ್,ಹಂಗಾರಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪತ್ರಕರ್ತ ರವೀಂದ್ರ ಕೋಟ ಸ್ವಾಗತಿಸಿ ನಿರೂಪಿಸಿ ವಂದಿಸಿದರು.ಶ್ರೀಮಠದ ಮ್ಯಾನೇಜರ್ ಮುಂಜುನಾಥ ಭಟ್ ಸಹಕರಿಸಿದರು.

 
 
 
 
 
 
 
 
 
 
 

Leave a Reply